WhatsApp Image 2024-07-05 at 3.06.12 PM

ಪುರುಷೋತ್ತಮ ಹಂದ್ಯಾಳು, ರಾಧಿಕಾ ಬೇವಿನಕಟ್ಟಿಗೆ

ರಂಗ ಸಂಗಮ ಕಲಾ ವೇದಿಕೆಯ ಜಂಗಮಶೆಟ್ಟಿ ರಂಗ ಪ್ರಶಸ್ತಿ

ಕರುನಾಡ ಬೆಳಗು ಸುದ್ದಿ
ಬಳ್ಳರಿ, 5- ಪುರುಷೋತ್ತಮ ಹಂದ್ಯಾಳು, ಹಾಗೂ ರಾಧಿಕಾ ಬೇವಿನಕಟ್ಟಿ ಆಯ್ಕೆ ರಂಗ ಸಂಗಮ ಕಲಾ ವೇದಿಕೆ ನೀಡುವ ಪ್ರತಿಷ್ಠಿತರಾಜ್ಯ ಮಟ್ಟದ 11ನೇ ವರ್ಷದ ವಾರ್ಷಿಕ “ಶ್ರೀ ಎಸ್.ಬಿ.ಜಂಗಮಶೆಟ್ಟಿ ರಂಗಪ್ರಶಸ್ತಿಗೆ ” ಹಿರಿಯರಂಗ ಪ್ರತಿಭೆ ಬಳ್ಳಾರಿಯ ಪುರುಷೋತ್ತಮ ಹಂದ್ಯಾಳು ಅವರು ಮತ್ತು “ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ವೃತಿ ರಂಗಭೂಮಿಯ ನಟಿ ರಾಧಿಕಾ ವಿ. ಬೇವಿನಕಟ್ಟಿ ಅವರು ಆಯ್ಕೆಯಾಗಿದ್ದಾರೆ.
ಪುರುಷೋತ್ತಮ ಹಂದ್ಯಾಳು ಇವರು ಬಳ್ಳಾರಿ ತಾಲ್ಲೂಕಿನ ಹಂದ್ಯಾಳು ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ, ವೃತ್ತಿಯಲ್ಲಿ ಪತ್ರಿಕಾ ಛಾಯಾಗ್ರಾಹಕರಾದ ಇವರು ಮೂವತ್ತುಮೂರು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆೆ. ತಮ್ಮ ಶಾಲಾ ದಿನಗಳಲ್ಲಿಯೇ ರಂಗಭೂಮಿಗೆ ಪ್ರವೇಶಿಸಿದರು.
ಬಿ.ವಿ ಈಶ ಅವರ ಆಶಾ-ಲತಾ, ಮತ್ತೊಂದು-ಕುರುಕ್ಷೇತ್ರ, ಧನಿಕರ ದೌರ್ಜನ್ಯ, ಕರ್ತವ್ಯದ ಕಾಣಿಕೆ, ಮಹಿಮಾಪುರ,(ಪ್ರಸನ್ನ) ಕುಂಕುಮ ತಂದ ಕೈಲಾಸ, ಧರಿತ್ರಿ, ಧನಕಾಯೋರು ದೊಡ್ಡಾಟ, ಸೇರಿದಂತೆ ಮುಂತಾದ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷವಾಗಿ ನೂರಾರು ಪ್ರದರ್ಶನ ಕಂಡ ರಕ್ತರಾತ್ರಿ ನಾಟಕದಲ್ಲಿಯ ಶಕುನಿ ಪಾತ್ರದ ಇವರ ವಿಶಿಷ್ಟ ಅಭಿನಯಕ್ಕೆ “ಅಭಿನವ ಶಕುನಿ” ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಶಕುನಿಯ ಇವರ ಅಭಿನಯವನ್ನು ಹಿರಿಯ ರಂಗ ಕಲಾವಿದರು ಸೇರಿದಂತೆ ನಾಡೋಜ ಬೆಳಗಲ್ಲು ವೀರಣ್ಣನವರು ಹಾಗೂ ನಾಡೋಜ ಸುಭದ್ರಮ್ಮ ಮನ್ಸೂರ್ ರವರು ಮುಕ್ತ ಕಂಠದಿಂದ ಹೊಗಳಿದ್ದಾರೆ. ಬಳ್ಳಾರಿಯ ಕಾರಾಗೃಹದ ಖೈದಿಗಳ ಮನಃಪರಿವರ್ತನೆಗಾಗಿ ಖೈದಿಗಳಿಗಾಗಿ ನಾಟಕ ನಿರ್ದೇಶನವನ್ನು ಮಾಡಿ ಅಭಿನಯಸಿದ್ದಾರೆ. ಕರೋನದ ಸಂಕಷ್ಟದ ಕಾಲದಲ್ಲಿ ಬಳ್ಳಾರಿಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಜನಜಾಗೃತಿಗಾಗಿ ಕಿರುಚಿತ್ರ ನಿರ್ಮಿಸಿ ಅಭಿನಯಿಸಿದ್ದಾರೆ. ಕನ್ನಡದ ಧಾರಾವಾಹಿಗಳಲ್ಲೂ ಪುರುಷೋತ್ತಮ ಅವರು ಅಭಿನಯಿಸಿದ್ದಾರೆ. ಶ್ರೀ ಮಹಾದೇವ ತಾತ ಕಲಾ ಸಂಘವನ್ನುನ ಸ್ಥಾಪಿಸಿಕೊಂಡು, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪೌರಾಣಿಕ, ಭಕ್ತಿ ಪ್ರಧಾನ, ಸಾಮಾಜಿಕ ನಾಟಕಳನ್ನು ಪ್ರದರ್ಶಿಸುವ ಮೂಲಕ ಕಲಾಸಕ್ತರ ಮನ ಗೆದ್ದಿದ್ದಾರೆ.
ರಾಧಿಕಾ ವಿ.ಬೇವಿನಕಟ್ಟಿ :  12ನೆಯ ವಯಸ್ಸಿನಲ್ಲಿಯೇ  “ಬಸ್ ಕಂಡಕ್ಟರ್” ನಾಟಕದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ ರಾಧಿಕಾ, ಓದಿದ್ದು ಕಡಿಮೆಯಾದರೂ ಎಂತಹ ಪಾತ್ರಕೊಟ್ಟರು ಒಂದೇ ದಿನದಲ್ಲಿ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸ. ಮದುಮಗಳು, ಕಿತ್ತೂರಚೆನ್ನಮ್ಮ, ಸಂಗ್ಯಾ ಬಾಳ್ಯಾ, ಸಂಪತ್ತಿಗೆ ಸವಾಲ್, ಸಂತ ಸಕ್ಕುಬಾಯಿ, ಜಗಜ್ಯೋತಿ ಬಸವೇಶ್ವರ, ರೈತನ ಮಕ್ಕಳು ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ.
ಇವರು ಸಮರಸಿಂಹಿಣಿ ಬೆಳವಡಿ ಮಲ್ಲಮ್ಮ ನಾಟಕದಲ್ಲಂತೂ ಮಲ್ಲಮ್ಮನ ಪಾತ್ರದಲ್ಲಿತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಕಲಾವೈಭವ ಕಂಪನಿ, ಚಿತ್ತರಗಿ ಕಂಪನಿ, ಹುಚ್ಚೇಶ್ವರ ನಾಟ್ಯ ಸಂಘ, ಕುಮಾರೇಶ್ವರ ನಾಟ್ಯ ಸಂಘ, ಏಣಗಿ ಬಾಳಪ್ಪನವರ ಕಂಪನಿ ಹೀಗೆ ಹಲವಾರು ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸ್ವತಃ ಕಂಪನಿ ಕಟ್ಟಿ, ಹತ್ತು ವರ್ಷ ನಡೆಸಿದ್ದಾರೆ. ಏಣಗಿ ನಟರಾಜಅವರ ನಿರ್ದೇಶನದಲ್ಲಿ‘ಕಿನ್ನರಿ’ ಮತ್ತು “ಇದುಎಂತಾ ಲೋಕವಯ್ಯ” ಧಾರಾವಾಹಿಗಳಲ್ಲಿಯೂಅಭಿನಯಿಸಿದ್ದಾರೆ.
ಈ ಪ್ರಶಸ್ತಿಯ ಅಯ್ಕೆ ಸಮಿತಿಯ ಅಧ್ಯಕ್ಷತೆಯನ್ನು ಎಲ್.ಬಿ. ಶೇಖ್ ಮಾಸ್ತರ್-ಕರ್ನಾಟಕ ನಾಟಕ ಅಕಾಡಮಿಯ ಮಾಜಿ ಅಧ್ಯಕ್ಷರು, ಸದಸ್ಯರುಗಳಾದ- ಎಚ್.ಎಸ್.ಬಸವಪ್ರಭು-ಹಿರಿಯ  ರಂಗಕರ್ಮಿ, ಶ್ರೀಮತಿ ಶಾಂತಾಕುಲಕರ್ಣಿ, ಕರ್ನಾಟಕ ನಾಟಕ ಅಕಾಡಮಿ ಮಾಜಿ ಸದಸ್ಯೆ , ನಾರಾಯಣ ಕುಲಕರ್ಣಿ-ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಬಿ.ಎಚ್.ನಿರಗುಡಿ-ಸದಸ್ಯರು ಪುಸ್ತಕ ಪ್ರಾಧಿಕಾರ ಬೆಂಗಳೂರು, ಡಾ.ವಿಶ್ವರಾಜ ಪಾಟೀಲ್-ರಂಗಕರ್ಮಿಗಳು, ಶ್ರೀಮತಿ ಶಿವಗೀತಾ ಬಸವಪ್ರಭು- ಅಧ್ಯಕ್ಷರುರಂಗ ಸಂಗಮ ಕಲಾ ವೇದಿಕೆ, ಡಾ.ಸುಜಾತಾಜಂಗಮಶೆಟ್ಟಿ ಪ್ರಧಾನ ಕಾರ್ಯದರ್ಶಿಗಳು, ರಂಗ ಸಂಗಮ ಕಲಾ ವೇದಿಕೆ.
ಈ ಪ್ರಶಸ್ತಿ ಪುರಸ್ಕೃತರಿಗೆತಲಾ 10 ಸಾವಿರ ಮೊತ್ತ ಹಾಗೂ ಪ್ರಶಸ್ತಿ ಫಲಕದೊಂದಿಗೆ ಸನ್ಮಾನಿಸಿಲಾಗುವುದು. ಈ ರಾಜ್ಯ ಮಟ್ಟದರಂಗ ಪ್ರಶಸ್ತಿ ಕಾರ್ಯಕ್ರಮಕಲಬುರಗಿಯ ವಿಶ್ವೇಶ್ವರಯ್ಯ ಭವನದಲ್ಲಿಜುಲೈ 18-07-2024 ರಂದು ಜರುಗಲಿದೆ ಎಂದು ರಂಗ ಸಂಗಮ ಕಲಾ ವೇದಿಕೆಯ ಪ್ರದಾನ ಕಾರ್ಯದರ್ಶಿಗಳಾದ ಡಾ.ಸುಜಾತಾಜಂಗಮಶೆಟ್ಟಿ ಯವರು ತಿಳಿಸಿದ್ದಾರೆ.
ಡಾ.ಸುಜಾತಾಜಂಗಮಶೆಟ್ಟಿ ಪ್ರಧಾನ ಕಾರ್ಯದರ್ಶಿ  
ರಂಗ ಸಂಗಮ ಕಲಾ ವೇದಿಕೆ ಕಲಬುರಗಿ.

Leave a Reply

Your email address will not be published. Required fields are marked *

error: Content is protected !!