WhatsApp Image 2024-02-12 at 3.21.10 PM

ಪ್ರತಿಯೊಂದು ಮಠ ಮಾನ್ಯಗಳಲ್ಲಿ ಸಂಸ್ಕಾರ ಸಂಸ್ಕೃತಿ ಇರುತ್ತದೆ : ಹೈಕೊರ್ಟ್ ಸರಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್‌

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ 12 ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಹಿರೇಮಠ ಲೋಕಾರ್ಪಣೆ ಕಾರ್ಯಕ್ರಮದ ಪ್ರಯುಕ್ತ ಏರಡನೇಯ ದಿವಸದ ಜ್ಞಾನ ದಾಸೋಹ ಕಾರ್ಯಕ್ರಮ ಜರುಗೀತು.

ಕಾರ್ಯಕ್ರಮ ಉದ್ದೇಶಿಸಿ ಹೈಕೊರ್ಟ ನ್ಯಾಯದೀಶ ಬಿ,ಪಿ,ಪಾಟೀಲ್ ಮಾತನಾಡಿ ಗ್ರಾಮಿಣ ಪ್ರದೇಶದಲ್ಲಿ ಪ್ರೀತಿ ವಿಶ್ವಾಸ ಬಾಂದವ್ಯ ಬೆಳೆಯಬೇಕು ಎಲ್ಲಿ ಮಠಗಳು ಪ್ರಾರಂಭ ವಾಗುತ್ತವೆಯೋ ಅಲ್ಲಿ ಸಂಸ್ಕಾರ ಪ್ರಾರಂಭಗೊಳ್ಳು ತ್ತವೆ ಅದು ನಮಗೆ ಮೊದಲ ಪಾಠವಾಗುತ್ತದೆ. ದೆಹಕ್ಕೆ ಸಂಸ್ಕಾರ ಕೊಡುವದಲ್ಲ ನಮ್ಮ ಚಂಚಲ ವಾಗಿರತಕ್ಕಂತ ಮನಸ್ಸು ಕೇವಲ ಕೆಟ್ಟ ವಿಚಾರ ಮಾಡುತ್ತದೆ ಅದು ಬದಲಾವಣೆ ಯಾಗಬೇಕು ಬದಲಾವಣೆ ಯಾಗಬೇಕಂದರೆ ಪುರಾಣ ಪುಣ್ಯಕಥೆ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡು ಯುವಕರನ್ನು ಬದಲಾವಣೆ ಮಾಡುವಂತ ಕಾರ್ಯ ಮಠ ಮಾನ್ಯಗಳು ಮಾಡಬೇಕಾಗಿದೆ ಎಂದು ಹೇಳಿದರು.

ಷ.ಬ್ರ 108 ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಚಳಗೇರಾ ಮಾತನಾಡಿ, ತಾಯಿಯನ್ನ ಮಿರಿಸುವಂತ ಶಕ್ತಿ ಜಗತ್ತಿನಲ್ಲಿ ಮತ್ತಾವ ಶಕ್ತಿಯಿಂದ ಆಗುವದಿಲ್ಲ ಗುರುಗಳಾದವರು ತಾಯಿಯ ಸ್ವರೂಪ ಪಡೆದವರು ಮನಸ್ಸಿನೊಳಗಿನ ಕಲ್ಮಶ ಕಳೆಯ ಬೇಕಾದರೆ ಮಠಗಳಲ್ಲಿ ಕುಳಿತು ಶರಣರ ಪುರಾಣ ಪ್ರವಚನ ಕೇಳಬೇಕು,ಮನುಷ್ಯನ ಮನಸ್ಸು ಪರಿವರ್ತನೆ ಯಾಗಬೇಕಾದರೆ ಅದು ಮಠ ಮಾನ್ಯಗಳಲ್ಲಿ ಮಾತ್ರ,ಜಗತ್ತಿನಲ್ಲಿ ಗುರುವೇ ಶ್ರೇಷ್ಠವೆಂದು ತಿಳಿಸಿಕೊಟ್ಟವರು ಕಲಬುರ್ಗಿ ಶರಣ ಬಸವೇಶ್ವರರು ಅವರಲ್ಲಿರುವ ಭಕ್ತಿ ನಿತ್ಯ ಕಾಯಕ ಮತ್ತು ದಾಸೋಹ ಈ ಸತ್ಸಂಗಕ್ಕೆ ಕರೆ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಕೀಲ ಮಲ್ಲನಗೌಡ ಪಾಟೀಲ್, ಪಿಎಸ್ಐ ಅಶೋಕ ಬೇವೂರ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಹಿರೇಮಠದ ಪೂಜ್ಯರಾದ ಶಿವನಾಗಯ್ಯ ಹಿರೇಮಠ, ಯೋಗ ಗುರು ಹರ್ಷಾನಂದ ಗುರುಜಿ, ಹನಮಪ್ಪ ಗದ್ದಿ, ದೇವಪ್ಪ ಭೂತಲ್, ಸಂಗನಗೌಡ ಮಾಲಿ ಪಾಟೀಲ್ ಹಾಗೂ ಇತರ ಗ್ರಾಮಗಳಾದ ಮರಕಟ್ಟ, ತಲ್ಲೂರು, ಹುಣಶಿಹಾಳ, ತರಲಕಟ್ಟಿ, ನಿಲೋಗಲ್ಲ ಗ್ರಾಮದ ಭಕ್ತರು ಮತ್ತು ಇತರರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!