WhatsApp Image 2024-06-17 at 4.54.30 PM

ಲಿಂಗಾಯತ ಸ್ವತಂತ್ರ ಧರ್ಮವೆಂದು ಪ್ರತಿಪಾದಿಸಲು ಸಾಕಷ್ಟು ಪುರಾವೆಗಳಿವೆ : ಡಾ.ಎಸ್​.ಎಂ.ಜಾಮದಾರ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,17 – ಲಿಂಗಾಯತ ಸ್ವತಂತ್ರ ಧರ್ಮವೆಂದು ಪ್ರತಿಪಾದಿಸಲು ಸಾಕಷ್ಟು ಪುರಾವೆಗಳಿವೆ. ಜಾತಿ ಭೇದ ಬಿಟ್ಟು ಲಿಂಗಾಯತರೆಲ್ಲ ಧರ್ಮಕ್ಕಾಗಿ ಹೋರಾಡೋಣ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡಾ.ಎಸ್​.ಎಂ.ಜಾಮದಾರ ಹೇಳಿದರು.

ಅವರು ರವಿವಾರ ರಾತ್ರಿ ನಗರದ ಮಧುಶ್ರೀ ಗಾರ್ಡನ್​ನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಲಿಂಗಾಯತ ಸಮಾವೇಶದಲ್ಲಿ ಮಹಾಸಭೆ ಅಂದು&ಇಂದು ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಒಳ ಪಂಗಡಗಳನ್ನು ಬಿಟ್ಟು ಒಂದಾಗಬೇಕಾಗಿದೆ ,120 ವರ್ಷದ ಹಿಂದೆ ಧರ್ಮ ಒಗ್ಗೂಡಿಸಲು ವೀರಶೈವ ಲಿಂಗಾಯತ ಮಹಾಸಭಾ ಹುಟ್ಟಿಕೊಂಡಿತು. ವಚನಗಳ ಸಂಶೋಧನೆ ಆಗಿರಲಿಲ್ಲ. .ಗು.ಹಳಕಟ್ಟಿ ವಚನ ಸಂಗ್ರಹಿಸಿ ಪ್ರಕಟಿಸಿದರು. 800 ವರ್ಷಗಳ ಬಳಿಕ ವಚನಗಳು ಬೆಳಕಿಗೆ ಬರುತ್ತಿವೆ. ಅವುಗಳನ್ನು ಅಡಗಿಸಿಟ್ಟಿದ್ದು ಯಾರೆಂಬ ಬಗ್ಗೆ ಚಿಂತಿಸಬೇಕಿದೆ. ಸ್ವತಂತ್ರ ಧರ್ಮ ಮಾನ್ಯತೆ ಪಡೆಯುವುದು ಸುದೀರ್ ಹೋರಾಟ. ಈಗಾಗಲೇ ಸ್ವತಂತ್ರವಾಗಿರುವ ಧರ್ಮಗಳ ಹೋರಾಟ ಅರಿಯಬೇಕಿದೆ. ನಾವು ಆರಂಭದಲ್ಲಿ ಜಾಗತಿಕ ವೀರಶೈವ ಲಿಂಗಾಯತ ಮಹಾಸಭಾ ಮೂಲಕವೇ ಹೋರಾಟಕ್ಕೆ ಮುಂದಾದೆವು. ಆದರೆ, ಹಲವರು ನಾನಾ ವಿಧದಲ್ಲಿ ಅಡ್ಡಿಪಡಿಸಿದರು ಎಂದರು.

ಬಳಿಕ 2017ರಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹುಟ್ಟುಹಾಕಿದೆವು. ಆರಂಭದಲ್ಲಿ ಕೈ ಜೋಡಿಸಿದ ರಾಜಕಾರಣಿಗಳು ಚುನಾವಣೆಯಲ್ಲಿ ಸೋತ ನಂತರ ಕೈಬಿಟ್ಟರು. ರಾಜಕಾರಣಿಗಳು, ಬಸವ ತತ್ವ ಪಾಲಿಸದ ಮಠಾಧೀಶರನ್ನು ಬಿಟ್ಟು ಸಂಟನೆ ಮಾಡುತ್ತಿದ್ದೇವೆ. ಸಂಟನೆಗೆ ಬರುವವರು ಪಕ್ಷ ಬಿಟ್ಟು ಬರಬೇಕು. ರಾಜಕೀಯವಾಗಿ ಲಿಂಗಾಯತರನ್ನು ತುಳಿಯಲಾಗುತ್ತಿದೆ. ಕೇಂದ್ರ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡಲಿಲ್ಲ. ರಾಜ್ಯದಲ್ಲಿ ಡಿಸಿಎಂ ಸೇರಿ ಪ್ರಬಲ ಖಾತೆ ಲಿಂಗಾತರಿಗೆ ಸಿಕ್ಕಿಲ್ಲ. 40 ಶಾಸಕರಿದ್ದರೂ ಈ ಬಗ್ಗೆ ಗಟ್ಟಿಯಾಗಿ ಕೇಳುವ ಧೈರ್ಯವಿಲ್ಲ. ಜಾತಿ ಹೆಸರಿನಲ್ಲಿ ಒಡೆದು ಚೂರಾಗಿದ್ದೇವೆ. 8&9 ಜನ ಲಿಂಗಾಯತ ಸಿಎಂಗಳಾಗಿದ್ದರೂ ಸಮುದಾಯಕ್ಕೆ ಕೊಡುಗೆ ನೀಡಲಿಲ್ಲ. ಇತ್ತೀಚಿನ ಅಧಿವೇಶನದಲ್ಲಿ ವೀರಶೈವ ಮಹಾಸಭಾ ಲಿಂಗಾಯತರು ಹಿಂದುಗಳಲ್ಲ. ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕ. ಜನಗಣತಿಯಲ್ಲಿ ಲಿಂಗಾಯತ ಧರ್ಮ ಎಂದು ಬರೆಸಬೇಕೆಂದು ರ್ನಿಣಯ ಕೈಗೊಂಡಿರುವುದು ಸ್ವಾಗತಾರ್ಹ. ನಮ್ಮ ವಿಚಾರಗಳು ಅವೇ ಆಗಿವೆ ಎಂದು ಬೆಂಬಲಿಸಿದರು.

ಕಾರ್ಯಕ್ರಮದಲ್ಲಿ ಶರಣೆ ಮೀನಾ ಬಾಳಿ ಸ್ತ್ರೀ ಕುಲೋದ್ಧಾರಕ ಬಸವಣ್ಣ ವಿಷಯ ಕುರಿತು ಮಾತನಾಡಿ, ಹೆಣ್ಣು ಮತ್ತು ಗಂಡೆಂಬುದು ನಿಸರ್ಗದ ನಿಯಮ. ಉದ್ಧಾರ ಅನ್ನುವ ಪದದಲ್ಲೇ ಹಿಂದು ಧರ್ಮದ ವಾಸನೆ ಅಡಗಿದೆ. ಹೆಣ್ಣು ಒಂದು ಲಿಂಗ, ಜೀವ ಎಂದು ಸಾರಿದ್ದು ಬಸವ ತತ್ವ. 32 ವಚನಕಾರ್ತಿಯರು ತಮ್ಮ ಸಮಸ್ಯೆಗಳನ್ನು ಎತ್ತಿ ಮಾತನಾಡಿದ್ದಾರೆ.

ಹೆಣ್ಣಿಗೆ ಸಮಾನತೆ ತಂದುಕೊಟ್ಟಿದ್ದು ವಚನ ಸಾಹಿತ್ಯ. ಮಹಿಳೆಯರು ಮುಖ್ಯ ವೇದಿಕೆಗೆ ಬಂದಾಗ ಲಿಂಗಾಯತ ಧರ್ಮ ಆಗಲಿದೆ. ಹಾಸನದಲ್ಲಿ ಕಾಮುಕರು ಮಧ್ಯಮ ವರ್ಗದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅವರಲ್ಲಿ ಲಿಂಗಾಯತರಿದ್ದಾರೆ. ಜಾತಿ, ಧರ್ಮ ಮಾಡಬೇಡಿ. ಅಂತರ್ಜಾತಿ ವಿವಾಹ ಮಾಡಿ. ಆಗ ಲಿಂಗಾಯತ ಧರ್ಮ ಬೆಳೆಯಲಿದೆ ಎಂದರು.

ಬಸವ ಸಮಿತಿ ರಾಜ್ಯಾಧ್ಯಕ್ಷ ಡಾ.ಅರವಿಂದ ಜತ್ತಿ ನಾನು ಲಿಂಗಾಯತ ವಿಷಯ ಕುರಿತು ಉಪನ್ಯಾಸ ನೀಡಿದರು. ಸಂಡೂರಿನ ವಿರಕ್ತಮಠದ ಪ್ರಭು ಮಹಾಸ್ವಾಮಿ ಸಾನ್ನಿಧ್ಯವಹಿಸಿದ್ದರು. ಹೈಕೋರ್ಟ್​ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ, ಮಹಾಸಭಾ ಪದಾಧಿಕಾರಿಗಳಾದ ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ಪ ಕೊಪ್ಪಳ, ಡಾ.ಸಂಗಮೇಶ ಕಲಹಾಳ, ಅರ್ಚನಾ ಸಸಿಮಠ, ಹನುಮೇಶ ಕಲ್ಮಂಗಿ, ದಾನಪ್ಪ ಶೆಟ್ಟರ್​, ಪ್ರಭು ಹೆಬ್ಬಾಳ, ಕರಿಯಪ್ಪ ಮೇಟಿ ಇತರರು ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!