WhatsApp Image 2024-03-14 at 7.57.43 PM

ಮೊಬೈಲ್ ಮುಂದೆ ಅಲ್ಲ ಪುಸ್ತಕದ ಮುಂದೆ ತಲೆ ತಗ್ಗಿಸಿ : ಶಂಭುಲಿಂಗ ಶ್ರೀ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,15- ಮೊಬೈಲ್‌ಗೆ ತಲೆ ತಗ್ಗಿಸುವ ಬದಲು ಪುಸ್ತಕಕ್ಕೆ ತಲೆ ತಗ್ಗಿಸಿದರೆ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಜಂಗಮರ ಹೊಸಹಳ್ಳಿಯ ಶಂಭುಲಿಂಗ ಶ್ರೀ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ಮೋಕಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜೋಳದರಾಶಿಯ ದಿ.ಶ್ರೀಎರ‍್ರಿಸ್ವಾಮಿ ಸ್ಮರಣಾರ್ಥ ಗುರುವಾರ ಹಮ್ಮಿಕೊಂಡಿದ್ದ ಪರೀಕ್ಷಾ ಪ್ಯಾಡ್, ಪೆನ್ನು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಇಂದು ಪುಸ್ತಕ ಓದುವ ಹವ್ಯಾಸ ಕಡಮೆ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಸದಾ ಮೊಬೈಲ್‌ನಲ್ಲಿ ಮುಖ ಇಟ್ಟುಕೊಂಡು ತಲೆ ಬಗ್ಗಿಸಿಕೊಂಡು ಕಾಲ ಹರಣ ಮಾಡುತ್ತಾರೆ. ಇದರಿಂದ ಸಾಧನೆ ಮಾಡಲು ಆಗದು. ಮೊಬೈಲ್ ಬದಲು ಪುಸ್ತಕದಲ್ಲಿ ಮುಖ ಇರಿಸಿದರೆ ಮಾತ್ರ ಸಾಧನೆ ಸಾಧ್ಯ. ಉತ್ತಮ ಫಲಿತಾಂಶಕ್ಕಾಗಿ ನೀವು ದಿನಕ್ಕೆ ಕನಿಷ್ಠ ಅವಧಿಯ ಓದು ಅನಿವಾರ್ಯ ಎಂದರು.

 

ಯಾರಿಗೇ ಆಗಲಿ ದಿವ್ಯ ಸಂಕಲ್ಪ ಇರಬೇಕು. ಸಂಕಲ್ಪ ಒಂದಿದ್ದರೆ ಏನು ಬೇಕಿದ್ದರೂ ಸಾಧಿಸಬಹುದು. ಜೀವನದಲ್ಲಿ ಸ್ಪಷ್ಟ ಗುರಿ ಇರುವ ಬಹಳ ವ್ಯಕ್ತಿಗಳು ಜೀವನದಲ್ಲಿ ಮುಂದೆ ಬಂದಿದ್ದಾರೆ. ವಿದ್ಯೆಯ ಗೆರೆಯೇ ಇಲ್ಲ ಎಂದು ಜ್ಯೋತಿಷಿ ಹೇಳಿದ ಅಲ್ವಾ ಎಡಿಸನ್ ವಿದ್ಯುತ್ ಕಂಡುಹಿಡಿದರು. ಜೀವನದಲ್ಲಿ ದೊಡ್ಡ ದೊಡ್ಡ ಕನಸು ಕಾಣಿ ಎಂದು ಹೇಳಿದ ಅಬ್ದುಲ್ ಕಲಾಂ ಜೀವನದಲ್ಲಿ ಬಡತನದಲ್ಲಿ ಜನಿಸಿದರೂ ರಾಷ್ಟಪತಿ ಹುದ್ದೆಯ ತನಕ ಬೆಳೆದು ನಿಂತರು. ಹಣೆಬರಹ, ಭವಿಷ್ಯ, ಜ್ಯೋತಿಷಿ ಯಾರನ್ನೂ ನಂಬದೆ ನಿಮ್ಮ ಜೀವನವನ್ನುನೀವೆ ಕಟ್ಟಿಕೊಳ್ಳಿ ಎಂದು ಅವರು ಕರೆನೀಡಿದರು.

ಜೋಳದರಾಶಿ ತಿಮ್ಮಪ್ಪ ತಮ್ಮ ಗಳಿಕೆಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದು ನಿಜಕ್ಕೂ ಮಾದರಿ ಕೆಲಸ. ಇಂತಹ ಕೆಲಸ ಮಾಡುವುದರಿಂದ ಇತರರಿಗೂ ಮಾದರಿ ಆಗುತ್ತದೆ. ಆ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಆಗಲಿದೆ ಎಂದು ಅವರು ತಿಳಿಸಿದರು.

ಹಂಪಿ ಕನ್ನಡ ವಿವಿ ಸಹಾಯಕ ಪ್ರಾಧ್ಯಾಪಕ ಗುರುಬಸಪ್ಪ ಮಾತನಾಡಿ, ನಮ್ಮ ದೇಶದ ಅಸಮಾನತೆಯನ್ನು ನಿವಾರಿಸುವಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಬಹು ದೊಡ್ಡ ಕೆಲಸಮಾಡಿದೆ. ಇಲ್ಲವಾದರೆ ನಾವೆಲ್ಲಾ ಸಮ ಸಮಾಜ ನಿರ್ಮಾಣದ ಕನಸು ಕಾಣಲು ಆಗುತ್ತಿರಲಿಲ್ಲ ಎಂದರು.

ನಾಗೇನಹಳ್ಳಿ ನಂಜುಂಡೇಶ್ವರ ಶ್ರೀಗಳು, ನಾಗಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ರಂಗಕಲಾವಿದ ಹಾಗೂ ಪತ್ರಿಕಾ ಛಾಹಾಗ್ರಹಕ ಪುರುಷೋತ್ತಮ ಹಂದ್ಯಾಳು ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಿಕಾ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು. ಕನ್ನಡ ಶಿಕ್ಷಕಿ ಲಕ್ಷ್ಮಿ ಸ್ವಾಗತ ಕೋರಿದರು.

ಬೆಣಕಲ್ಲು ನಾಗಲಿಂಗತಾತ,ಉದ್ಯಮಿ ಜೋಳದರಾಶಿ ತಿಮ್ಮಪ್ಪ, BEO ರಹಮಾನ್‌ ಹಿರಿಯ ಪತ್ರಕರ್ತ ಅಹಿರಾಜ್ ಎಂ., ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಗೌಡ ಪೆಟ್ರೋಲ್ ಬಂಕ್ ಮಾಲಿಕರಾದ ಇಬ್ರಹಿಮ್,ಗ್ರಾಪಂ ಅಧ್ಯಕ್ಷರಾದ ರಾಮಣ್ಣ, ಸಿಂದವಾಳ ಭೀಮೇಶ ಸ್ವಾಮಿ,ಅಶೋಕ ಗೌಡ,ECO ಗೂಳ್ಳಪ್ಪ, ಶಾಲೆಯ ಉಪ ಪ್ರಾಂಶುಪಾಲರಾದ ಭಾರತಿ ಇತರರು ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!