ಮಕ್ಕಳ ಸೃಜನೆ ಶೀಲತೆ & ಜ್ಞಾನಾರ್ಜನೆಗೆ ಮಕ್ಕಳ ಸಾಹಿತ್ಯ ಸಂಭ್ರಮ ಪೂರಕ: ಜಿ.ಪಂ.ಮುಖ್ಯ ಯೋಜನಾಧಿಕಾರಿ ಮಂಜುನಾಥ ಡಿ
ಕರುನಾಡ ಬೆಳಗು ಸುದ್ದಿ
ಗಿಣಿಗೇರಾ,14- ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ತಾಲೂಕ ಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮ ಮಕ್ಕಳಲ್ಲಿ ರುವ ಸೃಜನಾತ್ಮಕ ಚಟುವಟಿಕೆಗಳನ್ನು ಗುರುತಿಸಲು ಮಕ್ಕಳ ಸಾಹಿತ್ಯ ಸಂಭ್ರಮ ಅವಶ್ಯಕವೆಂದು ಜಿಲ್ಲಾ ಪಂಚಾಯತ ಮಾನ್ಯ ಮುಖ್ಯಯೋಜನಾಧಿಕಾರಿ ಮಂಜುನಾಥ ಡಿ ಹೇಳಿದರು.
ಇಂದು ಗಿಣಿಗೇರಾ ಗ್ರಾಮದ ಮಣ್ಣು, ನೀರು ಸಂರಕ್ಷಣೆ ಕೇಂದ್ರದಲ್ಲಿ ಗಿಣಿಗೇರಾ, ಹಾಲವರ್ತಿ, ಗುಳದಳ್ಳಿ, ಬೇವಿನಹಳ್ಳಿ ಗ್ರಾಮ ಪಂಚಾಯತಿಗಳು, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲೂಕ ಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಲ್ಲಿ ಕಥೆ, ಕವನ ರಚನೆ, ನಾಟಕ ರಚನೆ, ವರದಿಗಾರಿಕೆ ಮತ್ತು ನಿರ್ದೇಶನ ಇತ್ಯಾದಿ ಸೃಜನೆ ಶೀಲನೆಯನ್ನು ಹೆಚ್ಚಿಸಲು ಇಂತಹ ಸಂಭ್ರಮಗಳು ಅವಶ್ಯಕ. ಆ ದಿಸೆಯಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ಹಮ್ಮಿಕೊಂಡಿರುವದು ಸಂತೋಷದ ವಿಷಯ. ಇದರಿಂದ ಮಕ್ಕಳ ಜ್ಞಾನಾರ್ಜನೆ ಹೆಚ್ಚಳವಾಗುವದಲ್ಲದೇ ಮಕ್ಕಳಲ್ಲಿರುವ ಕೌಶಲ್ಯಗಳಿಗೆ ಪ್ರೋತ್ಸಾಹ ದೊರೆತಂತಾಗುತ್ತದೆ ಎಂದರು.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ ಮಕ್ಕಳಲ್ಲಿ ವಿಭಿನ್ನ ಚಟುವಟಿಕೆಗಳಲ್ಲಿ ಆಸಕ್ತಿ ಇರುವ ಕುರಿತು ಸಾಹಿತ್ಯ ಸಂಭ್ರಮವು ಒಂದು ಸದಾವಕಾಶ ಕಲ್ಪಿಸುತ್ತದೆ. ಇಂತಹ ಸಾಹಿತ್ಯ ಸಂಭ್ರಮಗಳು ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಗಿಣಿಗೇರಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮೀ ನೀಲಪ್ಪ ಮೂರಮನಿ, ಉಪಾಧ್ಯಕ್ಷ ಕರಿಯಪ್ಪ ಮೇಟಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಮಂಜುಳಾದೇವಿ ಹೂಗಾರ, ಗುರುಸಿದ್ದಪ್ಪ ಜಾಲವಾಡಿ, ಶಿವಬಸಪ್ಪ ಹಂಚಿನಾಳ, ಗೀತಾಕುಮಾರಿ ಸೇರಿದಂತೆ ವಿವಿಧ ಶಾಲೆಗಳ ಸಿಆರ್ಪಿಗಳು, ಶಿಕ್ಷಕರು, ಶಾಲಾ ಮಕ್ಕಳು ಹಾಜರಿದ್ದರು.
