WhatsApp Image 2024-04-13 at 5.01.37 PM

ರಾಜಶೇಖರ ಹಿಟ್ನಾಳರನ್ನು ಬಹುಮತದಿಂದ ಗೆಲ್ಲಿಸಿ : ಶಾಸಕ ಬಿ.ಎಂ.ನಾಗರಾಜ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 13- ಈಗ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕ ದಲ್ಲಿರುವ ಗ್ಯಾರಂಟಿ ಗಳ ಇದೇ ತರಹದ ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ ಪ್ರತಿ ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಅನುದಾನ ನೀಡಲು ಮತ್ತು ಶ್ರಮಿಕರಿಗಾಗಿ ಪ್ರತಿದಿನ 400 ರೂಪಾಯಿ ರಾಷ್ಟ್ರೀಯ ಕನಿಷ್ಠ ವೇತನ ನೀಡಲಾಗುವುದು ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ್ ಅವರು ಹೇಳಿದರು.

ಸಿರುಗುಪ್ಪ ತಾಲೂಕು ಬೀರಳ್ಳಿ ಗ್ರಾಮದಲ್ಲಿ ಕೊಪ್ಪಳ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಪರ ಮತ ಯಾಚನೆಯ ಸಂದರ್ಭದಲ್ಲಿ ಮಾತನಾಡುತ್ತಾ ಬಡವರ ಪರವಾದ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬರಬೇಕು ನಾವೆಲ್ಲ ಕಾಂಗ್ರೆಸ್ ಗೆ ಕೈ ಬಲಪಡಿಸಬೇಕು ಎಂದು ಸಾರ್ವಜನಿಕರಲ್ಲಿ ಮನೆ ಮನೆ ತೆರಳಿ ಮತ ಯಾಚಿಸಿ ಬಹುಮತದಿಂದ ರಾಜಶೇಖರ್ ಹಿಟ್ನಾಳ್ ಅವರಿಗೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಚುನಾವಣೆಯ ಪ್ರಚಾರ ಕಾರ್ಯದ ಸಂದರ್ಭದಲ್ಲಿ ಸಿರುಗುಪ್ಪ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ತಾಲೂಕ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಎಂ ಮಾರುತಿ, ವರಪ್ರಸಾದ್ ರೆಡ್ಡಿ ಬೀರಳ್ಳಿ, ಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ, ಉಪಾಧ್ಯಕ್ಷ ಗ್ರಾಮ ಪಂಚಾಯತ್ ಸದಸ್ಯರು ಕಾಂಗ್ರೆಸ್ ಮುಖಂಡರು ಬಿ ಎಂ ಸತೀಶ್ ವೈ ರಾಮಸ್ವಾಮಿ ಸಾಹುಕಾರ ಬೀರಳ್ಳಿ ಗೋವಿಂದ ರೆಡ್ಡಿ, ಸೈಯದ್ ಮೊಯಿದ್ದೀನ್ ಖಾದ್ರಿ, ಚಿಕ್ಕ ಬಳ್ಳಾರಿ ಶ್ರೀನಿವಾಸ್ ರೆಡ್ಡಿ, ವಕೀಲ ಗಂಗಾರಾಮ್ ಸಿಂಗ್ ಬೀರಳ್ಳಿ, ಮಲ್ಲಿಕಾರ್ಜುನ ರೆಡ್ಡಿ, ಚೊಕ್ಕ ಪಾಲಾಕ್ಷ ಗೌಡ ರಾವಿಹಾಳು, ಹುಸೇನ್ ಪೀರ ಗೊರವಾರ, ಶ್ರೀನಿವಾಸ್ ಕೊತ್ತಲಚಿಂತ, ಕೃಷ್ಣಪ್ಪ ಹಚ್ಚೋಳ್ಳಿ, ಗಂಗಾಧರ ಸ್ವಾಮಿ, ನಗರಸಭಾ ಸದಸ್ಯ ಹೆಚ್ ಗಣೇಶ್, ಬೀರಳ್ಳಿ ಗ್ರಾಮದ ಮುಖಂಡರು, ಗ್ರಾಮ ಪಂಚಾಯತ್ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!