11gvt1 (1)

ಮಗುವಿನ ಆರೈಕೆಯಲ್ಲಿ ತಾಯಿಯ ಪಾತ್ರ ಮುಖ್ಯ :

ಶಾಸಕ ಗಾಲಿ ಜನಾರ್ಧನರೆಡ್ಡಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ,ಜ೧೧-ಮಗುವಿನ ಆರೈಕೆಯಲ್ಲಿ ತಾಯಿಯ ಪಾತ್ರ ಮುಖ್ಯವಾಗಿರುತ್ತದೆ. ಗರ್ಭಿಣಿ-ಸ್ತಿçಯರಿಗೆ-ಸೀಮಂತ ಕಾರ್ಯ ಶ್ರೇಷ್ಠವಾಗಿದ್ದು ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ ಬೆಂಗಳೂರು ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೊಪ್ಪಳ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಹಾಗೂ ಉಪವಿಭಾಗ ಆಸ್ಪತ್ರೆ ಗಂಗಾವತಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸಾಮೂಹಿಕ ಸೀಮಂತದಲ್ಲಿ ಮಾತನಾಡಿ ಗರ್ಭಿಣಿಯಾದಾಗ ಆಹಾರ, ಶಿಶುವಿನ ಬೆಳವಣಿಗೆ ಗಮನಿಸುವ ಬಗ್ಗೆ ಸಲಹೆ ಸೂಚನೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸೀಮಂತಮಾಡಿ ಅವರಿಗೆ ಮಾರ್ಗದರ್ಶನ ನೀಡುತ್ತಿರುವುದು ಔಚಿತ್ಯಪೂರ್ಣ ಕಾರ್ಯವಾಗಿದೆ.
ತಾಯಿ ಮತ್ತು ಶಿಶು ಮರಣದ ಪ್ರಮಾಣವನ್ನು ತಪ್ಪಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸುರಕ್ಷಾ ಮಾತೃ ಅಭಿಯಾನ ನಡೆಸುತ್ತಿದೆ.
ಗರ್ಭಿಣಿಯರು ಬಿಪಿ,ಶುಗರ್ ಇತರ ಸೋಂಕು ತಡೆಯಲು ವೈದ್ಯರ ಸಲಹೆಯಂತೆ ಔಷಧಿ ತೆಗೆದುಕೊಂಡರೆ ಸುರಕ್ಷಿತ ಹೆರಿಗೆಗೆ ಅನುಕೂಲವಾಗುತ್ತದೆ.
ಉಚಿತವಾಗಿ ಎಲ್ಲಾ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಇದರಿಂದ ತಾಯಿ ಮತ್ತು ಶಿಶುವಿನ ಮರಣದ ಪ್ರಮಾಣ ಕಡಿಮೆಯಾಗುತ್ತದೆ. ಕಾಯಕಲ್ಪ ಪ್ರಶಸ್ತಿ-ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ/ಈಸ್ವರ ಸವಡಿಯವರ ಹಾಗೂ ಅವರ ಟಿಂ ಸಿಬ್ಬಂದಿ ವರ್ಗ ಪರಿಶ್ರಮದಿಂದ ಮೂರು ಬಾರಿ ಕಾಯಕಲ್ಪ ಪ್ರಶಸ್ತಿ ಲಭಿಸಿರುವುದು ಅವರ ಕೆಲಸದ ಶ್ರದ್ದೆ ತೋರಿಸುತ್ತದೆ ಎಂದರು.

            ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ ಮಾತನಾಡಿ ೨೫೦ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಸಿಕೊಟ್ಟಿದ್ದವೆ. ಗರ್ಭಿಣಿಯರು ಆರೋಗ್ಯದಲ್ಲಿ ಏರುಪೇರು ಆದಾಗ ವೈದ್ಯರಲ್ಲಿ ಪರೀಕ್ಷಿಸಿ , ಔಷಧಿಗಳನ್ನು ತೆಗೆದುಕೊಳ್ಳಿ,ಶಾಸಕ ಗಾಲಿ ಜನಾರ್ಧನರೆಡ್ಡಿಯವರು ಅವರ ಅನುದಾನವನ್ನು ಆಸ್ಪತ್ರೆ ಅಭಿವೃದ್ದಿ ಕೆಲಸಕ್ಕೆ ಸದುಪಯೋಗಪಡಿಸಿ ಕೊಳ್ಳಿ ಎಂದು ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ/ಗೌರಿಶಂಕರ್,ಡಾ/ಪ್ರಕಾಶ ಡಾ/ನಂದಕುಮಾರ,ಡಾ/ರವೀAದ್ರನಾಥ,ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ/ಶಶಿಧರ್,ಮುಖಂಡ ಯಮನೂರ ಚೌಡ್ಕಿ,ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳಾದ ಶ್ರೀಧರ ಕಲ್ಮನಿ, ಮಂಜುನಾಥ ಕೋಲ್ಕಾರ್,ಟಿ.ಜಿ.ಬಾಬು,ರವಿಕುಮಾರ್ ಯಲಬುರ್ತಿ, ಎ.ಭಾರತಿ, ಕೃಷ್ಣ, ಶಿವಕುಮಾರ್ ಉಪ್ಪಾರ,ಹನುಮಂತ ಮೊಳೆ,ಮಹಮದ್ ಆಸೀಫ್, ಆರೋಗ್ಯ ಸಿಬ್ಬಂದಿಗಳಾದ ಕಿರಣ,ಪಲ್ಲವಿ ದೇಸಾಯಿ, ಶಿವಾನಂದ ನಾಯ್ಕರ್ ಉಪಸ್ಥೀತರಿದ್ದರು.

Leave a Reply

Your email address will not be published. Required fields are marked *

error: Content is protected !!