ಮಾಸ್ತಿ ಇಂಗ್ಲೀಷ್ ಮಿಡಿಯಮ್ ಸ್ಕೂಲ್ 13ನೇ ವಾರ್ಷಿಕೋತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,14 – ಹಿಂದುಳಿದ ಪ್ರದೇಶದ ಕೊಪ್ಪಳದಲ್ಲಿ ಮಾಸ್ತಿ ಇಂಗ್ಲೀಷ್ ಮಿಡಿಯಮ್ ಶಾಲೆಯ ಶೈಕ್ಷಣಿಕ ಕೊಡುಗೆ ಆಗಾದವಾದದ್ದು ಎಂದು ನಹರ ಸಭೆ ಸದಸ್ಯ ಅಮ್ಜದ ಪಟೇಲ್ ಹೇಳಿದರು.
ರಾ ವರು ನಗರದ ಯಶಸ್ವಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆಯ ಮಾಸ್ತಿ ಇಂಗ್ಲೀಷ್ ಮಿಡಿಯಮ್ ಸ್ಕೂಲ್ ನ ಶಾಲಾ 13ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಳೆದ ಹತ್ತಾರು ವರ್ಷದಿಂದ ಕಷ್ಟಪಟ್ಟು ಸಂಸ್ಥೆಕಟ್ಟಿ ಉತ್ತಮ ಶಿಕ್ಷಣ ನೀಡುವ ಮೂಲಕ ಮಾಸ್ತಿ ಶಾಲೆ ಉತ್ತಮ ಸೇವೆಸಲ್ಲಿಸುವ ಮೂಲಕ ಹೆಸರು ಮಾಡುತ್ತಿದೆ ಎಂದರು.
ಸಮಾಜ ಸೇವಕ ರುದ್ರಮುನಿ ಗಾಳಿ ಮಾತನಾಡಿ ಬಡತನ ಹಾಗೂ ಮೂಡನಂಬಿಕೆ ಸೇರಿದಂತೆ ಸಾಮಜಿಕ ಪಿಡಗುಗಳು ದೂರವಾಗಲು ಶಿಕ್ಷನ ಒಂದೆ ಪರಿಹಾರ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶಕ್ಕೆ ಸತ್ತಪ್ರಜೆಯನ್ನು ನೀಡಿ ಎಂದು ಕರೆ ನೀಡಿದರು.
ಶಾಲಾ ಸಂಸ್ಥೆ ಅಧ್ಯಕ್ಷ ಹುಲಗಪ್ಪ ಕಟ್ಟಿಮನಿ ಮಾತನಾಡಿ ಪಾಲಕರು ಮಕ್ಕಳಿಗಾಗಿ ಪಾಲಕರು ಟಿ,ವಿ ಹಾಗೂ ಮೋಬೈಲ್ ನಿಂದ ದೂರವಿರಿ, ಮಕ್ಕಳಿಗೆ ಎಕಾಘ್ರತೆ ಬರಲು ಪಾಲಕರ ತ್ಯಾಗ ಬಹಳ್ಳ ಮುಖ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಕಾರ್ಯದರ್ಶಿ ಪರುಶುರಾಮ ಮ್ಯಾಳಿ ತಿಳಿಸಿದ್ದಾರೆ.ಪ್ರಥಮ ದರ್ಜೆ ಗುತ್ತಿಗೆದಾರ ಬಸವರಾಜ ಪುರದ ,ಸಂತೋಷ ದೇಶಪಾಂಡೆ, ಮಂಜುನಾಥ ಅಂಗಡಿ ಇತರರು ಇದ್ದರು.
