WhatsApp Image 2024-06-05 at 2.40.41 PM

ಪರಿಸರ ಸಂರಕ್ಷಿಸಲು ಪ್ರತಿಯೊಬ್ಬರು ಗಿಡ ಮರ ಬೆಳೆಸಿ : ಹಾಜಿ ಹುಸೇನ್ ಸಾಬ್

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 5- ಜಾಗತಿಕವಾಗಿ ಬಿಸಿಲು ತಾಪಮಾನ ವನ್ಯ ಜೀವಿ ಗಳಿಗೆ ಮತ್ತು ಪರಿಸರ ಸಂರಕ್ಷಿಸಲು ಪ್ರತಿಯೊಬ್ಬರು ಸಸಿ ನೆಡುವ ಮೂಲಕ ಗಿಡ ಮರ ಬೆಳೆಸಬೇಕು ಎಂದು ಪ್ರಥಮ ದರ್ಜೆ ನ್ಯಾಯಾಲಯದ ದಂಡಾಧಿಕಾರಿ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ಅಭಿಪ್ರಾಯಪಟ್ಟರು.

ಸಿರುಗುಪ್ಪ ನಗರದ ವಿಶ್ವ ಜ್ಯೋತಿ ಶಾಲಾ ಆವರಣದಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ಅರಣ್ಯ ಇಲಾಖೆ ಬಳ್ಳಾರಿ ಅರಣ್ಯ ವಿಭಾಗ ಪೌರಾಡಳಿತ ನಿರ್ದೇಶನಾಲಯ ನಗರಸಭಾ ಸಿರುಗುಪ್ಪ ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಿದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಸಸಿ ನೆಡುವ ಮೂಲಕ ಸಸಿಗೆ ನೀರು ಹಾಕಿ ಅವರು ಮಾತನಾಡುತ್ತಾ ಸಿರುಗುಪ್ಪ ತಾಲೂಕಿನಲ್ಲಿ10 ಸಾವಿರ ಸಸಿ ನೆಡುವ ಮೂಲಕ ಗಿಡ ಮರ ಬೆಳೆಸಬೇಕು ಪರಿಸರ ಸಂರಕ್ಷಣೆಗೆ ಜಾಗೃತಿ ಅರಿವು ಮೊದಲ ಬಾರಿಗೆ ಜೂನ್ 5 1973 ರಿಂದ ಭಾರತ ದೇಶ ಸೇರಿ ಪ್ರಪಂಚದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ ಎಂದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಸರ ಸಂರಕ್ಷಿಸಲು ಗಿಡ ಮರ ಬೆಳೆಸಲು ಪ್ರತಿಜ್ಞ ವಿಧಿಯನ್ನು ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಶಾರದಾ, ವಕೀಲರ ಸಂಘದ ಅಧ್ಯಕ್ಷ ಎಸ್ ಮಂಜುನಾಥಗೌಡ , ಕಾರ್ಯದರ್ಶಿ ಹೆಚ್ ಪ್ಯಾಟೇ ಗೌಡ, ಪ್ಯಾನಲ್ ವಕೀಲರಾದ ಮಲ್ಲಿ ಗೌಡ, ವೆಂಕಟೇಶ್ ನಾಯಕ , ಹೆಚ್ ಕೆ ರಾಮಪ್ಪ, ಕೆ ಸಣ್ಣ ಹುಸೇನ್, ಅರಣ್ಯ ಇಲಾಖೆ ಅಧಿಕಾರಿಗಳು ನಗರ ಸಭೆಯ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಮತ್ತಿತರ ಗಣ್ಯರು ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ಶಿಕ್ಷಕಿಯರು ಇದ್ದರು ಪ್ಯಾನಲ್ ವಕೀಲರು ಸಂಪನ್ಮೂಲ ವ್ಯಕ್ತಿಗಳಾದ ಎನ್ ಅಬ್ದುಲ್ ಸಾಬ್ ಅವರು ಪರಿಸರ ಸಂರಕ್ಷಣೆ ಕುರಿತು ಗಿಡ ಮರ ಬೆಳೆಸುವ ಬಗ್ಗೆ ಮತ್ತು 1973 ರಲ್ಲಿ ಪ್ರತಿ ವರ್ಷ ಜೂನ್ 5 ರಂದು ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ ನಮ್ಮ ಭೂಮಿ ನಮ್ಮ ಭವಿಷ್ಯ ಕಾಡು ಬೆಳೆಸಿ ನಾಡು ಉಳಿಸಿ ಪರಿಸರ ಸಂರಕ್ಷಿಸಲು ಗಿಡಮರ ಬೆಳೆಸಿರಿ ನಮ್ಮಲ್ಲಿರುವ ಪರಿಸರವನ್ನು ನಾವೇ ಸಂರಕ್ಷಿಸೋಣ ಎಂದು ಅವರು ಮಾತನಾಡುತ್ತಿದ್ದರು .

Leave a Reply

Your email address will not be published. Required fields are marked *

error: Content is protected !!