ಮಾಜಿ ಸದಸ್ಯ ಇಕ್ಬಾಲ್ ಅಹಮದ್ ಸರಡಗಿ ನಿಧನಕ್ಕೆ ಗಣ್ಯರಿಂದ ಸಂತಾಪ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 24- ಕಾಂಗ್ರೆಸ್ ಹಿರಿಯ ಮುಖಂಡರು ಮಾಜಿ ಸಂಸದರು ಭಾರತ ದೇಶದ ಹಜ್ ಕಮಿಟಿ ಮಾಜಿ ಸದಸ್ಯರು ಇಕ್ಬಾಲ್ ಅಹಮದ್ ಸರಡಗಿ ಅವರ ನಿಧ ನಕ್ಕೆ ಶಾಸಕ ಬಿ ಎಂ ನಾಗರಾಜ ಮಾಜಿ ಶಾಸಕ ಟಿಎಂ ಚಂದ್ರಶೇಖರಯ್ಯ ಸ್ವಾಮಿ ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಹಾಜಿ ಅಬ್ದುಲ್ ನಬಿ ಬಳ್ಳಾರಿ ಜಿಲ್ಲಾ ವಕ್ಫ್ ಮಾಜಿ ಉಪಾಧ್ಯಕ್ಷರು ಶಿಕ್ಷಣ ಪ್ರೇಮಿಗಳಾದ ಸೈಯದ್ ಮೋಹಿದೀನ್ ಖಾದ್ರಿ ಸೌದಾಗರ್ ಮಸೀದಿಯ ಗೌರವ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ ಮತ್ತಿತರ ಗಣ್ಯರು ಶೋಕ ಸಂತಾಪ ವ್ಯಕ್ತಪಡಿಸಿದರು.
ಸರಡಗಿ ಅವರು ಅವರ ಅವಧಿಯಲ್ಲಿ ಎಲ್ಲಾ ವರ್ಗಗಳ ಸಮಾಜಕ್ಕೆ ಅನುದಾನ ನೀಡಿ ಸರ್ವಜನರ ವಿಶ್ವಾಸ ಗಳಿಸಿ ಉತ್ತಮ ಆಡಳಿತಗಾರರಾಗಿದ್ದರು ಅಲ್ಲಾಹನು ಇಕ್ಬಾಲ್ ಅಹಮದ್ ಸರಡಗಿ ಅವರಿಗೆ ಮಗ್ ಫಿರತ್ ಮತ್ತು ಮರ್ಹಮತ್ ನೀಡಿ ದಯಾ ಪಾಲಿಸಲಿ ಅವರ ಕುಟುಂಬದವರಿಗೆ ಸಹನೆಯನ್ನು ಅನುಗ್ರಹಿಸಲಿ ಎಂದು ಅವರು ತಮ್ಮ ಶೋಕ ಸಂತಾಪದಲ್ಲಿ ಸೂಚಿಸಿದರು .
