ಈದ್ ಉಲ್ ಅಝ್ಹಾ ಮುಬಾರಕ್ ತ್ಯಾಗ ಬಲಿದಾನದ ಸಂಕೇತ ಬಕ್ರೀದ್ ಸಂಭ್ರಮ ಆಚರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 17- ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಸಹೋದರತ್ವ ಬೆಳೆಸಿಕೊಳ್ಳುವುದು ಅಲ್ಲಾಹನಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಸಂದೇಶ ಸಾರುತ್ತದೆ ಎಂದು ಇಮಾಮೊ ಖತೀಬ್ ಮೊಹಮ್ಮದ್ ಅಮೀಸ್ ಅವರು ಹೇಳಿದರು.
ಸಿರುಗುಪ್ಪ ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಕುತುಬ ಖಾನಿ ಭಾಷಣದಲ್ಲಿ ಅವರು ಮಾತನಾಡುತ್ತಾ ಖುರ್ಬಾನಿ ನೀಡುವುದು ಪ್ರಮುಖ ಆಚರಣೆ ಯಾಗಿದೆ ಅಲ್ಲಾಹನ ಆದೇಶ ಅನುಸಾರ ಪ್ರವಾದಿ ಇಬ್ರಾಹಿಂ ಅವರು ತಮ್ಮ ಪುತ್ರ ಪ್ರವಾದಿ ಇಸ್ಮಾಯಿಲ್ ಅವರನ್ನು ಬಲಿ ಅರ್ಪಿಸಲು ಮುಂದಾಗುವರು ತಮ್ಮ ಮಗ ಅವರನ್ನೆ ಬಲಿ ನೀಡಲು ಸಿದ್ಧವಾಗಿದ್ದ ಪ್ರವಾದಿ ಇಬ್ರಾಹಿಂ ಅವರ ಭಕ್ತಿಯನ್ನು ಅಲ್ಲಾಹನು ಮೆಚ್ಚಿ ಪುತ್ರನ ಬದಲು ಒಂದು ದುಂಬಾ ಟಗರು ಬಲಿ ಅರ್ಪಿಸುವಂತೆ ಸೂಚಿಸುತ್ತಾರೆ ಎಂಬ ಧರ್ಮ ಗ್ರಂಥದಲ್ಲಿ ತಿಳಿಸಲಾಗಿದೆ.
ಜಾನುವಾರು ಬಲಿ ಖುರ್ಬಾನಿ ಅರ್ಪಿಸಲಾಗುತ್ತದೆ ಪ್ರಾಣಿ ಯಿಂದ ಲಭಿಸಿದ ಮಾಂಸವನ್ನು ಸಮನಾಗಿ ಮೂರು ಪಾಲು ಮಾಡಿ ಒಂದು ಭಾಗವನ್ನು ಸ್ವಂತಕ್ಕೆ ಇನ್ನೊಂದು ಭಾಗ ಸಂಬಂಧಿಕರಿಗೆ ಮತ್ತು ಮಿತ್ರ ಬಂದು ಬಳಗದವರಿಗೆ ಮತ್ತೊಂದು ಭಾಗ ಬಡವರಿಗೆ ಹಂಚಬೇಕು ಮಾಂಸ ಸೇವಿಸುವ ಎಲ್ಲಾ ಸರ್ವಧರ್ಮದವರಿಗೂ ಮಾಂಸ ನೀಡಬಹುದಾಗಿದೆ ಮಾನವೀಯತೆ ಯಡಿ ಎಲ್ಲರೂ ಸರಿ ಸಮಾನ ಎಂಬ ಇಸ್ಲಾಂ ಒಂದು ಪಾರದರ್ಶಕ ಧರ್ಮ ಪ್ರವಾದಿ ಆದಮ್ ಅವರ ಮೂಲಕ ಆರಂಭಗೊಳ್ಳುವ 124000 ಪ್ರವಾದಿಯವರ ಪರಂಪರೆ ಮೊಹಮ್ಮದ್ ಪೈಗಂಬರ್ ಅವರ ಮೂಲಕ ಕೊನೆಗೊಳ್ಳುತ್ತದೆ ಜಗತ್ತಿನ ಎಲ್ಲಾ ಮುಸಲ್ಮಾನರು ಪ್ರವಾದಿ ಮಹಮ್ಮದರ ಅನುಯಾಯಿಗಳು ಹಾಫೀಜೊ ಕುರಾನ್ ಹಾಫಿಜ್ ಮೊಹಮ್ಮದ್ ಕಲಂದರ್ ಅವರು ನಮಾಜ್ ಸಾಮೂಹಿಕವಾಗಿ ನಿರ್ವಹಿಸಿ ದುವಾ ಯಾಚಿಸಿದರು ಸನ್ಮಾರ್ಗದಲ್ಲಿ ಸಾಗುವ ಧೃಢ ಸಂಕಲ್ಪ ಇದಾಗಿದೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಎಲ್ಲಾರಿಗೂ ಆಶೀರ್ವಚನ ನೀಡಿದರು.
ಸಿರುಗುಪ್ಪ ನಗರದ ಸೌದಾಗರ್ ಜುಮ್ಮ ಸುನ್ನಿ, ಮಸೀದಿಯಲ್ಲಿ ಮೌಲಾನ ಹಾಜಿ ಎಸ್ ಅಬ್ದುಲ್ ಸಮದ್ ನಿಜಾಮಿ ಖತೀಬ್ ಇಮಾಮೊ ಮೌಲಾನ ಮೊಹಮ್ಮದ್ ಅಮೀಸ್ ಜಿಲ್ಲಾ ವಕ್ಫ್ ಮಾಜಿ ಸದಸ್ಯರು ಸಮಾಜ ಸುಧಾರಕರು ಹಾಜಿ ಅಬ್ದುಲ್ ನಬಿ ನಿಜಾಮಿ ಹಾಜಿ ಹಂಡಿಹುಸೇನ್ ಬಾಷಾ ಖತೀಬ್ ಜಹೀರುದ್ದೀನ್ ಬಾಬು ಸೌದಾಗರ್ ಮಸೀದಿ ಅಧ್ಯಕ್ಷ ಮಕಾಂದಾರ್ ಮಹಬೂಬ್ ಬಾಷಾ ಹಾಜಿ ಮೊಹಮ್ಮದ್ ಇಬ್ರಾಹಿಂ ಮೊಹಮ್ಮದ್ ರಫಿ ಮೊಹಮ್ಮದ್ ನೌಶಾದ್ ಅಲಿ ಸೇರಿ ಇತರ ಗಣ್ಯರಿಗೆ ಗೌರವಿಸಿ ಸನ್ಮಾನವನ್ನು ಹಂಡಿ ಅಬ್ದುಲ್ ಕರಿಂ ಸಾಬ್ ನವರ ಮಗ ಹಂಡಿ ಹುಸೇನ್ ಸಾಬ್ ಗೌರವ ಪೂರ್ವಕ ಸನ್ಮಾನಿಸಿದರು ಈದ್ಗಾ ಮೈದಾನದಲ್ಲಿ ಜನಪ್ರಿಯ ಶಾಸಕ ಬಿ ಎಂ ನಾಗರಾಜ್ ಮತ್ತು ಕಾಂಗ್ರೆಸ್ ಮುಖಂಡರು ಈದ್ಗಾ ಮತ್ತು ಖಬರ ಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಹಂಡಿ ಹಾಶಿಮ್ ಎಲ್ಲಾ ಸದಸ್ಯರು ಧಾರ್ಮಿಕ ಗುರುಗಳು ಉಲ್ಮ ಇಕ್ರಾಂ ಡಾ. ಮೊಹಮ್ಮದ್ ಅಲಿ ಡಬಲ್ ಬಾಂಡ್ ಹಾಜಿ ಟಿ ಜಿ ಅಬ್ದುಲ್ ಗನಿ ಚಿಟಿಕಿ ಹುಸೇನ್ ಭಾಷಾ ಹಾಜಿ ಬಿ ಮೆಹಮೂದು ಮೋದಿ ನ್ ಮೀರ್ ಹುಸೇನ್ ಮುಲ್ಲಾ ದಾದಾ ಖಲಂದರ್ ಕಲೀಮುಲ್ಲಾ ಸಲ್ಟಾತುದ್ದೀನ್ ಚೌದ್ರಿ ಖಾಜಾಸಾಬ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.ಶಾಹಿ ಜಾಮಿಯಾ ಬಡಿ ಮಸೀದ್ ಜಾಮ ನಿಜಾಮಿ ಮಸೀದ್ ವಲ್ಲೂರ್ ಮಸೀದ್ ಹಾಜಿ ಮಸೀದ್ ಸೌದಾಗರ್ ಮಸೀದ್ ಲಾಡ್‌ಖಾನ್ ಮಸೀದಿ ಖಾದ್ರಿಯ ಮಸೀದ್ ಮೊಹಮ್ಮದೀಯ ಅಬೂಬಕ್ಕರ್ ಸಿದ್ದೀಕ್ ಮಸೀದಿ ಹಾಜಿ ಮಸೀದ್ ಅಕ್ಬರಿ ಮದಿನಾ ಮಸೀದ್ ಗೌಸಿಯಾ ಮಜೀದ್ ದರ್ಗಾ ಮಸೀದ್ ದಾರುಲ್ ವುಲೂo ಮದರಸ ಮಸೀದ್ ಎಲ್ಲಾ ಮೊಹಲ್ಲಾ ಮಸೀದಿಗಳಿಂದ ಬೃಹತ್ ಸಂಖ್ಯೆಯಲ್ಲಿ ಮುಖ್ಯಸ್ಥರು ಸೇರಿ ಮುಖ್ಯ ರಸ್ತೆಗಳಿಂದ ಅಲ್ಲಾಹನ ಮಹತ್ವದ ನುಡಿ ಮುತ್ತುಗಳ ಭಕ್ತಿಯಿಂದ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಲಾ ಇಲಾಹಾ ಇಲ್ಲಲ್ಲಾ ಹು ಅಲ್ಲಾ ಹು ಅಕ್ಬರ್ ಅಲ್ಲಾಹು ಅಕ್ಬರ್ ವಲಿಲ್ಲಾಹ್ ಹಿಲ್ ಹಮ್ಡ್ ಶಾಂತಿ ರೀತಿಯಿಂದ ಉತ್ಸಾಹದಿಂದ ಈದ್ಗಾ ಮೈದಾನಕ್ಕೆ ತೆರಳಿದರು.
ನಮಾಜ್ ದುವಾ ಯಾಚನೆ ನಂತರ ಮುಸ್ಲಿಂ ನೌಕರರ ಸಂಘದಿಂದ ಸಿರುಗುಪ್ಪ ತಾಲೂಕಿನ ಎಸ್ ಎಸ್ ಎಲ್ ಸಿ ಪಿ ಯು ಸಿ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾ ಮಕ್ಕಳಿಗೆ ಗೌರವಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು ಪರಸ್ಪರ ಒಬ್ಬರನ್ನೊಬ್ಬರು ವಿನಿಮಯದಿಂದ ಈದ್ ಮುಬಾರಕ್ ಹಬ್ಬದ ಶುಭಾಶಯ ಕೋರಿದರು.
ಖಬರಸ್ಥಾನಕ್ಕೆ ತೆರಳಿ ಜಿಯಾರತ್ ದರ್ಶನ ಪಡೆದರು ಗೋರಿಗಳಿಗೆ ಹೂ ಅರ್ಪಿಸಿ ಕುರಾನ್ ಪಾತೇಹ ಓದಿಕೆ ನಂತರ ಖುರ್ಬಾನಿ ಕಾರ್ಯದಲ್ಲಿ ನಿರತರಾದರು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು ಸಿರುಗುಪ್ಪ ತಾಲೂಕಿನಾದ್ಯಂತ ಬಕ್ರೀದ್ ಹಬ್ಬ ಭಕ್ತಿಯಿಂದ ಆಚರಿಸಲಾಯಿತು.
