2023- 24 ನೇ ಸಾಲಿನ ಮಕ್ಕಳ ಗ್ರಾಮ ಸಭೆ ಮತ್ತು ಮಕ್ಕಳ ಹಕ್ಕುಗಳ ಗ್ರಾಮ ಸಭೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,14- ತಾಲೂಕಿನ ವಣಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮೀಕ ಶಾಲೆಯಲ್ಲಿ 2023- 24 ನೇ ಸಾಲಿನ ಮಕ್ಕಳ ಗ್ರಾಮ ಸಭೆ ಜರುಗಿತು ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನ ಎಸ್.ಡಿ.ಎಂ.ಸಿ.ಅಧ್ಯಕ್ಷ ಖಾಜಾಸಾಬ ಕಬ್ಬಿಣದ ಉಧ್ಘಾಟಿಸಿದರು.
ಮಕ್ಕಳಹಕ್ಕುಗಳ ಕುರಿತು ಸಹ ಶಿಕ್ಷಕ ಮಾಹಂತೇಶ ಹಿರೇಮಠ ಪ್ರಾಸ್ತಾವೀಕ ಮಾತನಾಡಿ ನವೆಂಬರ್ 20 1989 ರಂದು ವಿಶ್ವಸಂಸ್ಥೆಯು ಮುಂದಿಟ್ಟ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನ ಜಗತ್ತಿನ ಬಹುತೇಕ ರಾಷ್ಟ್ರಗಳು ಒಪ್ಪಿಕೊಂಡಿವೆ . ಭಾರತ ಸರ್ಕಾರವು 11 ಡಿಸೆಂಬರ್ 1992ರಲ್ಲಿ ಈ ಒಡಂಬಡಿಕೆಗೆ ಸಹಿ ಮಾಡಿತು 18 ವರ್ಷದೊಳಗಿನವರು ಮಕ್ಕಳೆಂದು ಪರಿಗಣಿಸಲಾಗಿದೆ ಮಕ್ಕಳ ಹಕ್ಕುಗಳ ಒಡಂಬಡಿಕೆ ಸಮಾನ ಪ್ರಾಮುಖ್ಯತೆಯುಳ್ಳ, ಪರಸ್ಪರ ಸಂಬಂಧಿತ ಮತ್ತು ಪರಸ್ಪರ ಅವಲಂಬಿತವಾಗಿರುವ ನಾಲ್ಕು ವಿಧದ ಹಕ್ಕುಗಳಿಗೆ ಪ್ರಾಮುಖ್ಯತೆ ನೀಡಿದೆ ಬದುಕುವ ಹಕ್ಕು ಮಕ್ಕಳ ರಕ್ಷಣೆಯ ಹಕ್ಕು ಮಕ್ಕಳು ವಿಕಾಸ ಹೊಂದುವ ಹಕ್ಕು ಧಾರ್ಮಿಕ ಸಭೆ ಸಮಾರಂಭದಲ್ಲಿ ಭಾಗವಹಿಸುವ ಹಕ್ಕು ,ಮಕ್ಕಳ ನ್ಯಾಯ ಕಾಯ್ದೆ.ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ ಬಾಲ್ಯ ವಿವಾಹ ನಿಷೇದ ಕಾಯ್ದೆ ಮಕ್ಕಳ ಮೇಲಿನ ಲೈಂಗೀಕ ತಡೆ ಅಪರಾದ ಕಾಯ್ದೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕುಗಳನ್ನ ಬಾಲಕಾರ್ಮಿಕ ನಿಷೇದ ಕಾಯ್ದೆಗಳನ್ನ ಜಾರಿಗೆ ತಂದಿದೆ ದೇಶದ ಒಳಿತಿಗಾಗಿ ಮತ್ತು ಅಭಿವೃದ್ಧಿಗಾಗಿ ಮಕ್ಕಳನ್ನು ರಕ್ಷಿಸುವುದು ಹಾಗೂ ಅವರ ಅವಶ್ಯಕತೆಗಳನ್ನು ಪೂರೈಸಿ ಅಭಿವೃದ್ಧಿಗೊಳಿಸುವುದು ಪ್ರತಿಯೊಬ್ಬರ ನಾಗರೀಕರ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು ಈ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಸರಕಾರ ಆದೇಶಿಸಿದೆ. ಗ್ರಾ.ಪಂ.ಗಳನ್ನು ಮಕ್ಕಳ ಸ್ನೇಹಿಯಾಗಿಸಲು ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಗ್ರಾಮಪಂಚಾಯತ ಸದಸ್ಯ ಗುರು ಸಿದ್ದಯ್ಯ ಹಿರೇಮಠ ಹೇಳಿದರು. ಕಾರ್ಯಕ್ರಮದಲ್ಲಿ ಮಕ್ಕಳು ಶಾಲೆಯ ಶೌಚಾಲಯ ,ತಡೆಗೋಡೆಯ ಮೇಲೆ ತಂತಿ ಗ್ಯಾಲರಿ ಅಳವಡಿಸುವದು ಶಿಕ್ಷಕರ ಕೊರತೆ ನಿಭಾಯಿಸುವದು ಶಾಲೆಯಲ್ಲಿ ಕ್ರೀಡಾ ಸಾಮುಗ್ರಿಗಳನ್ನ ಮತ್ತು ಆಟದ ಮೈದಾನ ಒದಗಿಸಿಕೊಡಬೇಕೆಂದು ಸಭೆಯಲ್ಲಿ ಚರ್ಚಿಸಿದರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವೆಂಕಟೇಶ ನಾಯಕ ಮಾತನಾಡಿ ನಮ್ಳ ಪಂಚಾಯತಿಯಿಂದಾಗುವ ಆಗುವ ಕೆಲಸಗಳನ್ನ ಮಾಡಿಸಿ ಕೊಡುವುದಾಗಿ ಹೇಳಿದರು ಕೆಲವು ಯೋಜನೆಗಳನ್ನ ಹಂತ ಹಂತವಾಗಿ ಸಮಸ್ಯ ಬಗೆ ಹರಿಸುವದಾಗಿ ಹೇಳಿದರು.
ಅಂಗನವಾಡಿ ಮೇಲ್ವಿಚಾರಕಿ ಸುಮಾ ಕರಿಗಾರ
ಮುಖ್ಯ ಶಿಕ್ಷಕ ದಯಾನಂದ ಹಿರೇಮಠ ಮತ್ತು ಕಳಕೇಶ ಬಳೆಗಾರ ಹಾಗೂ ಮಹೇಶ ಕಟಗೇರಿ.ಕೆ,ಹೆಚ್ ,ಪಿ,ಟಿ ,ಸಂಸ್ಥೆಯ ಭರಮಗೌಡ ಕಾರ್ಯಕ್ರಮ ಕುರಿತು ಮಾತನಾಡಿದರು ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಂದ ಬಸಪ್ಪ ಭಜಂತ್ರಿ ವಹಿಸಿದ್ದರು ಉಪಾಧ್ಯಕ್ಷ ಬಸವರಾಜ ರಾವಣಕಿ.ಕಾರ್ಯದರ್ಶಿ ಉಮೇಶ ಜೂಲಕಟ್ಟಿ.ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ವಿವಿಧ ಇಲಾಖೆಯ ಸಿಬ್ಬಂದಿಗಳು ಮತ್ತು ಇತರರು ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು
