ಬಸ್ ನಿಲ್ದಾಣ : ನಂದಿನಿ ಮಿಲ್ಕನಲ್ಲಿ ಜಿಲ್ಲಾಧಿಕಾರಿ ವಂಚಿಸುವ ಯತ್ನ
ಕರುನಾಡ ಬೆಳಗು ಸುದ್ದಿ
ವಿಜಯನಗರ, 11- ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದಾಗಿ ಮಾಹಿತಿ ಪಡೆಯು ಆಸಕ್ತಿಯಿಂದಾಗಿ ಜೂನ್ 8 ರಂದು ಜಿಲ್ಲಾಧಿಕಾರಿ ದಿವಾಕರ್ ಸೈಕಲ್ ಸವಾರಿ ಯನ್ನು ಮುಂಜಾನೆ ೬ ರಿಂದ ಆರಂಭಿಸಿ ನಗರದ ವಿವಿದ ಪ್ರದೇಶಗಳಲ್ಲಿ ಸುತ್ತಾಡಿ , ಸಮಸ್ಯೆಗಳನ್ನು ಕೂಡಲೇ ಪರಿಹರಿಸಲು ಸಂಭಂದ ಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶ ನೀಡಿದ್ದರು.
ಅವರ ಅಂದಿನ ಪ್ರಯಾಣದಲ್ಲಿ ಬಸ್ ನಿಲ್ದಾಣದಲ್ಲಿನ ಸಮಸ್ಯೆಯೂ ಒಂದಾಗಿತ್ತು. ಬಸ್ ನಿಲ್ದಾಣದಲ್ಲಿ ಸ್ವಚ್ಚತೆಯ ಕೊರತೆ, ಶೌಚಾಲಯಗಳಲ್ಲಿ ಬೇಕಾ ಬಿಟ್ಟಿ ಹಣ ವಸೂಲಿ ಮುಂತಾದವುಗಳು ಕೂಡಾ ಆಗಿದ್ದವು. ಅವರು ಕೂಡಲೇ ಸ್ಥಳೀಯ ವಿಭಾಗೀಯ ಅಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿ ಕ್ರಮ ಜರುಗಿಸಲು ಪೌರಾಯುಕ್ತರಿಗೆ ಆದೇಶಿಸಿದ್ದರು. ಜಿಲ್ಲಾಧಿಕಾರಿಯ ಆದೇಶದಿಂದಾಗಿ ಸಾರ್ವಜನಿಕರಿಗೆ ಅನುಕೂಲ ವಾಗಿದೆಯೇ ಎಂದು ನಮ್ಮ ಪತ್ರಿಕೆ ಸ್ಥಳಕ್ಕೆ ಬೇಟಿ ನೀಡಿದಾಗ ಕಂಡು ಬಂದ ಆಂಶಗಳು ಹೀಗಿವೆ:
1) ಶೌಚಾಲಯಕ್ಕೆ ಬೇಟಿನೀಡುವ ಸಾರ್ವಜನಿಕರಿಂದ 10 ರೂ ವಸೂಲಿ ಜೀವಂತ.
2) ಸರ್ಕಾರಿ ಸೌಮ್ಯದ “ನಂದಿನಿ ಪಾರ್ಲರ್” ಎಂದು ಬೋರ್ಡ ಹಾಕಿಕೊಂಡು ಯಾವುದೇ ನಂದಿನಿಯ ಸರಕುಗಳನ್ನು ಇಡದೆ ,ಇರುವುದನ್ನು ಗಮನಿಸಿದ್ದ ಜಿಲ್ಲಾಧಿಕಾರಿ, ಅದರ ಮೇಲೆ ಶೀಘ್ರ ಕ್ರಮ ಕೈಗೊಳ್ಳಲು ಪೌರಾಯುಕ್ತರಿಂದ ಆದೇಶಿಸ ಲಾಗಿತ್ತು. ಆದರೆ ಇಂದು ಅದೇ ಪಾರ್ಲರ್ ಎಕ್ಸಪೈರ್ ಆದ ತಿನಿಸುಗಳನ್ನು ತೋರಿಕೆಗೆ ಇಟ್ಟಿದ್ದು, ಹಾಗು (ನಂದಿನಿ)ಯ ಕುಕ್ಕೀಸ್ ಬಾಕ್ಸನ ಮೇಲಿನ ಹಾಳೆ ಕಟ್ ಮಾಡಿ , ನಂದಿನಿ ಪ್ರಾಡಕ್ಟ್ ಗಳನ್ನು ಮಾರಾಟ ಮಾಡುತ್ತಿರುವಂತೆ ತೋರಿಕೆ ಮಾಡುತ್ತಿರುವುದು ಕಂಡುಬಂದಿತು.
