ಮಕ್ಕಳ್ಳಿ ಶಿವಾನಂದ ಮಠದಲ್ಲಿ ಭಾರತ ಹುಣ್ಣಿಮೆ ನಿಮಿತ್ಯ 53 ನೇ ಮಾಸಿಕ ಶಿವಾನುಭವ ಗೋಷ್ಠಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,26- ಮಾನವ ಜನ್ಮ ಸಾಥ೯ಕತೆ ಹೊಂದಬೇಕಾದರೆ ಬದುಕಿನ ಹಾದಿ ವಚನ ಸಾಹಿತ್ಯವನ್ನು ವಾಚಿಸದೆ ಆಚರಿಸಿ ಅನುಭವಿಸಬೇಕು ಆನಂದ ರೂಪವಾಗಿ ನಿಲ್ಲುವದೆ ಜೀವನದ ಸಾಥ೯ಕತೆಯ ಮೂಲ ಉದ್ದೇಶ ಎಂದು ಹಷಾ೯ನಂದ ಗುರೊಜಿ ಹೇಳಿದರು.
ತಾಲೂಕಿನ ಮಕ್ಕಳ್ಳಿ ಗ್ರಾಮದ ಶಿವಾನಂದ ಮಠ ಆವರಣದಲ್ಲಿ ಶನಿವಾರ ಸಂಜೆ ಪ್ರತಿ ಹುಣ್ಣಿಮೆಯ ಪ್ರಯುಕ್ತ 53 ನೇ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಜರುಗಿತು.ಶಿವಾನುಭವ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಮಾಹಾದೇವಪ್ಪ ಚೆನ್ನಳ್ಳಿ ಮಾತನಾಡಿ ಅವರು ಮನುಜ ಜನನದ ಲಾಭ ಯ್ಯಾವದು ನಾವೆಲ್ಲರು ಮಾನವ ಜನ್ಮಕ್ಕೆ ಬಂದುದು ನಮ್ಮ ಜೀವನದ ಸಾರ್ಥಕತೆಯನ್ನು ಪಡೆಯುವದೇ ಆಗಿದೆ. ನಾವೂಗಳು ಶರಣರ ಸಹಾಯದಿಂದ ಸದ್ಗುರುಗಳ ಉಪದೇಶದಿಂದ ಸತ್ಕಾರ್ಯಗಳನ್ನು, ಪರೊಪಕಾರ್ಯಗಳನ್ನು ಮಾಡುತ್ತಾ ಪ್ರಪಂಚವನ್ನು ಮಾಡಿ ಮನಸ್ಸಿನಲ್ಲಿನ ಅಹಂಕಾರವನ್ನು ಬಿಟ್ಟು ವ್ಯವಹಾರವನ್ನು ಮಾಡಿದರೆ ನಮ್ಮಗೆ ಯಾವ ಪಾಪವು ತಟ್ಟುವುದಿಲ್ಲ. ನಂತರಾ ನಿಜವಾದ ನಾನು ಯಾರಿದ್ದೇನೆಂದು ತಿಳಿಯಲು ಸದ್ಗುರುವಿಗೆ ಶ್ರದ್ಧಾ ಭಕ್ತಿಯಿಂದ ವಿನಯದಿಂದಲೆ ನಮಿಸಿ ಶ್ರವಣದಿಂದಲೆ ಕೇಳಿ ತಿಳಿದಾಗ ನಾನೇ ಸಚ್ಚಿದಾನಂದ ಪರಬ್ರಹ್ಮ ಆಗಿರುವೆನೆಂದು ಮನಸ್ಸಿನಲ್ಲಿ ತಿಳಿದು ವ್ಯವಹಾರದಲ್ಲಿ ಎಲ್ಲರಂತೆಯೇ, ಸುಖ ದುಃಖದಲ್ಲಿ ಸಮನಾಗಿ ಇರುವುದೇ ನಿಜವಾದ ಆನಂದವಾಗಿದೆ. ಇದೆ ನಿಜವಾದ ನಮ್ಮ ಸ್ವರೂಪದ ಆನಂದವಾಗಿದೆ ಎಂದು ಹೇಳಿದರು.
ಹರ್ಷಾನಂದ ಗುರೂಜಿ ಮಾತನಾಡಿ ಮಾನವ ಜನ್ಮ ಸಾರ್ಥಕತೆ ಬದುಕಿನ ಹಾದಿ ವಚನ ಸಾಹಿತ್ಯವನ್ನು ವಾಚಿಸದೆ ಆಚರಿಸಿ ಅನುಭವಿಸಿ ಆನಂದ ರೂಪನಾಗಿ ನಿಲ್ಲುವದೆ ಬದುಕಿನ ಸಾರ್ಥಕತೆಯ ಮೂಲ ಉದ್ದೇಶವೆಂದರು.
ಮಕ್ಕಳ್ಳಿಯ ಶಿವಾನಂದ ಶ್ರೀಗಳು ಮಾತನಾಡಿ ಮನುಷ್ಯನು ಧಾರ್ಮಿಕ ಪ್ರವಚನ ಶಿವಾನುಭವ ಗೋಷ್ಠಿ ಯಲ್ಲಿ ಪೊಜ್ಯರ ಹೇಳುವ ಮಾತುಗಳನ್ನು ಕೇಳಬೇಕು. ಯಾವುದೇ ಸ್ವಾಥ೯ ಇಲ್ಲದೆ ತನು. ಮನದಿಂದ ಸಮಾಜಸೇವೆ ಮಾಡಬೇಕು ಬದುಕು ಸುಂದರ ಭಾರತ ಬೆಳದಿಂಗಳ ಬಾನಂಗಳಲ್ಲಿ ಚಂದ್ರನು ಎಲ್ಲರಿಗೂ ಬೆಳಕನ್ನು ನೀಡಿ ಚಿಕ್ಕ ಮಕ್ಕಳ ಮನಸ್ಸು ಗೆಲುವ ಶಕ್ತಿ ಬೆಳದಿಂಗಳ ಚಂದ್ರನಿಗೆ ಇದೆ ಮಾದುರ್ಯವಾದ ಬೆಳಕನ್ನು ಹಬ್ಬಿಸಿ ಭೂಮಿಗೆ ತಂಪನ್ನು ಕಲ್ಪಿಸುವಂತೆ ಭಾರತ ಹುಣ್ಣಿಮೆಯ ಚಂದಿರನ ನಿದರ್ಶನದಂತೆ ಮಾನವರಾದ ನಾವೂ ಪ್ರತಿಯೊಬ್ಬರು ನಮ್ಮ ನಮ್ಮ ಬದುಕನ್ನು ಹಸನಗೊಳಿಸಲು ಬಾನಂಗಳ ಬೆಳಗಿದ ಚಂದಿರನಂತೆ ನಮ್ಮ ಮನಸ್ಸು ಕೂಡಾ ಎಲ್ಲರನ್ನೂ ಪ್ರೀತಿಸುವ ಬೆಳದಿಂಗಳಂತಾಗ ಬೇಕು ಅಂದಾಗ ಮಾತ್ರ ಬದುಕು ಸಾರ್ಥಕತೆ ಜೀವನ ನಿರ್ಮಿಸಿ ಕೊಳ್ಳಲು ಸಾಧ್ಯವೆಂದು ಹೇಳಿದರು.
ಅಲ್ಲಸಾಬ ಚಿಕ್ಕಮ್ಯಾಗೇರಿ ಶರಣಪ್ಪ ಬಡಗೇರ ರವರಿಂದ ಸಂಗೀತ ಕಾರ್ಯಕ್ರಮ ಜರುಗಿತು ಬಸವರಾಜ ಗೆದಗೇರಿ ಅನ್ನ ಸಂತರ್ಪಣೆ ನೆರವೇರಿಸಿದರು .
ಈ ಕಾರ್ಯಕ್ರಮದಲ್ಲಿ ಪತ್ರಕರ್ತ ಶ್ರೀಕಾಂತಗೌಡ ಮಾಲಿ ಪಾಟೀಲ್, ನೀಲನಗೌಡ ಹೊಸಮನಿ, ಶರಣಪ್ಪ ಮೇಣೆದಾಳ, ಯಂಕಪ್ಪ ಸರಕ್ಲಿ, ಬೇಟದಪ್ಪ ಸೂಜಿ, ಫಕೀರಗೌಡ ಮಾಲಿ ಪಾಟೀಲ್, ನಾಗಪ್ಪ ಹಂಚಿನ, ಯಂಕೋಬ ಆರೆರು, ಸೇರಿದಂತ ಮತ್ತು ಇತರರು ಭಾಗವಹಿಸಿದ್ದರು.
