28fa5691-4bf4-4e53-ba19-deb12b920158

ಶ್ರೀ ತ್ರಿಲಿಂಗ ಬಸವೆಶ್ವರ ಜಾತ್ರೆ 

ಮುಧೋಳ ಗ್ರಾಮದಲ್ಲಿ ಹೊನಲು ಬೆಳಕಿನ ಮ್ಯಾಚ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ 2 ರಾಷ್ಟ್ರೀಯ ಮಟ್ಟದಲ್ಲಿ ಪ್ರೊ. ಕಬಡ್ಡಿ ಆರಂಭವಾದಾಗಿನಿಂದ ದೇಸಿ ಕಬಡ್ಡಿ ಆಟಕ್ಕೆ ಹೆಚ್ಚು ಪ್ರಚಾರ ಸಿಕ್ಕಿದೆ, ಈಗ ನಡೆಯುತ್ತಿರುವ ಪ್ರೊ ಕಬಡ್ಡಿಯಲ್ಲಿ ಮಹಾನ್ ಕ್ರೀಡಾಪಟುಗಳು ಮಿಂಚುತ್ತಿದ್ದಾರೆ ಎಂದು ವಕೀಲರ ಸಂಘ ಮಾಜಿ ಅಧ್ಯಕ್ಷರಾದ ಆನಂದ್ ಉಳ್ಳಾಗಡ್ಡಿ ಹೇಳಿದರು,
ತಾಲೂಕಿನ ಮುಧೋಳ ಗ್ರಾಮದಲ್ಲಿ ಶ್ರೀ ತ್ರಿಲಿಂಗ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಗೂ ಶ್ರೀ ಶರಣಬಸವೇಶ್ವರ ಸ್ಪೋರ್ಟ್ಸ್ ಕ್ಲಬ್ ಮುಧೋಳ ದಿವಂಗತ ಶ್ರೀ ಹನುಮಂತರಾಯ ಕ, ದೇಸಾಯಿ ಸ್ಮರಣಾರ್ತಿಕವಾಗಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ, ರಾಜ್ಯ ಮಟ್ಟದ ಹೊನ್ನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,

ನಂತರ ಮಾತನಾಡಿದ ಮುಧೋಳ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅಂದನಗೌಡ ಪೊಲೀಸ್ ಪಾಟೀಲ್ ಅವರು ಮಾತನಾಡಿ ಗ್ರಾಮೀಣ ಕ್ರೀಡೆಗಳ ಉಳಿವು ಮತ್ತು ಬೆಳವಣಿಗೆಗೆ ಸ್ಥಳೀಯರ ಸಹಕಾರ ಅಗತ್ಯವಾಗಿರುತ್ತದೆ, ಇದು ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ನಮ್ಮ ತಾಲೂಕಿನಿಂದ ಯಾರಾದ್ರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮಹತ್ವ ಪಡೆಯಬೇಕಾದೆ, ಕಬಡ್ಡಿಯಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳು ಸೋಲು ಗೆಲುವನ್ನು ಸರಿ ಸಮಾನವಾಗಿ ಸ್ವೀಕರಿಸಬೇಕು ಜೊತೆಗೆ ಗ್ರಾಮೀಣ ಮಟ್ಟದಲ್ಲಿ ನಡೆಯುವ ಇಂತಹ ಕ್ರೀಡೆಗಳಿಗೆ ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು,

ನಂತರ ಮಾತನಾಡಿದ ಮುಖಂಡರು ಈರಪ್ಪ ಕುಡುಗುಂಟಿ, ಡಾ, ಅಂದಾನಯ್ಯ ಕಾರಡಗಿ ಮಠ ಪ್ರಸ್ತವಿಕವಾಗಿ ಮಾತನಾಡಿದರು, ಶರಣಪ್ಪ ಮೂಲಿಮನಿ ಶಿಕ್ಷಕರು ಕಾಂಗ್ರೆಸ್ ಮುಖಂಡರು ಹೇಮರೆಡ್ಡಿ ರೆಡ್ಡೇರ, ಕಳಕಪ್ಪ ಕುರಿ ಮಿಂಚಿನ ಸಂಚಲನಕ್ಕೆ ಚಾಲನೆ ನೀಡಿದರು, ಚಂದ್ರು ದೇಸಾಯಿ ರಿಬ್ಬನ್ ಕಟ್ ಮಾಡುವ ಮೂಲಕ ಕಬಡ್ಡಿ ಆಟಕ್ಕೆ ಚಾಲನೆ ನೀಡಿದರು, ಬಸವರಾಜ್ ಪಲ್ಯದ ಶಿಕ್ಷಕರು ಟಾಸ್ ಮಾಡುವ ಮೂಲಕ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಮ್ತಾಜ್ ಬಿ ಹಿರೇಮನಿ ಅವರು ಅಧ್ಯಕ್ಷತೆ ವಹಿಸಿದರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹುಚ್ಚಮ್ಮ ಕುಣಿಕೇರಿ,ಈ ವೇಳೆ ಎಲ್ಲಾ ಮುಖಂಡರಿಗೆ ಸನ್ಮಾನ ಮಾಡಿ ಗೌರವಿಸಿದರು ಮಾಡಿದರು,ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರತನ್ ದೇಸಾಯಿ, ಅಪ್ಪಣ್ಣ ಪಲ್ಯದ, ಯಲ್ಲಪ್ಪ ಹುನಗುಂದ, ಗ್ರಾಮ ಪಂಚಾಯತಿ ಸದಸ್ಯರಾದ ಖಾದಿರ್ ಭಾಷಾ ತೋಳಗಲ್, ನಾಗರಾಜ್ ತಲ್ಲೂರು, ಸಂಗಪ್ಪ ಕೊಪ್ಪದ ಶಿಕ್ಷಕರು, ಭೀಮಣ್ಣ ಅರೇರ್ ಶಿಕ್ಷಕರು, ಛತ್ರಪ್ಪ ಚಲವಾದಿ, ವೀರಣ್ಣ ತಮಿನಾಳ, ಮತ್ತು ಹೊನ್ನೇಶ ಆದಿಮನಿ ಶಿಕ್ಷಕರು ಹಾಗೂ ಅಮರೇಶ್ ನಿರೂಪಣೆ ಮಾಡಿದರು,

Leave a Reply

Your email address will not be published. Required fields are marked *

error: Content is protected !!