ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆ : ಪ್ರವೇಶ ಪ್ರಾರಂಭ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5- ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಯನ್ಸ್ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಗೆ 2024-25ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿರುತ್ತದೆ.
ಮಾನಸಿಕ ನ್ಯೂನ್ಯತೆವುಳ್ಳ ಮಕ್ಕಳಿಗೆ ಶಿಕ್ಷಣ, ಪುನಶ್ಚೇತನ ಸೌಲಭ್ಯ, ಮಾನಸಿಕ ಆರೋಗ್ಯ ತಪಾಸಣೆ, ಪಾಲಕರಿಗೆ ಕಾರ್ಯಾಗಾರ, ವೈದ್ಯಕೀಯ ಸೇವೆಗಳು, ಸಮವಸ್ತç ಮತ್ತು ವಸತಿ ಸೌಲಭ್ಯ ಹಾಗೂ ಸಹಪಠ್ಯ ಚಟುವಟಿಕೆಗಳು ಸಂಪೂರ್ಣವಾಗಿ ಉಚಿತವಾಗಿತ್ತದೆ. ಮಾನಸಿಕ ನ್ಯೂನ್ಯತೆವುಳ್ಳ ಮಕ್ಕಳು ಇದರ ಸಂಪೂರ್ಣ ಉಪಯೋಗ ಪಡೆದುಕೊಳ್ಳಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಭು ಹಿರೇಮಠ, ಮುಖ್ಯೋಪಾಧ್ಯಾಯರು, ಮೋಸಂ.9241372265 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ಎಸ್.ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
