WhatsApp Image 2024-03-15 at 6.11.50 PM

ಪ್ರಪಂಚದಲ್ಲಿ ಗ್ರಾಹಕರೇ ದೇವರು : ನ್ಯಾ. ಹಾಜಿ ಹುಸೇನ್ ಸಾಬ್ ಯಾದವಾಡ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,15- ಮಾರುಕಟ್ಟೆ ಪ್ರಪಂಚದಲ್ಲಿ ಗ್ರಾಹಕರನ್ನೆ ದೇವರು ಎಂದು ಹೇಳುತ್ತಾರೆ ಗ್ರಾಹಕರು ಸಂತೋಷವಾಗಿದ್ದರೆ ಮಾತ್ರ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಅವರ ಸಂತೃಪ್ತಿಯಲ್ಲಿಯೇ ಉದ್ಯಮದ ಲಾಭ ನಷ್ಟಗಳು ನಿರ್ಧಾರವಾಗುತ್ತದೆ ಎಂದು ಸಿವಿಲ್ ನ್ಯಾಯಾಧೀಶರು ಹಾಜಿ ಹುಸೇನ್ ಸಾಬ್ ಯಾದವಾಡ ಅವರು ಹೇಳಿದರು.

ನಗರದ ನಗರಸಭಾ ಸಭಾಭವನದಲ್ಲಿ ತಾಲೂಕು ಆಡಳಿತ ತಾಲೂಕ ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ನಗರಸಭೆ ಇವರ ಸಹಭಾಗಿತ್ವದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನ ಆಚರಣೆಯ ಹಿನ್ನೆಲೆಯಲ್ಲಿ ಹಸಿರು ಸಸಿಗೆ ನೀರು ಹಾಕುವ ಮೂಲಕ ಅವರು ಮಾತನಾಡುತ್ತಾ ವ್ಯಾಪಾರಿಗಳು ಅಥವಾ ಉದ್ಯಮಿಗಳು ಪ್ರತಿಯೊಬ್ಬರು ತಮ್ಮಿಂದ ಸಾಧ್ಯವಾದಷ್ಟು ಗ್ರಾಹಕ ಸ್ನೇಹಿಯಾಗಿರಲು ಪ್ರಯತ್ನಿಸುತ್ತಾರೆ ತಮ್ಮ ಗ್ರಾಹಕರಿಗೆ ಒಳ್ಳೆಯ ಸೇವೆ ಬೇಕು ಎಂದು ಬಯಸುತ್ತಾರೆ.

ಒಂದು ವಸ್ತುವನ್ನು ದುಡ್ಡು ಕೊಟ್ಟು ಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯೂ ಗ್ರಾಹಕ ನೆನೆಸಿಕೊಳ್ಳುತ್ತಾನೆ ಆತನಿಗೆ ತಾನು ಕೊಟ್ಟ ದುಡ್ಡಿಗೆ ಪ್ರತಿಯಾಗಿ ಉತ್ತಮ ಗುಣಮಟ್ಟದ ವಸ್ತುವನ್ನು ನ್ಯಾಯಯುತ ಬೆಲೆಗೆ ಪಡೆದುಕೊಳ್ಳುವ ಎಲ್ಲಾ ಹಕ್ಕು ಇದೆ ವಸ್ತುವಿನ ಗುಣಮಟ್ಟದಲ್ಲಿ ಏನಾದರೂ ವ್ಯತ್ಯಯ ಆದರೆ ಅದನ್ನು ಪ್ರಶ್ನಿಸುವ ಹಕ್ಕು ಆತನಿಗೆ ಇದೆ ಇದನ್ನೇ ಗ್ರಾಹಕರ ಹಕ್ಕು ಎಂದು ಕರೆಯಲಾಗುತ್ತದೆ ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ ಇದಕ್ಕೆ ನ್ಯಾಯಾಲಯವು ಇದೆ ಗ್ರಾಹಕರಿಗೆ ಕಾನೂನು ಇದೆ ಹಕ್ಕುಗಳು ಇದೆ ಎಂಬುವುದು ಗೊತ್ತಿರುವುದಿಲ್ಲ ಆದ್ದರಿಂದಲೇ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ನ್ಯಾಯ ನಿಮ್ಮದು ನೆರವು ನಮ್ಮದು ಎಂದು ಕರೆ ನೀಡಿದರು.

ವಕೀಲರ ತಂಡದ ಹಿರಿಯ ವಕೀಲರಾದ ಎನ್ ಅಬ್ದುಲ್ ಸಾಬ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ 1962ರ ಮಾರ್ಚ್ 15ರಂದು ಜಾನ್ ಎಫ್ ಕೆ ನಡಿಯವರು ಅಮೆರಿಕಾದ ಸೆನೆಟ್ ನಲ್ಲಿ ಗ್ರಾಹಕ ಹಕ್ಕುಗಳನ್ನು ಕಾಪಾಡುವ ಬಗ್ಗೆ ಭಾಷಣ ನೀಡಿ ಮುಖ್ಯವಾಗಿ ಮಾಹಿತಿಯ ಹಕ್ಕು ಸುರಕ್ಷತೆಯ ಹಕ್ಕು ಆಯ್ಕೆಯ ಹಕ್ಕು ಮತ್ತು ದೂರನ್ನು ನೀಡುವ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದರು ಗ್ರಾಹಕರ ಹಕ್ಕುಗಳನ್ನು ಕಾಪಾಡಲು ಭಾರತ ಒಕ್ಕೂಟದಲ್ಲೂ ಈ ಕಾಯ್ದೆಯನ್ನು 1986 ರೂಪಿಸಲಾಗಿದೆ ಎಂದು ಉಪನ್ಯಾಸ ನೀಡಿದರು.

ನಗರಸಭಾ ಪೌರಾಯುಕ್ತ ಎಚ್ಎನ್ ಗುರುಪ್ರಸಾದ್, ನಗರಸಭೆಯ ಅಧಿಕಾರಿ ಅಮರೇಶಪ್ಪ, ರಾಷ್ಟ್ರೀಯ ಸಾಕ್ಷರತಾ ಸದಸ್ಯರು, ಜನಾ ಅಭಿಪ್ರಾಯ ಮುಖಂಡ ಅಬ್ದುಲ್ ನಬಿ, ವಕೀಲರ ಸಂಘದ ಅಧ್ಯಕ್ಷ ಎಸ್ ಮಂಜುನಾಥಗೌಡ, ಕಾರ್ಯದರ್ಶಿ ಹೆಚ್ ಪ್ಯಾಟೆ ಗೌಡ, ಮಲ್ಲಿಗೌಡ, ಆರಂಭದಲ್ಲಿ ವೆಂಕಟೇಶ ನಾಯಕ್, ಪ್ರಾರ್ಥಿಸಿದರು. ನಿರೂಪಣೆ ಸ್ವಾಗತವನ್ನು ಹೆಚ್ ಕೆ ರಾಮಪ್ಪ ಕೆ ಸಣ್ಣ ಹುಸೇನ್ ಅವರು ಸ್ಪಂದಿಸಿದರು. ನಗರಸಭಾ ಎಲ್ಲಾ ಸದಸ್ಯರು ಸಿಬ್ಬಂದಿ ವರ್ಗದವರು ಗ್ರಾಹಕರು ಇದ್ದರು.

Leave a Reply

Your email address will not be published. Required fields are marked *

error: Content is protected !!