ಲಿಂಗಾಯತ ಸಮಾವೇಶದ ಎರಡನೇ ಪೂರ್ವಭಾವಿ ಸಭೆ ಯಶಸ್ವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ಬರುವ ಜೂನ್ 16 ರವಿವಾರ ಕೊಪ್ಪಳದಲ್ಲಿ ನಡೆಯಲಿರುವ ಲಿಂಗಾಯತ ಸಮಾವೇಶದ ಕುರಿತು ಎರಡನೇ ಪೂರ್ವಭಾವಿ ಸಭೆ ಕೊಪ್ಪಳದ ತಾಲೂಕಾ ಕ್ರೀಡಾಂಗಣದ ವೇದಿಕೆಯಲ್ಲಿ ಜಿಲ್ಲೆಯ ವಿವಿಧ್ಲ ಕಾಯಕ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.
ಸಂಗಮೇಶ ಬಾದವಾಡಗಿ ಮಾತನಾಡಿ ಎಲ್ಲರೂ ಲಿಂಗಾಯತಕ್ಕಾಗಿ ಒಗ್ಗಟ್ಟಿನ ಪ್ರದರ್ಶನ ಮಾಡೋಣ ಎಂದು ನುಡಿದರು. ರುದ್ರಮುನಿ ಗಾಳಿ, ಸೋಮನಗೌಡ ಪಾಟೀಲ ಮತ್ತು ಇನ್ನಿತರ ಮುಖಂಡರು ಮಾತನಾಡಿ ಲಿಂಗಾಯತ ಸಮಾವೇಶವನ್ನು ಅಚ್ಚುಕಟ್ಟಾಗಿ ಸಂಘಟಿಸುವಲ್ಲಿ ಕೊಪ್ಪಳದ ಎಲ್ಲ ಲಿಂಗಾಯತ ಸಮುದಾಯಗಳು ಶ್ರಮಿಸಬೇಕು ಎನ್ನುವ ತೀರ್ಮಾನಕ್ಕೆ ಬರಲಾಯಿತು.
ಇನ್ನೂ ಅನೇಕ ಸಭೆಗಳನ್ನು ನಡೆಸುವ ಆ ಮೂಲಕ ಎಲ್ಲರೂ ಒಕ್ಕೊರಲಿನಿಂದ ತನು-ಮನ-ಧನದಿಂದ ಕಾರ್ಯಕ್ರಮ ಯಶಸ್ಸುಗೊಳಿಸಬೇಕೆಂದು ಅಭಿಪ್ರಾಯಪಟ್ಟರು.
ಯಲ್ಲಪ್ಪ ಕಾಟ್ರಳ್ಳಿ, ನೀಲಕಂಠಯ್ಯ ಹಿರೇಮಠ, ವಿ.ಎಂ. ಭೂಸನೂರಮಠ, ವೀರಣ್ಣ ಸಂಕ್ಲಾಪುರ, ಮಲ್ಲಿಕಾರ್ಜುನ ಬಳ್ಳೊಳ್ಳಿ, ವಿಶ್ವನಾಥ ಬಳ್ಳೊಳ್ಳಿ, ಕಲ್ಲನಗೌಡರು, ದ್ಯಾಮಣ್ಣ ಮಾದಿನೂರು, ಗುಡಪ್ಪ ಹಡಪದ, ದಾನಪ್ಪ ಶೆಟ್ಟರ್, ಬಸವರಾಜ ಬಳ್ಳೊಳ್ಳಿ, ಸೋಮನಗೌಡ ಪಾಟೀಲ, ಆನಂದ ಅಳವಂಡಿ, ಬಸಣ್ಣ ಸಮಗಂಡಿ, ಮಹೇಶ ಮಿಟ್ಟಲಕೋಡ, ಭೂಮಕ್ಕನವರ, ಪ್ರಭಣ್ಣ ಹೆಬ್ಬಾಳ, ರೇವಣ್ಣ ಭೂತಣ್ಣನವರ, ಹಂಡೆವಜಿರ, ಹೇಮರೆಡ್ಡಿ ಬಿಸರಳ್ಳಿ, ಭೋಜಪ್ಪ ಕುಂಬಾರ, ಅಶೋಕ ಕುಂಬಾರ, ಸುರೇಶ ಕುಂಬಾರ, ಮಂಜುನಾಥ ಅಂಗಡಿ, ಗಾಳೆಪ್ಪ ಕಡೇಮನಿ, ಡಾ. ಸಂಗಮೇಶ ಕಲಹಾಳ ಹನುಮಂತಪ್ಪ ಚಲುವಾದಿ, ಬಸವರಾಜ ಕಮಲಾಪುರ, ಶೇಖರ್ ಎಸ್. ಇಂಗಳದಾಳ, ರಾಜೇಶ ಸಸಿಮಠ, ಮಂಜು ಬಣಗಾರ, ಕಾಶÀಪ್ಪ ಚಲುವಾದಿ ಸೇರಿದಂತೆ ವಿವಿಧ ಸಮಾಜಗಳ, ಸಂಘ-ಸAಸ್ಥೆಗಳ ಮುಖಂಡರು ಭಾಗವಹಿಸಿದ್ದರು.
