WhatsApp Image 2024-03-15 at 6.56.06 PM (1)

ಮಹಿಳಾ ಉದ್ದಿಮೆದಾರರನ್ನು ಮೇಲ್ದರ್ಜೆಗೇರಿಸುವ ಸಾಮಾರ್ಥ್ಯಾಭಿವೃದ್ಧಿ ತರಬೇತಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,15- ತಾಲೂಕು ಪಂಚಾಯತ ಸಭಾಂಗಣದಲ್ಲಿ “ಸ್ತ್ರೀ-ಸಾಮರ್ಥ್ಯ (SSY) ಯೋಜನೆ” ಯಡಿ ಮಹಿಳಾ ಉದ್ಯಮೆದಾರರಿಗೆ ಸಾಮಾರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ತಾಲೂಕು ಪಂಚಾಯತ ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸುನೀಲ್ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಸದರಿ ಕಾರ್ಯಕ್ರಮವನ್ನು ಉದ್ದೇಶಿಸಿ, ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸುನೀಲ್ ರವರು ಮಾತಾನಾಡುತ್ತಾ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಬೆಂಗಳೂರು ಜಿಲ್ಲಾ ಪಂಚಾಯತ್ – ಕೊಪ್ಪಳ ತಾಲೂಕು ಪಂಚಾಯತ್ – ಕೊಪ್ಪಳ ಹಾಗೂ ತಾಂತ್ರಿಕ ಬೆಂಬಲ ಸಂಸ್ಥೆ (TSA) ಯಾದ STEPS ಸಂಸ್ಥೆ (sustainable Technology & Environment Protection Society ) ಸಹಯೋಗದೊಂದಿಗೆ ಸ್ತ್ರೀ-ಸಾಮರ್ಥ್ಯ (SSY) ಯೋಜನೆಯಡಿಯ ರೋಟ್ಟಿ, ಹಪ್ಪಳ ಮತ್ತು ಶ್ಯಾವಿಗೆ ತಯಾರಿಸುವ ಉದ್ದಿಮೆದಾರರಿಗೆ ಲೇಬಲಿಂಗ್ , ಬ್ರಾಂಡಿಂಗ್ & ಮಾರುಕಟ್ಟೆ ಬೆಂಬಲ ನೀಡಿ ಸಂಜೀವಿನಿ ಸ್ವಸಹಾಯ ಗುಂಪಿನ ಉದ್ದಿಮೆದಾರರನ್ನು ಮೇಲ್ದರ್ಜೆಗೇರಿಸುವ ಸಂಬಂಧ ಎರಡು ದಿನಗಳ ಸಾಮಾರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ” ಇಂದು ಆಯೋಜಿಸಲಾಗಿದ್ದು ಸದರಿ ತರಬೇತಿಯಲ್ಲಿ ಎಲ್ಲಾ ಮಹಿಳೆಯರು‌ ಯಶಸ್ವಿಯಾಗಿ ಭಾಗವಹಿಸಿ, ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಅದೇ ರೀತಿ STEPs ಸಂಸ್ಥೆ ಯ ಸಿಬ್ಬಂದಿಯವರಾದ ಶ್ರೀಮತಿ ಸುಮಂಗಲಾ ಅವರು ಮಾತನಾಡಿ, ಈ ಎರಡು ದಿನದ ತರಬೇತಿಯಲ್ಲಿ ಮಹಿಳಾ ಉದ್ದಿಮೆಗಳ ಸ್ಥಾಪನೆ, ಲೇಬಲಿಂಗ್ & ಬ್ರಾಂಡಿಂಗ್ ಕುರಿತು ಮಾಹಿತಿ ನೀಡುವುದರೊಂದಿಗೆ ಬ್ಯಾಂಕ್ ಸಾಲ ಕೊಡಿಸುವಲ್ಲಿ ನಮ್ಮ ಸಂಸ್ಥೆವತಿಯಿಂದ ಸಹಾಯ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ STEPs ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಶೋಭಾ, ಮಂಜುಳಾ, ತಾಲೂಕ ಪಂಚಾಯತನ ಸಂಜೀವಿನಿ ಯೋಜನೆಯ ವಲಯ ಮೇಲ್ವಿಚಾರಕರಾದ ವೆಂಕಟೇಶ, SVEP TPM ರವರಾದ ನವೀನ್, BRP ಸವಿತಾ, DEO ನವೀನ್ ಹಾಗೂ ಮಹಿಳಾ ಉದ್ದಿಮೆದಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!