2c136fae-be38-4577-97e1-318669006cc9

ಚಿಂತ್ರಪಳ್ಳಿ ಗ್ರಾಮದಲ್ಲಿ ಪೆಟ್ರೋಲಿಯಂ ರಿಟೈಲ್ ಜೌಟಲೇಟ್ ಸ್ಥಾಪನೆ : ಆಕ್ಷೇಪಣೆಗೆ ಅವಕಾಶ

ಕರುನಾಡ ಬೆಳಗು ಸುದ್ದಿ

ವಿಜಯನಗರ, 22- ಡಿವಿಜನಲ್ ರಿಟೇಲ್ ಸೇಲ್ಸ್ ಹೇಡ್, ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಬಳ್ಳಾರಿ ( Divisional Retail Sales Head, Indian Oil Corporation Limited, Bellary ) ಇವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಗರಿಬೊಮ್ಮನಹಳ್ಳಿ ಹೋಬಳಿ ಚಿಂತ್ರಪಳ್ಳಿ ಗ್ರಾಮದ ಸರ್ವೆ ನಂಬರ್ 422/*/9 ರಲ್ಲಿ ಪೆಟ್ರೋಲಿಯಂ ರಿಟೈಲ್ ಜೌಟಲೇಟ್ ಸ್ಥಾಪನೆ ಮಾಡಲು ನಿರಪೇಕ್ಷಣಾ ಪ್ರಮಾಣ ಪತ್ರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.

ಈ ಕಂಪನಿಯವರು ಅರ್ಜಿದಾರರಾದ ಶ್ರೀ ಪವಾಡಿ ಹನುಮಂತಪ್ಪ ತಂದೆ ಬಾಲಪ್ಪ.ಬಿ, ವಾರ್ಡ್.ನಂ.22, ಜಿಹೆಚ್‌ಪಿ ಶಾಲೆ ಹತ್ತಿರ, ಆರಳಿಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕು ಇವರನ್ನು ಫ್ರಾಂಚೈಸ್ಸಿಯನ್ನಾಗಿ ನೇಮಕ ಮಾಡಿಕೊಂಡಿರುತ್ತಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಗರಿಬೊಮ್ಮನಹಳ್ಳಿ ಹೋಬಳಿ ಚಿಂತ್ರಪಳ್ಳಿ ಗ್ರಾಮದ ಸರ್ವೆ ನಂಬರ್ 422/*/9 ರಲ್ಲಿ ಪೆಟ್ರೋಲಿಯಂ ರಿಟೈಲ್ ಜೌಟಲೇಟ್ ಸ್ಥಾಪನೆ ಮಾಡಲು ನಿರಪೇಕ್ಷಣಾ ಪ್ರಮಾಣ ಪತ್ರ ನೀಡುವ ಕುರಿತಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಇದ್ದಲ್ಲಿ ಈ ಪ್ರಕಟಣೆ ಪ್ರಕಟಿಸಿದ ದಿನಾಂಕದಿಂದ 10 ದಿನದೊಳಗಾಗಿ ಆಕ್ಷೇಪಣೆಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಇಮೇಲ್ ಐಡಿ: vijayanagaradc@gmail.com ಗೆ ಹಾಗೂ ನೇರವಾಗಿ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎಂಎಜಿ-2 ಶಾಖೆಗೆ ಸಲ್ಲಿಸಲು ಈ ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!