WhatsApp Image 2024-03-15 at 1.08.22 PM

ನೆಲಜೇರಿ ಗ್ರಾ.ಪಂ : ಫಲಾನುಭವಿಗಳಿಗೆ ಮನೆಗಳ ಆದೇಶ ಪ್ರತಿ ಹಂಚಿಕೆ

ಕರುನಾಡ ಬೆಳಗು ಸುದ್ದಿ

ಕುಕನೂರು,15- ತಾಲೂಕಿನ ನೆಲಜೇರಿ ಗ್ರಾಮ ಪಂಚಾಯತಿಯಲ್ಲಿ ಗುರುವಾರ ದಿವಸ ಬಸವ ವಸತಿ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ಗ್ರಾಮ ಪಂಚಾಯತ್ ಕಾರ್ಯಾಲಯದ ವತಿಯಿಂದ ಮನೆಗಳನ್ನು ನಿರ್ಮಿಸಿಕೊಳ್ಳಲು ಆದೇಶ ಪ್ರತಿ ನೀಡಲಾಯಿತು.

ನಂತರ ಕಾರ್ಯಕ್ರಮವನ್ನು ಉದ್ದೇಶಿ ಪಿಡಿಒ ಪರಶುರಾಮ್ ನಾಯಕ ಮಾತನಾಡಿ ಪ್ರತಿಯೊಬ್ಬ ಫಲಾನುಭವಿಗಳು 90 ದಿನದ ಒಳಗಾಗಿ ಮನೆಗಳನ್ನು ನಿರ್ಮಿಸಿಕೊಳ್ಳಿ. ಮನೆಗಳನ್ನು ನಿರ್ಮಿಸಿಕೊಳ್ಳುವಲ್ಲಿ ಏನಾದರೂ ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತನ್ನಿ. ಪ್ರತಿಯೊಬ್ಬರೂ ಬೇಗ ಬೇಗನೆ ಮನೆಯನ್ನು ನಿರ್ಮಿಸಿಕೊಳ್ಳಿ ಜೊತೆಗೆ ನರೇಗಾ ಯೋಜನೆಯ ಕಾಮಗಾರಿಗಳನ್ನು ಕೂಡ ಸದುಪಯೋಗ ಪಡೆದುಕೊಳ್ಳಿ. ಬಿಸಿಲಿನ ಅಭಾವ ಇರುವುದರಿಂದ ನೀರನ್ನು ಮಿತವಾಗಿ ಬಳಸಿ ನೀರನ್ನು ಸಂರಕ್ಷಿಸಿ ನೀರು ಪೋಲಾಗದಂತೆ ತಡೆಯಬೇಕಾದದ್ದು ನಮ್ಮೆಲ್ಲರ ಮತ್ತು ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುನಾಥ್ ಆರ್ ಚನ್ನ ದಾಸರು, ಉಪಾಧ್ಯಕ್ಷರಾದ ಗೌರಮ್ಮ ಆರ್ ತಳವಾರ್, ವಿಜಯಲಕ್ಷ್ಮಿಎಸ್ ಟನಕನಕಲ್, ಶೇಖರಪ್ಪ ಈ ಹೊಸೂರ್, ದುರ್ಗವ್ವ ಡಿ ನೂತಲ ಘಂಟಿ, ದುರ್ಗವ್ವ ಡಿ ಅಮಲಚಟ್ಟಿ, ಶೇಖರಪ್ಪಎಸ್ ಕೊಳಜಿ, ಉಮೇಶ್ ಎಸ್ ಮಾ, ಪಾಟೀಲ್, ಶ್ರೀಕಾಂತಮ್ಮ ಹೆ ಬಡಿಗೇರ್. ಗ್ರಾಮ ಪಂಚಾಯತಿ ಕಾರ್ಯದರ್ಶಿ ಫಕೀರಪ್ಪ ಮೂಲಿಮನಿ ಕರಾವಸೂಲಿಗಾರ ಯಮನೂರಪ್ಪ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಾರ್ವಜನಿಕರು ಗುರುಹಿರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!