ಅಗಳಕೇರ ಗ್ರಾಮದಲ್ಲಿ

ಬೆಸಿಗೆಯಲ್ಲಿ ನೀರಿನ ವ್ಯವಸ್ಥೆ –
ಶಾಸಕ ಕೆ, ರಾಘವೇಂದ್ರ ಹಿಟ್ನಾಳ

ಕರುನಾಡ ಬೆಳಗು ಸುದ್ದಿ

ಕೊಪ್ಪಳ-  06- ಬರದ ತೀವ್ರರ್ತೆಯಲ್ಲಿ ಸಹ ನೀರಿನ ಕೊರತೆಯಾಗದಂತೆ ಅಧಿಕಾರಿಗಳಿಗೆ ಈಗಾಗಲೇ ಸಚಿವರು ಹಾಗೂ ನಾವುಗಳು ಸೂಚನೆ ನೀಡಿದ್ದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಶಾಸಕ ಕೆ ,ರಾಘವೇಂದ್ರ ಹಿಟ್ನಾಳ ಹೇಳಿದರು.

ಅವರು ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಅಗಳಕೇರ ಬಂಡಿ ಹರ್ಲಾಪುರ್ ಗ್ರಾಮದಲ್ಲಿ ವಿವಿಧ ಯೋಜನೆ ಅಡಿಯಲ್ಲಿ ರಸ್ತೆ ಮುಸ್ಲಿಂ ಶಾದಿ ಮಹಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಹಾಗೂ ಶಾಲಾ ಕೊತ್ತಡಿ ನಿರ್ಮಾಣ ಕಾಮಗಾರಿಗೆ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಗೆ ಕೆಕೆಆರ್ಡಿಬಿ ಹಾಗೂ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಹೆಚ್ಚಿನ ಅನುದಾನವು ಸರ್ಕಾರವು ನೀಡುತ್ತಿದ್ದು ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗೆ ಇದು ಹೆಚ್ಚು ಸಹಕಾರಿಯಾಗುತ್ತಿದ್ದು ರಾಜ್ಯದ ಜನತೆಗೆ ನೀಡಿರುವ ಗ್ಯಾರಂಟಿ ಯೋಜನೆಗಳ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಗೆ ಜನಪ್ರಿಯ ಮುಖ್ಯಮಂತ್ರಿಗ ಸಿದ್ದರಾಮಯ್ಯರವರ ನೀಡುತ್ತಿರುವು ಕೊಡುಗೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಫಲಪ್ರಧವಾಗಿದೆ.ಬರುವ ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿಪರ ಕೆಲಸ ಮಾಡುವ ಸರ್ಕಾರ ಮತ್ತು ನಾಯಕರಿಗೆ ಅಭೂತಪೂರ್ವ ಬೆಂಬಲ ಸೂಚಿಸಿ ಮತ್ತೊಮ್ಮೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಟೀ ಜನಾರ್ಧನ್ ಹುಲಿಗಿ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಶ ಪಲ್ಟನ್ ಬಾಲಚಂದ್ರನ್ ಮುಖಂಡರಾದ ಮಾನ್ವಿ ಪಾಷಾ ಸಲೀಂ ಅಳವಂಡಿ ಸಲಹಾ ಸಮಿತಿ ಅಧ್ಯಕ್ಷಪ್ಪ ಹೊಸಳ್ಳಿ ಚೆನ್ನಕೃಷ್ಣ ವೀರಭದ್ರ ಸ್ವಾಮಿ ಅಳ್ಕೆರಾ ಮಾಜಿ ಜಿಲ್ಲಾ ಪಂಚಾಯತ್ ಎಪಿಎಂಸಿ ಅಧ್ಯಕ್ಷ ವಿಶ್ವನಾಥ್ರಾಜು ನಾಗರಾಜ ಪಟ್ವಾರಿ ನಿಂಗಜ್ಜ ಶಹಪೂರ ಮೊಹಮ್ಮದ್ ಸಾಬ್ ಅಗಳಕೆರ ಉದ್ಯಮಿಗಳು ಚಂದ್ರಶೇಖರ ಮುಸ್ಲಿಂ ಶಾದಿಮಾಲ ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಮದ ಅಧ್ಯಕ್ಷರು ಸದಸ್ಯರು ಗ್ರಾಮದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಭಿಯಂತರರು ಗುತ್ತಿಗೆದಾರರು ಇನ್ನಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!