WhatsApp Image 2024-04-08 at 5.07.06 PM

ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಸಹಿ ಸಂಗ್ರಹಣಾ ಅಭಿಯಾನ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 8- ನಗರಸಭೆ ವತಿಯಿಂದ ಪ್ರಮುಖ ವೃತ್ತದ ಬಳಿ ಇರುವ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಾಗಿ ಮತದಾನಕ್ಕಾಗಿ ಸಹಿ ಸಂಗ್ರಹಣೆ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಉದ್ಯಾನವನದಲ್ಲಿನ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಾಂಗ ದಂಡಾಧಿಕಾರಿಗಳಾದ ಹಾಜಿ ಹುಸೇನ್ ಸಾಬ್ ಯಾದವಾಡ ಮತ್ತು ಗಣ್ಯರು ಪುಷ್ಪಮಾಲೆ ಹಾಕಿ ನಮನಗಳನ್ನು ಸಲ್ಲಿಸಿದರು.

ಜಿಲ್ಲಾಡಳಿತ ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ ತಾಲೂಕು ಸ್ವೀಪ್ ಸಮಿತಿ ಸಿದ್ಧಪಡಿಸಿದ್ದ ಮತ್ತು ನಗರಸಭೆ ಕಾರ್ಯಾಲಯ ಇವರುಗಳಿಂದ ಸಿದ್ಧಪಡಿಸಿದ್ದ ಸಹಿ ಸಂಗ್ರಹಣಾ ಫಲಕದಲ್ಲಿ ನ್ಯಾಯಾಧೀಶರು ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಅಮರೇಶ್ ಮತದಾನದ ಪ್ರತಿಜ್ಞಾವಿಧಿ ಬೊಧಿಸಿದರು ಎಲ್ಲರೂ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಜಾಗೃತಿ ಸಂದೇಶ ಮೂಡಿಸಲಾಯಿತು.

ನಗರಸಭೆಯ ಪೌರಾಯುಕ್ತ ಹೆಚ್ ಎನ್ ಗುರುಪ್ರಸಾದ್, ತಾಲೂಕು ಆರೋಗ್ಯ ಅಧಿಕಾರಿ ಡಾ . ಬಿ ಈರಣ್ಣ, ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ವ್ಯವಸ್ಥಾಪಕ ಪ್ರಶಾಂತ್ ಆರ್ ಓ ಅನಂತ, ಕಂದಾಯ ಅಧಿಕಾರಿಗಳಾದ ರಾಜಬಕ್ಷಿ, ವೆಂಕೋಬ, ಸುರೇಶ, ಪಂಪಾ, ಗೌಡ ಖಾದರ್ ತಾಹೆರ್ ಸಿಬ್ಬಂದಿಗಳು ಹಾಗೂ ಬೀದಿಬದಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಇದ್ದರು.

ಸೆಲ್ಫಿ ಬೂತಿನಲ್ಲಿ ನ್ಯಾಯಾಧೀಶರು ಮತ್ತು ಹಿರಿಯ ಅಧಿಕಾರಿಗಳು ಸೆಲ್ಫಿ ತೆಗೆದುಕೊಂಡು ಮತದಾನದ ಜಾಗೃತಿ ಮೂಡಿಸಿದರು.

Leave a Reply

Your email address will not be published. Required fields are marked *

error: Content is protected !!