ಭಾರತವನ್ನು ಜಗತ್ತು ದೊಡ್ಡಣ್ಣ ಎಂದು ಕರೆಯುತ್ತಿದೆ : ಸಂಸದ ಸಂಗಣ್ಣ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,13- ಭಾರತವನ್ನು ಜಗತ್ತು ದೊಡ್ಡಣ್ಣ ಎಂದು ಕರೆಯುತ್ತಿದೆ ನರೇಂದ್ರ ಮೋದಿಜೀಯವರು ಇಡೀ ದೇಶದ್ಯಾಂತ ಇಂದು 9000 ಲಕ್ಷ ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ ಅದರಲ್ಲಿ ಯಲಬುರ್ಗಾ ತಾಲೂಕಿನ ನಿಂಗಲಬಂಡಿ ರೈಲ್ವೆ ಒಂದಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಿಂಗಲಬಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಳಕಲ್ – ನಿಂಗಲಬಂಡಿ ರೈಲ್ವೆ ಸಂಚಾರವನ್ನು ಪ್ರಧಾನ ಮಂತ್ರಿನರೇಂದ್ರ ಮೋದಿಜೀಯವರು ವರ್ಚುವಲ್ ಮಾಲಕ ಉದ್ಘಾಟಿಸುವ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿನ ಬಲಿಷ್ಟ 14 ರಾಷ್ಟ್ರಗಳು , ನಮ್ಮ ಮೋದಿಜೀಯವರನ್ನು ಜಗತ್ತಿನ ನಾಯಕತ್ವ ವಹಿಸಿಕೊಳ್ಳಿ ಎಂದು ಹೇಳುತ್ತೇವೆ.
ಜಗತ್ತಿನ ಏಳು ರಾಷ್ಟಗಳಲ್ಲಿ ಭಾರತ ಒಂದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 400 ಸ್ಥಾನವನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಮಂತ್ರಿ ಆಗಲಿದ್ದಾರೆ.
ಇತ್ತಿಚಿಗೆ ಸದನದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ನಾಚಿಕೆ ಆಗಬೇಕು. ಕಾಂಗ್ರೇಸ್ ನವರು ತೃಷ್ಟಿಕರಣ ರಾಜ ಕಾರಣ ಮಾಡುತ್ತಾರೆ.
ಕೊಪ್ಪಳ ಏತ ನೀರಾವರಿ ಗೆ ಇದು ಅಡಿಗಲ್ಲು ಅಲ್ಲ ಅದು ಅಡ್ಡಗಾಲು ಎಂದು ಲೇವಡಿ ಮಾಡಿದ್ದ ರಾಯರಡ್ಡಿ. ನೈತಿಕತೆ ಇಲ್ಲದೇ ರಾಜಕಾರಣ ಮಾಡುತ್ತಾರೆ. ಕಳೆದ 16 ದಿಂದ ಗಿಣಗೇರಿ ಮೆಹೆಬೂಬ ನಗರ ರೈಲ್ವೆ ಜಾಲನೆ ನೀಡಿದ್ದ ಅಂದಿನ ಪ್ರಧಾನಿ ಹೆಚ್ ಡಿ ದೇವೇಗೌಡ, ಶಾಸಕ ರಾಯರಡ್ಡಿಯರು ಇಂದಿನ ವರಗೆ ಗಿಣಗೇರಿ – ಮಹೆಬೂಬ ನಗರ ರೈಲ್ವೆ ಯೋಜನೆ ಜಾರಿಗೆಗೊಂಡಿಲ್ಲ ಎಂದು ಲೇವಡಿ ಮಾಡಿದರು.
ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ಈಭಾಗದ ಜನರಿಗೆ ಸಂತೋಷದ ದಿನ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಉದ್ಘಾಟನೆ ಆಗಿರುವುದು ನಮ್ಮ ಭಾಗದ ಜನರಿಗೆ ಸಂತಸ ತಂದಿದೆ ಎಂದರು. ಇಚ್ಚಾ ಶಕ್ತಿ ಕೊರತೆಯಿಂದ ಹಿಂದನ ಸರಕಾರ ನೀಡರಲಿಲ್ಲ ನಮ್ಮ ಮೋದಿಜೀಯವರು ನೀಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ನರಕಯಾತನೆ ಅನುಭವಿಸುವಂತಾಗಿತ್ತು ಮೋದಿ ಅವರ ಇಚ್ಚಾಶಕ್ತಿಎಲ್ಲಾ ಇಲಾಖೆಯಲ್ಲಿ ಅಭಿವೃದ್ದಿ ನೋಡುವಂತಾಗಿದೆ. ಭಾರತ ಶಕ್ತಿಯುತ ರಾಷ್ಟ್ರವಾಗಿದೆ. ಎಂದು ಹೇಳಿದರು.
ನಂತರ ಬಿಜೆಪಿ ಜಿಲ್ಲಾಧ್ಯಕ್ಷ ನವಿನ ಕುಮಾರ ಗುಳಗಣ್ಣವರ್ ಮಾತನಾಡಿ, ಗದಗ- ವಾಡಿ ರೈಲ್ವೆ ಮಾರ್ಗ 1941 ಪ್ರಸ್ತಾವನೆಯಾಗಿತ್ತು. ಅವಾಗಿನ ವೆಚ್ಚ1ಕೋಟಿ 41 ಲಕ್ಷ , ಬಿಜೆಪಿ ಸರಕಾರದ ಇಚ್ಚಾಶಕ್ತಿಯಿಂದ
ಮೊದಲು 750 ಕೋಟಿ ಮುಂಜೂರಾಗಿದ್ದು , ROB ರೈಲ್ವೆ ಒವರ್ ಬ್ರಿಜ್ ಆಗುತ್ತವೆ. ರೈಲ್ವೆ ಅಂಡರ್ ಬ್ರಿಜ್
ವಿಕಸಿತ ಭಾರತ ಮೋದಿಜಿಯವರಿಗೆ ಆಶೀರ್ವಾದ ಮಾಡುವ ಮೂಲಕ ಮೋದಿಜಿಯರನ್ನು ಮತ್ತೊಮ್ಮೆಮೋದಿಜಿಯವರು ಪ್ರಧಾನಿಯಾಗಿ ಮಾಡಬೇಕು ಎಂದರು.
ಪ್ರಾಸ್ತಾವಿಕವಾಗಿ ಹುಬ್ಬಳ್ಳಿ ರೈಲ್ವೆ ವಿಭಾಗದ ಹಿರಿಯ ಡಿ ಇ ಹೆಚ್ . ವಿಜಯ ಕುಮಾರ ಮಾತನಾಡಿದರು.
ಹಿರೇಅರಳಹಳ್ಳಿ ಗ್ರಾಪಂ ಅಧ್ಯಕ್ಷೆ ದೇವಮ್ಮ ಭೂತಲರ್ ಅಧ್ಯಕ್ಷತೆ ವಹಿಸಿದ್ದರು.
ವರ್ಚುವಲ್ ಮೂಲಕ ಚಾಲನೆ ನೀಡಿದರು.
ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಹಾಲಪ್ಪ ಆಚಾರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನಕುಮಾರ ಗುಳಗಣ್ಣವರ್, ಉಳುವೇಂದ್ರ ಮಹಾಸ್ವಾಮಿಗಳು, ಹುಬ್ಬಳ್ಳಿ ರೈಲ್ವೆ ವಿಭಾಗದ ರಾಮಲಿಂಗ ನಾಯ್ಕ, ದೇವಯ್ಯ , ಸಿರಿಲ್, ಎಇಇ ಪ್ರಭುಗೌಡ , ಅಭಯಗೌಡ, ಕೆ. ವೆಂಕಟ ಸುಬ್ಬರಾವ್, ಡಿ ಹೆಚ್ ಚನ್ನಬಸಪ್ಪ, ಪಿಡಿ ಹಳ್ಳಿಕೇರಿ, ಬಸವರಾಜ ಮಾಲಗತ್ತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರವಿಂದಗೌಡ ಪಾಟೀಲ್, ಫಕೀರಪ್ಪ ತಳವಾರ, ಗ್ರಾಪಂ ಮಾಜಿ ಅಧ್ಯಕ್ಷ ದೇವೇಂದ್ರಗೌಡ ಮಾಲಿ ಪಾಟೀಲ್, ಶಿವಪ್ಪ ವಾದಿ, ಅಯ್ಯನಗೌಡ ಕೆಂಚಮ್ಮನವರ್, ಮಹಾದೇವಪ್ಪ ಹುಡೇದ, ಮೌನೇಶ ನಂದಿಹಾಳ, ಶೇಖರಗೌಡ ರಮತ್ನಾಳ, ಸಿ ಹೆಚ್ ಪಾಟೀಲ್, ವೀರಣ್ಣ ಹುಬ್ಬಳ್ಳಿ, ಹಿರೇಅರಳಿಹಳ್ಳಿ ಗ್ರಾಪಂ ಅಧ್ಯಕ್ಷೆ ದೇವಮ್ಮ ಭೂತಲ್ ರ, ತಹಸೀಲ್ದಾರ ಬಸವರಾಜ ತೆನ್ನಳ್ಳಿ. ಪುರಸಭೆ ಮಾಜಿ ಅಧ್ಯಕ್ಷ ಜಿಕೆ ಹಿರೇಮಠ, ಮಾರುತಿ ಗೌರಾ, ಶಿವಶಂಕರರಾವ್ ದೇಸಾಯಿ, ಸೇರಿದಂತೆ ಇನ್ನಿತರ ಗಣ್ಯರು ಹಾಗೂ ಗ್ರಾಮದ ಗುರು, ಹಿರಿಯರು ಇದ್ದರು.
