IMG20240708110958

ಸೌಹಾರ್ಧಯುತ ಮೊಹರಂ ಹಬ್ಬದಲ್ಲಿ ಅಹಿತಕರ ಘಟನೆ ನಡೆಯಕೂಡದು: ಸಿಪಿಐ ಯಶವಂತ ತಾಕೀತು

ಕುಷ್ಟಗಿ: ಸರ್ವ ಸಮುದಾಯದವರು ಆಚರಿಸಲ್ಪಡುವ ಮೊಹರಂ ಹಬ್ಬದಲ್ಲಿ ಯಾವುದೇತರಹದ ಅಹಿತಕರ ಘಟನೆಗಳು ಗಲಾಟೆಗಳು ನಡೆಯದಂತೆ ಪ್ರತಿಯೊಬ್ಬ ಸಮಾಜದ ಮುಖಂಡರು ನೋಡಿಕೊಂಡು ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಸಿಪಿಐ ಯಂಶವಂತ ಬಿಸನಳ್ಳಿ ತಾಕೀತು ಮಾಡಿದರು.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೊಹರಂ ಪ್ರಯುಕ್ತ ಇಂದು ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ ಯಾವುದೇ ಜಾತಿ ಬೇಧ ಎನ್ನದೇ ಆಚರಿಸಲ್ಪಡುವ ಹಬ್ಬ ಮೊಹರಂ ಹಬ್ಬ. ಇದೊಂದು ಎಲದಲರು ಆಚರಿಸುವ ಸೌಹಾರ್ದಯುತ ಹಬ್ಬ. ಅನೇಕ ಗ್ರಾಮದಿಂದ, ಸುತ್ತ ಮುತ್ತಲಿನ ಊರುಗಳಿಂದ ವಲಸೆ ಹೋದ ಕೂಲಿಕಾರರು ಸಹ ಊರಿಗೆ ಬಂದು ಆಚರಿಸುವ ಹಬ್ಬವಾಗಿದ್ದು ಸಾಕಷ್ಟು ಜನ ಬಂದಿರುತ್ತಾರೆ. ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಶಾಂತಿಯುತವಾಗಿ ಆಚರಿಸಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿ. ಜಗಳ, ಗಲಾಟೆ, ಹೊಡಿ ಬಡಿ ಆಗದಂತೆ ನೋಡಿಕೊಳ್ಳಿರಿ. ಸಾಂತಿಯುತ ಆಚರಣೆಗೆ ನಮ್ಮ ಪೊಲಿಸ್ ಸಹಕಾರ‌ ಇದ್ದೆ ಇರುತ್ತೆ. ಮೊದಲಿಂದಲೂ ಹೇಗೆ ಆಚರಣೆ ನಡೆಯುತ್ತಾ ಬಂದಿದೆ ಅದೇ ರೀತಿ ಆಚರಿಸಿ. ಹಬ್ಬದಲ್ಲಿ ಮದ್ಯ ಕುಡಿಯುವದನ್ನು ತಪ್ಪಿಸಿ ಹಬ್ಬವನ್ನು ಸಂಭ್ರಮ, ಭಕ್ತಿಯಿಂದ ಆಚರಿಸಿ ಎಂದು ತಿಳಿಸಿದರು.

ನಂತರ ಪಿಎಸ್ಐ ಮುದ್ದುರಂಗಸ್ವಾಮಿ ಅವರು ಮಾತನಾಡಿ ಇಡೀ ಊರ ಹಬ್ಬದಂತೆ ಆಚರಿಸುವ ಹಬ್ಬ ಮೊಹರಂ. ಎಲ್ಲಾ ಜಾತಿ‌ಧರ್ಮದವರಿಂದ ಆಚರಿಸುವ ಹಬ್ಬ ಎಂದರೆ ತಪ್ಪಿಲ್ಲ. ಹೀಗಾಗಿ ಎಲ್ಲರೂ ಸೌಹಾರ್ದತೆಯಿಂದ ಆಚರಿಸಿ. ಗಲಾಟೆ ಆಗದಂತೆ ನಮಗೆ ಸಹಕಾರ ನೀಡಿ, ನಾವೂ ಸಹಕಾರ ನೀಡುತ್ತೇವೆ. ಗಲಾಟೆ ಕಂಡು ಬಂದಲ್ಲಿ ಕಾನೂನು ಕೈಗೆ ತೊಗೋಬೇಡಿ. ಯಾರಾದರೂ ಕಾನೂನು ಕೈಗೆ ತೆಗೆದುಕೊಂಡರೆ ಇದಕ್ಕೆ ನಾವೂ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಇಸ್ಮಾಯಿಲ ಸರಪಂಚ, ಆಲಂಪಾಶಾ ಮೋದಿ, ಅಮೀನುದ್ದೀನ ಮುಲ್ಲಾ, ಬಸವರಾಜ ಹೊಸಮನಿ, ಯಮನುರಪ್ಪ ಭೊವಿ, ಈಶಪ್ಪ ಬೊವಿ, ಮೈಹಿಬೂಬ ಕಮ್ಮಾರ, ಶಿವನಗೌಡ ಮದಲಗಟ್ಟಿ, ಬಾಷುಸಾಬ, ಮೋಹ್ಮದ ಅಲಿ, ಶ್ಯಾಮೀದಸಾಬ, ದೊಡ್ಡಬಸಪ್ಪ, ಹನಮೇಶ ಬೊವಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!