WhatsApp Image 2024-02-18 at 2.38.50 PM

ಕುಡಿಯುವ ನೀರಿನ ಸ್ಥಿತಿಗತಿ ಮತ್ತಿತರ ಪೂರ್ವಭಾವಿ ಸಭೆ ಕುಡಿಯುವ ನೀರಿನ ಕೊರತೆ ಆಗದಿರಲಿ : ಶಾಸಕ ಬಿ ಎಂ ನಾಗರಾಜ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,18- ಬೇಸಿಗೆ ಹಿನ್ನೆಲೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಸ್ಥಿತಿಗತಿ ಕೊರತೆ ಸಮಸ್ಯೆ ತಲೆ ದೂರದಂತೆ ಗಮನ ಹರಿಸಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಸಿರುಗುಪ್ಪ ನಗರ ಸಭಾ ಆಡಳಿತ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.

ಶಾಸಕ ಬಿ ಎಂ ನಾಗರಾಜ ಅವರು ನಗರದ ನಗರಸಭೆಯ ಸಭಾಭವನದಲ್ಲಿ ನಡೆದ ಕುಡಿಯುವ ನೀರು ಮತ್ತಿತರೆ ಸಮಸ್ಯೆಗಳನ್ನು ಸದಸ್ಯರಿಂದ ಸಾರ್ವಜನಿಕರಿಂದ ಕುಂದು ಕೊರತೆಗಳ ಕುರಿತು ಮಾಹಿತಿ ಪಡೆದು ಮಾತನಾಡುತ್ತಾ ಬಿಸಿಲು ದಿನೇ ದಿನೇ ಹೆಚ್ಚುತ್ತಿದೆ ಈ ಹಿನ್ನೆಲೆಯಲ್ಲಿ ಸಿರುಗುಪ್ಪ ನಗರದ ವಿವಿಧ ವಾರ್ಡಗಳಲ್ಲಿ ಸಮರ್ಪಕ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದರು.

ನೀರು ಸಿಗದ ಕಡೆ ಕೊಳವೆ ಬಾವಿ ಬೋರ್ವೆಲ್ ಕೊರಿಸಲು ಆದ್ಯತೆ ನೀಡಲಾಗುವುದು ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ನೀರಿನ ಸಮಸ್ಯೆ ಇಲ್ಲವೆಂದು ಕುಳಿತುಕೊಳ್ಳುವಂತಿಲ್ಲ ಜಲ ಸಮಸ್ಯೆ ಎದುರಾದರೆ ಅಧಿಕಾರಿಗಳೇ ಹೊಣೆ ಎಂದರು.

ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಶಂಶೆ ಎ ಆಲಂ, ಪ್ರಾಜೆಕ್ಟ್ ನಿರ್ದೇಶಕ ರಾಘವೇಂದ್ರ ಗುರು, ನಗರಸಭಾ ಪೌರಾಯುಕ್ತ ಎಚ್ಎನ್ ಗುರುಪ್ರಸಾದ್, ಕಾಂಗ್ರೆಸ್ ಮುಖಂಡ ನರಸಿಂಹ, ನಗರಸಭಾ ಸದಸ್ಯರಾದ ಬಿ ಎಂ ಅಪ್ಪಾಜಿ ನಾಯಕ್, ಹೆಚ್ ಗಣೇಶ್, ಮಾಹದೇವ, ಚಾಂದ್ ಬಿ ಮೋದಿನ್ ಸಾಬ್, ಟೀ ಮುಂತಾಜ್, ನಜೀರ್ ಸಾಬ್ ಮೆಹರುನ್ನಿಸ, ಮೊಹಮ್ಮದ್ ಕಮಾಲ್ ಮಾಲ್, ಭಾಷಾ ಗುಲ್ಜಾರ್ ಬೇಗಂ, ಮುಲ್ಲಾ ಬಾಬು, ಕಲೀಂ ಮುಲ್ಲಾ, ದಾದಾ ಖಲಂದರ್ ಮೇಕೇಲಿ, ವೀರೇಶ್, ಮಹಾದೇವ ಸುಳುವಾಯಿ, ಮಲ್ಲಿಕಾರ್ಜುನ, ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಅಬ್ದುಲ್ ನಬಿ, ಮತ್ತಿತರರು ಸಾರ್ವಜನಿಕರು ರೈತರು ಭಾಗವಹಿಸಿ ಕುಂದು ಕೊರತೆಗಳ ಅಹವಾಲುಗಳನ್ನು ನೀಡಿದರು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಶಾಸಕ ಬಿಎಮ್ ನಾಗರಾಜ ತಹಸಿಲ್ದಾರ್ ಶಮ್ಸ್ ಎ ಆಲಂ ಅವರು ಕುಂದು ಕೊರತೆಗಳ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು ನಗರ ಸಭೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಇದ್ದರು.

Leave a Reply

Your email address will not be published. Required fields are marked *

error: Content is protected !!