ಪಂಚಮಸಾಲಿ ಸಮಾಜದಿಂದ ಹಾಸಿಗೆ ವಿತರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12 – ಹೊಸೂರು ಅಡ್ಡ ರಸ್ತೆಯಲ್ಲಿರುವ ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗೆ ಪುನರ್ ವಸತಿ ಕಲ್ಪಿಸುತ್ತಿರುವ ಕೇಂದ್ರಕ್ಕೆ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕದ ವತಿಯಿಂದ 30 ಜೊತೆ ಹಾಸಿಗೆಗಳನ್ನು ದೇಣಿಗೆ ನೀಡಿದರು.
ಶುಕ್ರವಾರ ಬೆಳಿಗ್ಗೆ ಕೇಂದ್ರ ದಲ್ಲಿ ವಿತರಿಸಿದ ಅಮಾಜ್ ಮುಖಂಡರ ಸಮಾಜ ಸೇವೆ ಶ್ಲಾಘನೀಯ ವಾಗಿದೆ ಸಹಾಯ ಮಾಡಲು ಅವಕಾಶ ಕಲ್ಪಿಸಿದ ಸಂಸ್ಥೆಗೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ಹಂಚಿನಾಳ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ. ಎಸ್.ಹಂಚಿನಾಳ, ಜಿಲ್ಲಾ ಗೌರವಾಧ್ಯಕ್ಷೆ ಶಿವಲೀಲಾ ಪಾಟೀಲ್, ತಾಲೂಕು ಗೌರವಾಧ್ಯಕ್ಷೆ ರತ್ನಾ ಪಾಟೀಲ್, ತಾಲೂಕು ಉಪಾಧ್ಯಕ್ಷೆ ಗೀತಾ ಹಟ್ಟಿ,ಇನ್ನರ್ ವೀಲ್ ಸಂಸ್ಥೆಯ ರಾಧಾ ಕುಲಕರ್ಣಿ,ನೀತಾ ತಂಬ್ರಳ್ಳಿ,ರೂಪಲ್ ಗಾಲಾ ಹಾಗೂ ಪಂಚಮಸಾಲಿ ಸಮಾಜದ ಜಯಶ್ರೀ ಗುಂಜಾಳ ಉಪಸ್ತಿತರಿದ್ದರು.ಎಲ್ಲರಿಗೂ ಶಿವಲೀಲಾ ಪಾಟೀಲ್ ಅವರು ಧ್ಯಾನದ ಬಗ್ಗೆ ಮಾಹಿತಿ ನೀಡಿದರು.

