IMG-20240118-WA0007

ಮಕ್ಕಳು ಹೆಚ್ಚು ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು 

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,18- ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕು ಎಂದು ಎಸ್ ಡಿಎಂಸಿ ದುರಗಪ್ಪ ನಡುವಿನಮನಿ ಹೇಳಿದರು. ತಾಲ್ಲೂಕಿನ ತುಮರಗುದ್ದಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ 100 ದಿನಗಳ ಓದಿನ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೂಡಿಸುವವರ ಜೊತೆಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸರ್ಕಾರವು ಮಕ್ಕಳಿಗಾಗಿ 100 ದಿನಗಳ ಕಾಲ ಓದುವ ಆಂದೋಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಇದು ಒಳ್ಳೆಯ ಬೆಳವಣಿಗೆ ಮತ್ತು ಶಿಕ್ಷಕರು ಯಾವ ಮಕ್ಕಳು ಓದುತ್ತಾ ಬರೆಯುವ ಅವರಲ್ಲಿ ಇರುವ ವಿವಿಧ ಪ್ರತಿಭೆಯನ್ನು ಗುರುತಿಸಿ ಎಂದು ಸಲಹೆ ಪಡೆದ ನಂತರ ಶಾಲೆಯ ಎಲ್ಲಾ ಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಷ್ಟ್ರೀಯ ನಾಯಕರು, ಸ್ವಾತಂತ್ರ ಹೋರಾಟಗಾರರು, ಮತ್ತು ದಾರ್ಶನಿಕರು, ಶರಣರ ವೇಷಭೂಷಣ ತೊಟ್ಟು ಜನಮನರ ಪ್ರಶಂಸೆಗೆ ಪಾತ್ರರಾದರು ಮಕ್ಕಳು ವೇಷಭೂಷಣದಲ್ಲಿ ಸುಂದರವಾಗಿ ಕಂಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಚೆಂದಾಲಿಂಗಪ್ಪ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು, ದುರಗಪ್ಪ ನಡುವಿನಮನಿ ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರು ಹುಚ್ಚೀರಪ್ಪ ಬೆಟ್ಟ, ಹಾಗೂ ಸಹ ಶಿಕ್ಷಕರು ಮಲ್ಲನಗೌಡ ಬನ್ನಿಮರದ ನಾಗರಾಜ ಹಳಿಯಾಳ, ಮಾರಯ್ಯ ಎಸ್.ಎನ್. ಕಲ್ಲ ಹಿರೇಮಠ, ಶಿಕ್ಷಕಿಯರಾದ ಸುಮಂಗಲಾ, ಶಮ್ ಶ್ಯಾದ್ ಬೇಗಂ, ನಗ್ಮಾ ಬೇಗಂ, ಪ್ರೇಮಾ, ಶ್ರೀದೇವಿ, ಶಾಂತಾ, ಮಲ್ಲಿಕಾರ್ಜುನ ನಿಡಗುಂದಿ, ರಥಾಂಜಲಿ ಕುಂಬಾರ, ಹನಮಂತ ಗೊರಳ್ಳಿ, ಶ್ವೇತಾ ಪಟ್ಟೇದ, ರೇಣುಕಾ, ಶ್ರೀಮತಿ ಶೈಲಾ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!