ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ನಿರ್ಧಾರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 25- ದೇಶದಲ್ಲಿ ಕೋಮುವಾದ ರಾಜಕೀಯವನ್ನು ಮಾಡುತ್ತಾ, ಪರಿಶಿಷ್ಟರನ್ನು ತುಳಿಯಲು ಯತ್ನಿಸುತ್ತಿದ್ದ ಬಿಜೆಪಿಯನ್ನು ಅಧಿಕಾರದಿಂದ ಇಳಿಸುವ ಬೇಕು ಎಂದು, ಪರಿಶಿಷ್ಟ ಜಾತಿಯ ಮುಖಂಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಹೇ ಮಾನಯ್ಯ ಆಗ್ರಹ ವ್ಯಕ್ತ ಮಾಡಿದರು.
ಹಿಂದೂ ಅಂಬೇಡ್ಕರ ಸಂಘದ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ, ಈಗಾಗಲೇ ದಲಿತ ಸಮುದಾಯದ ಮುಖಂಡರು ಮತ್ತು ಚಿಂತಕರು ಸೇರಿ ಚರ್ಚಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ತೀರ್ಮಾನಿಸಿದೆ ಎಂದು ಹೇಳಿದರು.
ಅಷ್ಟೇ ಅಲ್ಲದೆ ಸಂವಿಧಾನ ಪರ ಎದ್ದೇ ವೆಂದು ಹೇಳುತ್ತಾ ಬಿಜೆಪಿ ಜನರನ್ನು ಮೋಸ ಮಾಡುತ್ತಿರುವುದಲ್ಲದೆ ಪರಿಶಿಷ್ಟರನ್ನು ತುಳಿಯಲು ಸಂವಿಧಾನ ಬದಲಾವಣೆಯೇ ಅದರ ಗುರಿಯಾಗಿದೆ ಅದಕ್ಕಾಗಿ ಈ ಚುನಾವಣೆಯಲ್ಲಿ ಕೋಮುವಾದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು, ಮತ್ತು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.
ಲೀಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್ ಅವರು ಮಾತನಾಡಿ ಮಾದಿಗ ಬೋವಿ ಮೋಚ ಛಲವಾದಿ ಬಂಜಾರ ಬುಡ್ಡಜಂಗಮ ಮೊದಲಾದ ಪರಿಶಿಷ್ಟ ಸಮುದಾಯಗಳು ಸೇರಿ ಈ ತೀರ್ಮಾನ ತೆಗೆದುಕೊಂಡಿವೆ ಎಂದರು.
ಕೋಮುವಾದಿಗಳು ಈ ದೇಶದಲ್ಲಿ ಆಡಳಿತ ನಡೆಸುವವರಿಗೆ ದಲಿತರಿಗೆ ಅಭದ್ರತೆ ಇದೆ ಅದಕ್ಕಾಗಿ ಕಾಂಗ್ರೆಸ್ಗೆ ಮತ ನೀಡಲು ಮನವಿ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭವಾಗಿ ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರು ಎಲ್ ಮಾರಣ್ಣ, ಎರಿಕುಲ ಸ್ವಾಮಿ, ಮೇಯರ್ ಶ್ವೇತಾ ಸೋಮಶೇಖರ್, ದುರ್ಗಪ್ಪ ತಳವಾರ್, ಹೆಚ್ಚು ಸಿದ್ದೇಶ, ವೆಂಕಟೇಶ್ ಹೆಗಡೆ, ಲಂಬಾಣಿ ಸಮಾಜದ ರಾಮ ನಾಯಕ್, ಸಿದ್ದಣ್ಣ ವೆಂಕಟೇಶ್ ಮೂರ್ತಿ ನರಸಪ್ಪ ಕಂದಕೂರು ರಾಮುಡು ಮೊದಲಾದವರು ಇದ್ದರು.
