003

ಜ್ಞಾನ ಬಂಧು ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮಾಚರಣೆ

ಮಗುವಿನ ಚಲನ-ವಲನ ಕಡೆ ಗಮನವಿರಲಿ ; ಪಾಟೀಲ್

 

ಕರುನಾಡ ಬೆಳಗು ಸುದ್ದಿ
ಭಾಗ್ಯನಗರ ,೧೬- ಪಾಲಕರು ಮಕ್ಕಳ ಕಲಿಕೆಯ ಜೊತೆಯಲ್ಲಿ ಸದಾ ಕಾಳಜಿಯಿಂದ ನೋಡಿಕೊಳ್ಳಬೇಕು. ಮಗುವಿನ ಚಲನ-ವಲನ ಕಡೆ ಗಮನ ಇರಬೇಕು ಹಾಗೂ ಮಕ್ಕಳನ್ನು ಮೊಬೈಲ್ ನಿಂದ ದೂರವಿರಿಸಿ ಶೈಕ್ಷಣಿಕ ಸಾಧನೆ ಹಾಗೂ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು ಎಂದು ಕಾಲೇಜಿನ ಪ್ರಾಂಶುಪಾಲ  ರಾಜಶೇಖರ ಪಾಟೀಲ್  ಹೇಳಿದರು.

ಅವರು ನಗರದ ಜ್ಞಾನ ಬಂಧು ಶಿಕ್ಷಣ ಸಂಸ್ಥೆಯಲ್ಲಿ ೧೫ನೇ ವಾರ್ಷಿಕೋತ್ಸವವನ್ನು ಕಾರ್ಯಕ್ರಮದಲ್ಲಿ ಉದ್ಘಾಟರಾಗಿ ಆಗಮಿಸಿದ ನಗರದ ಸರ್ಕಾರಿ ಪ.ಪೂ.  ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‌ಕಾರ್ಯಕ್ರಮದಲ್ಲಿ ಶಾಲಾ ಉಪ ಪ್ರಾಂಶುಪಾಲರಾದ  ಜ್ಯೋತಿ ಎಸ್.ಎಸ್ ಅವರು ಶಾಲಾ ವಾರ್ಷಿಕ ವರದಿಯನ್ನು ವಾಚನ ಮಾಡಿ ಸಂಸ್ಥೆಯ ಶೈಕ್ಷಣಿಕ ವರ್ಷದ ಸಾಧನೆಯನ್ನು ಮತ್ತು ಮಕ್ಕಳ ಪ್ರಗತಿಯ ಕುರಿತು ತಿಳಿಸಿದರು. ಇದೆ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಜಿ.ಎಸ್. ಮಾತನಾಡಿ “ಮಕ್ಕಳ ಮನಸು ಅತ್ಯಂತ ವಿಶಾಲವಾದದ್ದು ಎಲ್ಲವನ್ನು ಗ್ರಹಿಸುವ ಶಕ್ತಿ ಹೊಂದಿರುತ್ತಾರೆ ಅದನ್ನು ಸರಿಯಾಗಿ ಉಪಯೋಗಿಸಕೊಳ್ಳೆಬೇಕು ಜೊತೆಗೆ ಕಾಲೇಜಿನಲ್ಲಿ ಲಭ್ಯವಿರುವ ಮೂಲಭೂತ ಸೌಲಭ್ಯಗಳು, ಉತ್ತಮ ಗುಣಮಟ್ಟದ ಶಿಕ್ಷಣ, ನೂರಿತ ಉಪನ್ಯಾಸಕರ ತಂಡ ಹಾಗೂ ಕಳೆದ ಮೂರು ವರ್ಷದಲ್ಲಿ ಮಾಡಿದ ಸಾಧನೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧಕ್ಷ ದಾನಪ್ಪ ಕವಲೂರು ಮಾತನಾಡಿ “ಯಾವ ದೇಶದಲ್ಲಿ ಶಾಲೆಗಳಿಗಿಂತ ದೇವಾಲಯಗಳ ಘಂಟೆ ಹೆಚ್ಚು ಬಾರಿಸುತ್ತವೆಯೋ ಆ ದೇಶದಲ್ಲಿ ಅಜ್ಞಾನ ಮತ್ತು ಬಡತನವಿರುತ್ತದೆ, ಯಾವ ದೇಶದಲ್ಲಿ ದೇವಾಯಗಳಿಗಿಂತ ಶಾಲೆಗಳ ಘಂಟೆ ಹೆಚ್ಚು ಬಾರಿಸುತ್ತವೆಯೋ ಆ ದೇಶದಲ್ಲಿ ಶ್ರೀಮಂತಿಕೆ ಇರುತ್ತದೆ”. ಡಾ| ಬಿ.ಆರ್. ಅಂಬೇಡ್ಕರ್ ರವರ ಈ ವಾಕ್ಯವನ್ನು ಸ್ಮರಿಸಿ ಅವರು ಸಂಸ್ಥೆಯು ಬೆಳೆದು ಬಂದು ಹಾದಿಯನ್ನು ಸ್ಮರಿಸಿಕೊಂಡರು.

ಸಂಸ್ಥೆಯು ೧೫ ವರ್ಷಗಳ ಕಾಲ ನಿರಂತರ ಶಿಕ್ಷಣ ಸೇವೆಯಲ್ಲಿ ತೊಡಗಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತಿದ್ದು, ಸಂಸ್ಥೆಯು ಈ ಬೆಳವಣಿಗೆಗೆ ಪಾಲಕರು, ಮಕ್ಕಳು ಹಾಗೂ ಶಿಕ್ಷಕ ಸಿಬ್ಬಂದಿವೃಂದ ಪರಿಶ್ರಮವು ಇದೆ. ಮಕ್ಕಳು ಸಂಸ್ಥೆಯು ನೀಡುವ ಗುಣಮಟ್ಟದ ಶಿಕ್ಷಣವನ್ನು ಸರಿಯಾಗಿ ಪಡೆದುಕೊಂಡು ಮುಂದಿನ ದಿನಗಳಲ್ಲಿ ಉತ್ತಮ ನಾಗರಿಕರಾಬೇಕು.

ಕಾರ್ಯಕ್ರಮದಲ್ಲಿ ೨೦೨೨-೨೩ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಶ್ರಮಿಸಿದ ಶಿಕ್ಷಕವೃಂದಕ್ಕೆ ಸನ್ಮಾನಿಸಿಲಾಯಿತು. ನಂತರದಲ್ಲಿ ಸದರಿ ಶೈಕ್ಷಣಿಕ ಸಾಲಿನಲ್ಲಿ ಶಾಲೆಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೂ ಗೌರವಿಸಲಾಯಿತು. ತದನಂತರದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವ.ಕಾರ್ಯಕ್ರಮದಲ್ಲಿ ನಗರದ ಪಟ್ಟಣ ಪಂಚಾಯತ್ ಸದಸ್ಯರು, ಸಿಬ್ಬಂದಿವೃಂದ, ಮಕ್ಕಳು, ಪಾಲಕರು ಉಪಸ್ತಿತರಿದ್ದರು.

ಕಾರ್ಯಕ್ರಮವನ್ನು ಶಾಲಾ ಮಕ್ಕಳಾದ ಕುಮಾರಿ ಪ್ರೀಯಾ ಹಾಗೂ ಸಂಜನಾ ನಿರೂಪಿಸಿ, ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಲಿಲಿಯನ್ ಅಂಟೋನಿ ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿದರು, ಕುಮಾರ ಅಮಿತ್ ವಂದಾಲ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!