ಮಹಿಳೆ ಮೃತ: ವಾರಸುದಾರರ ಪತ್ತೆಗೆ ಮನವಿ

ಕರುನಾಡ ಬೆಳಗು ಸುದ್ದಿ
ಕೊಪ್ಪಳ ಫೆಬ್ರವರಿ 19 –  ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದ ಸುಮಾರು 54 ವಯಸ್ಸಿನ ಶಾಂತವ್ವ ಎಂಬ ಮಹಿಳೆಯು ಮೃತಪಟ್ಟಿದ್ದು, ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ.02/2024 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜನವರಿ 12ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕೊಪ್ಪಳ ಕೇಂದ್ರಿಯ ಬಸ್ ನಿಲ್ದಾಣದ ಹತ್ತಿರ ಯಾವುದೊ ಖಾಯಿಲೆಯಿಂದ ಶಾಂತವ್ವ ಗಂಡ ಮಾರುತಿ ಸಾ.ಗಂಗಾವತಿ ಎಂಬ 54 ವರ್ಷದ ಮಹಿಳೆಯು ತೀವ್ರ ಅಸ್ವಸ್ಥಳಾಗಿ ನರಳಾಡುತ್ತಿದ್ದನ್ನು ನೋಡಿದ ಸಾರ್ವಜನಿಕರು ತುರ್ತುವಾಹನ 108ಗೆ ಕರೆ ಮಾಡಿ, ಈ ವಾಹನದಲ್ಲಿ ಕರೆತಂದು ಜಿಲ್ಲಾ ಸರಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿರುತ್ತಾರೆ. ಚಿಕಿತ್ಸೆ ಫಲಕಾರಿಯಾಗದೇ ಈ ಮಹಿಳೆಯು ಜ.17ರಂದು ಮೃತಪಟ್ಟಿರುತ್ತಾಳೆ.
 ಮೃತ ವ್ಯಕ್ತಿಯ ಚಹರೆ: ಮೃತ ಮಹಿಳೆಯ ಹೆಸರು ಶಾಂತವ್ವ ಗಂಡ ಮಾರುತಿ ಸಾ.ಗಂಗಾವತಿ ಎಂದು ತಿಳಿದು ಬಂದಿರುತ್ತದೆ. ದುಂಡು ಮುಖ ಕಪ್ಪು ಮತ್ತು ಬಿಳಿ ಮಿಶ್ರಿತ 7 ರಿಂದ 8 ಇಂಚು ಕೂದಲು, ಹಳದಿ ಮತ್ತು ಹಸಿರು ಚೌಕಡಿಯುಳ್ಳ ಸೀರೆ ಮತ್ತು ಹಳದಿ ಕುಪ್ಪಸ ಧರಿಸಿರುತ್ತಾರೆ.
      ಈ ಮೃತ ಮಹಿಳೆಯ ವಾರಸುದಾರರ ವಿಳಾಸ ಪತ್ತೆಯಾದಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆಯ ದೂ.ಸಂ: 08539-220333, ಪೋಲೀಸ್ ಇನ್ಸ್ಪೆಕ್ಟರ್ ಮೊ.ಸಂ: 9480803745, ಪಿ.ಎಸ್.ಐ(ಕಾ&ಸು) ಮೊ.ಸಂ: 9611589433 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕೊಪ್ಪಳ ನಗರ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!