ಮಹಾಸಭಾದ ನಿರ್ದೇಶಕ ಸ್ಥಾನಕ್ಕೆ ವಿರೂಪಾಕ್ಷಯ್ಯ ಹಿರೇಮಠ ಅವಿರೋಧ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 9- ಅಖಿಲ ಭಾರತ ವೀರಶೈವ ಮಹಾಸಭಾದ ಕೊಪ್ಪಳ ತಾಲೂಕ ಘಟಕದ ನಿರ್ದೇಶಕ ಸ್ಥಾನಕ್ಕೆ ವಿರುಾಪಾಕ್ಷಯ್ಯ ಸಂಗನ ಬಸಯ್ಯ ಹಿರೇಮಠ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿರೂಪಾಕ್ಷಯ್ಯ ಹಿರೇಮಠ ಅವರು ಕೊಪ್ಪಳದ ಬಿಇಓ ಕಚೇರಿಯಲ್ಲಿ 2005 ಡಿಸೆಂಬರ್ ವರೆಗೆ ಎಫ್ ಡಿಸಿಯಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಕಾರ್ಯನಿರ್ವಹಿಸಿ ನಂತರ ಮುನಿರಾಬಾದಿನ ಡಯಟ್ ಕಚೇರಿಯಲ್ಲಿ ಸೂಪರ್ ಡೆಂಟಾಗಿ 2006, ಕೊಪ್ಪಳದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸೂಪರ್ ಡೆಂಟ್ ,ಯಲಬುರ್ಗಾದ ಬಿ ಓ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ, ನಂತರ ಕೊಪ್ಪಳದ ಬಿಇಓ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ, ನಂತರ ಬಡ್ತಿ ಹೊಂದಿ ಬಳ್ಳಾರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಚೇರಿಯಲ್ಲಿ ಜಿ.ಎ(ಪತ್ರಾಂಕಿತ ಸಹಾಯಕರು) ಆಗಿ,ನಂತರ ಕೊಪ್ಪಳದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಜಿ.ಎ(ಪತ್ರಾಂಕಿತ ಸಹಾಯಕರು) ನಂತರ ದಿನಗಳಲ್ಲಿ ಬಡ್ತಿ ಹೊಂದಿ ಬೆಳಗಾವಿಯ ಜೆಡಿ ಕಚೇರಿಯಲ್ಲಿ ಎಸ್ ಎಡಿ ಪಿಐ ಆಗಿ ಸುದೀರ್ಘ ಸರಕಾರದ ಸೇವೆಯನ್ನು ಸಲ್ಲಿಸಿ ಎಲ್ಲರಿಂದಲೂ ಸೈ ಎನ್ನಿಸಿಕೊಂಡ ನಿವೃತ್ತರಾದರು.
ಸರಳ ಸಜ್ಜನಿಕೆಯ ವಿರುಪಾಕ್ಷಯ್ಯ ಹಿರೇಮಠ ಅವರು ಕೊಪ್ಪಳ ತಾಲೂಕು ಘಟಕದ ವೀರಶೈವ ಮಹಾಸಭಾದ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.
ಹರ್ಷ : ಕೊಪ್ಪಳ ತಾಲೂಕು ವೀರಶೈವ ಮಹಾಸಭಾದ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ವಿರೂಪಾಕ್ಷಯ್ಯ ಹಿರೇಮಠ ಅವರನ್ನು ವೀರಶೈವ ಮಹಾಸಭಾದ ಅನೇಕ ಮುಖಂಡರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
