WhatsApp Image 2024-04-14 at 11.23.33 AM

ಮಹಿಳೆಯರು ಸಾಮಾಜಿಕವಾಗಿ ಸಬಲಗೊಳ್ಳಬೇಕು : ವೆಂಕಟೇಶ್ ಹೆಗಡೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 14- ಶಿಲ್ಪಿ,ಭಾರತರತ್ನ,ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಜನ್ಮದಿನದಂದು ಅವರ ಪುತ್ತಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ನಮನಗಳನ್ನು ಸಲ್ಲಿಸಿದೆವು.

ಈ ಸಂದರ್ಭದಲ್ಲಿ ವೆಂಕಟೇಶ್ ಹೆಗಡೆಯವರು ಮಾತನಾಡುತ್ತಾ ಮಹಿಳೆಯರು ಸಾಮಾಜಿಕವಾಗಿ ಸಬಲಗೊಳ್ಳಬೇಕು. ಹೆಣ್ಣು ಆರ್ಥಿಕವಾಗಿ ಸ್ವತಂತ್ರಳಾಗಿರಬೇಕು. ಹೆಣ್ಣು ಮಕ್ಕಳ ಮೇಲೆ ಮದುವೆಯನ್ನು ಹೇರಬಾರದು. ಗಂಡನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರಬೇಕು. ಆಕೆ ಗಂಡನ ಗುಲಾಮಳಾಗಬಾರದು.

ಮಹಿಳೆಗೆ ಅವಳದ್ದೇ ಆದ ಸ್ವಾತಂತ್ರ್ಯವಿದೆ, ಹೀಗೆ ಹಲವು ವಿಚಾರಗಳನ್ನು ತಮ್ಮ ಬದುಕು, ಬರಹ, ಭಾಷಣಗಳಲ್ಲಿ ಪ್ರತಿಪಾದಿಸಿದ್ದ ಮಹಾನ್ ಚೇತನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಇಂದು ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರನ್ನು ಮತ್ತೊಮ್ಮೆ ಸ್ಮರಿಸುತ್ತಾ, ಹಾಗೂ ನಮ್ಮ ಜೀವನದದ್ದೂಕ್ಕೂ ಅವರ ಆದರ್ಶ, ತತ್ವಗಳನ್ನು ಅಳವಡಿಸಿಕೊಂಡು ಮುಂದೆ ಸಾಗೋಣ.. ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದವರು ಕುಡತಿನಿ ನಾಗರಾಜ್, ಬಿ ಎಂ ಪಾಟೀಲ್, ಎಚ್ ಮಹಮ್ಮದ್ ಗೌಸ್,ಜಿ.ಜೆ ರವಿಕುಮಾರ್, ದೇವೇಂದ್ರ ಆನಂದ್,ರಾಜು,ಅನಿಲ್, ಶಶಿಕುಮಾರ್ ಗೌಡ, ಶಿವು,ಜಿಲಾನ್, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!