ಮಾರ್ಚ 11 ಮತ್ತು 12ಕ್ಕೆ ಆನೆಗೊಂದಿ ಉತ್ಸವ : ಶಾಸಕ ಜನಾರ್ದನರೆಡ್ಡಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ,17- ವಿಜಯನಗರದ ಮೊದಲ ರಾಜಧಾನಿ, ಐತಿಹಾಸಿಕ, ಧಾಮರ್ಿಕ ತಾಣವಾದ ಆನೆಗೊಂದಿಯಲ್ಲಿ ಆನೆಗೊಂದಿ-ಉತ್ಸವವನ್ನು ಮುಂದಿನ ತಿಂಗಳು ಮಾರ್ಚ 11 ಮತ್ತು 12ರಂದು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಜಿ. ಜನಾರ್ದರೆಡ್ಡಿ ಹೇಳಿದರು.
ನಗರದಲ್ಲಿ ಈ ಬಗ್ಗೆ ಮಾತನಾಡಿ, ಆನೆಗೊಂದಿ ಉತ್ಸವಕ್ಕೆ ಈಗಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೆರವು ನೀಡುವ ಭರವಸೆ ನೀಢಿದ್ದಾರೆ.
ಸರ್ಕಾರದಿಂದ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆನೆಗೊಂದಿ ಉತ್ಸವಕ್ಕೆ ಸುಮಾರು 2ರಿಂದ 3 ಕೋಟಿ ರೂಪಾಯಿ ಅನುದಾನ ಸಿಗಲಿದ್ದು, ಅದ್ದೂರಿಯಾಗಿ ಉತ್ಸವ ಮಾಡುವ ಸಂಬಂಧ ರೂಪುರೇಷೆಗಳನ್ನು ತಯಾರಿಸಲಾಗುವುದು ಎಂದರು.
ಉತ್ಸವದ ಉದ್ಘಾಟನೆ, ಸಮಾರೋಪಕ್ಕೆ ಯಾರನ್ನು ಕರೆಯಬೇಕು, ವೇದಿಕೆ ಕಾರ್ಯಕ್ರಮಕ್ಕೆ ಯಾವೆಲ್ಲಾ ಕಲಾವಿದರನ್ನು ಕರೆಯಿಸಬೇಕು ಎಂಬುವುದರ ಬಗ್ಗೆ ಶೀಘ್ರವೇ ಪಟ್ಟಿ ತಯಾರಿಸಲಾಗುವುದು. ಆನೆಗೊಂದಿ ಉತ್ಸವಕ್ಕೆ ಲೋಕಸಭಾ ಚುನಾವಣೆಯ ಅಧಿಸೂಚನೆ ಅಥವಾ ನೀತಿ ಸಂಹಿತೆ ಪರಿಣಾಮ ಬೀರದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಿಷ್ಕಿಂಧಾ ಜಿಲ್ಲೆಯ ಪ್ರಸ್ತಾಪ : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಸಂದರ್ಭದಲ್ಲಿಯೇ ನೂತನ ಕಿಷ್ಕಿಂಧಾ ಜಿಲ್ಲೆಯ ಬಗ್ಗೆ ಪ್ರಸ್ತಾಪ ಮಾಡುವ ಉದ್ದೇಶವಿತ್ತು. ಆದರೆ ತಾಂತ್ರಿಕ ಕಾರಣಕ್ಕೆ ಸಾಧ್ಯವಾಗಿಲ್ಲ. ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಖಚಿತವಾಗಿ ಪ್ರಸ್ತಾಪಿಸುತ್ತೇನೆ.
ರಾಜ್ಯದಲ್ಲಿ ಕಿಷ್ಕಿಂಧಾ, ಚಿಕ್ಕೋಡಿ, ಮಧುಗಿರಿ ಸೇರಿದಂತೆ ಇನ್ನು ಮೂರು-ನಾಲ್ಕು ಹೊಸ ಜಿಲ್ಲೆಗಳ ರಚನೆಯ ಬಗ್ಗೆ ಈಗಾಗಲೆ ಬೇಡಿಕೆ ವ್ಯಕ್ತವಾಗುತ್ತಿದೆ. ಬಜೆಟ್ ಪೂರ್ವದಲ್ಲಿ ಬೇರೆ ಜಿಲ್ಲೆಗಳ ಪ್ರಸ್ತಾಪ ಇದ್ದರೆ ಅದೇ ಸಂದರ್ಭದಲ್ಲಿ ಕಿಷ್ಕಿಂಧೆಯ ಬಗ್ಗೆ ನಾನು ಪ್ರಸ್ತಾಪ ಮಾಡುತಿದೆ. ಆದರೆ ಸರ್ಕಾರದ ಆಪ್ತ ಕಾರ್ಯದರ್ಶಿ ಬಳಿ ಇದ್ದ ನೂತನ ಜಿಲ್ಲೆಗಳ ಪ್ರಸ್ತಾಪವು ಬಜೆಟ್ ಸಭೆಯ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ಹೀಗಾಗಿ ಕೇವಲ ಕಿಷ್ಕಿಂಧಾ ಜಿಲ್ಲೆಯ ಬಗ್ಗೆ ಪ್ರಸ್ತಾಪಿಸುವುದು ಬೇಡ ಎಂಬ ಕಾರಣಕ್ಕೆ ಸುಮ್ಮನಾದೆ. ಮುಂದಿನ ಅಧಿವೇಶನದಲ್ಲಿ ಖಚಿತವಾಗಿ ಕಿಷ್ಕಿಂಧಾ ಜಿಲ್ಲೆಯ ಬಗ್ಗೆ ಪ್ರಸ್ತಾಪಿಸಿ ಸಿಎಂ ಗಮನ ಸೆಳೆಯುತ್ತೇನೆ ಎಂದು ರೆಡ್ಡಿ ಹೇಳಿದರು.
ಕ್ಷೇತ್ರಕ್ಕೆ ದೊಡ್ಡ ಅನುದಾನ : ಈ ಬಾರಿಯ ಬಜೆಟ್ನಲ್ಲಿ ಗಂಗಾವತಿ ಕ್ಷೇತ್ರಕ್ಕೆ ನೂರಾರು ಕೋಟಿ ರೂಪಾಯಿ ಮೊತ್ತದ ದೊಡ್ಡ ಪ್ರಮಾಣದ ಅನುದಾನ ಸಿಕ್ಕಿದೆ. ಯಾವ ವಲಯಕ್ಕೆ ಎಷ್ಟು ಸಿಕ್ಕಿದೆ ಎಂದು ಶೀಘ್ರ ಮಾಹಿತಿ ನೀಡಲಾಗುವುದು ಅಂಜನಾದ್ರಿಯ ಅಭಿವೃದ್ಧಿಗೆ ನೂರು ಕೋಟಿ ಘೋಷಣೆ ಮಾಡಲಾಗಿದೆ.
ಕ್ಷೇತ್ರದ ಕೆರೆಗಳನ್ನು ತುಂಬಿಸಲು 240 ಕೋಟಿ ಮೊತ್ತದ ಅನುದಾನ ಘೋಷಣೆ ಮಾಡಲಾಗಿದೆ. ಅಲ್ಲದೇ ಶಿಕ್ಷಣ, ಆರೋಗ್ಯ, ರಸ್ತೆ, ಪರಿಶಿಷ್ಟ ವರ್ಗದ ಕಲ್ಯಾಣ, ಸೇರಿದಂತೆ ನಾನಾ ಯೋಜನೆಗಳಲ್ಲಿ ಸಾಕಷ್ಟು ಪ್ರಮಾಣದ ಅನುದಾನ ಕ್ಷೇತ್ರಕ್ಕೆ ಸಿಕ್ಕಿದೆ. ಇದು ಅಲ್ಲದೇ ಕ್ಷೇತ್ರಕ್ಕೆ ಅಗತ್ಯವಿರುವ ಹೆಚ್ಚುವರಿ ವಿಶೇಷ ಅನುದಾನ ಮಂಜೂರು ಮಾಡಲು ಸಿಎಂಗೆ ಅಧಿಕಾರವಿದೆ.
ಮುಂದಿನ ದಿನಗಳಲ್ಲಿ ವಿಶೇಷ ಅನುದಾನಕ್ಕೆ ಯತ್ನಿಸಲಾಗುವುದು. ಅಲ್ಲದೇ ಕಲ್ಯಾಣ ಕನರ್ಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದಲೂ ಹೆಚ್ಚುವರಿ ಅನುದಾನ ಗಂಗಾವತಿಗೆ ಸಿಗಲಿದೆ ಎಂದು ಶಾಸಕ ಜನಾರ್ದರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

