993633f7-1bb6-4650-9b93-e066bf2759b6

ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್ 

ಭಿನ್ನಮತಕ್ಕೆ ಜಮೀರ್ ಅಹ್ಮದ್ ಕಾರಣ : ಶಿರಾಜ್ ಶೇಖ್

ಕರುನಾಡ ಬೆಳಗು ಸುದ್ದಿ

ಹೊಸಪೇಟೆಯ (ವಿಜಯನಗರ )16 – ಕಾಂಗ್ರೆಸ್ ಪಕ್ಷದಿಂದ ಸಹಕಾರಿ ಕಲ್ಯಾಣಮಂಟಪದಲ್ಲಿ 2024ರ ಲೋಕಸಭಾ ಚುನಾವಣೆಯ ಬೃಹತ್ ಪೂರ್ವಭಾವಿ ಸಭೆನಡೆಯಿತು.

ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ ಜೆ ಡ್ ಜಮೀರ್ ಅಹಮದ್ ರವರು ಗೈರಾಗಿದ್ದು , ಮತ್ತು ವಿಜಯನಗರ ಜಿಲ್ಲಾಧ್ಯಕ್ಷ  ಶಿರಾಜ್ ಶೇಖ್ ಅವರು ಸಹ ಸಭೆಗೆ ಗೈರಾಗಿದ್ದು ಕಂಡುಬಂದಿದ್ದು. ಮೇಲ್ನೋಟಕ್ಕೆ ಭಿನ್ನಮತ ಸ್ಪೋಟವಾಗಿದೆ ಎಂದು ತಿಳಿದುಬಂದಿದೆ.

ವಿಜಯನಗರ ಕ್ಷೇತ್ರದ ಜನಪ್ರಿಯ ಬಳ್ಳಾರಿ ಲೋಕಸಭಾ ಕ್ಷೇತ್ರ ಎಸ್ಟಿ ಮೀಸಲು ಕ್ಷೇತ್ರ ವಾಗಿದ್ದು ಈ ಹಿಂದೆ ಕಾಂಗ್ರೆಸ್ ಪಕ್ಷ ದಿಂದ ಅತಿ ಹೆಚ್ಚು ಮತಗಳನ್ನು ಪಡೆದು ವಿಜೇತರಾಗಿದ್ದ ಮಾಜಿ ಸಂಸದ ಉಗ್ರಪ್ಪ, ನಾಗೇಂದ್ರ ಅವರ ಸಹೋದರ ವೆಂಕಟೇಶ್, ಕೂಡ್ಲಿಗಿಯ ನಾಗಮಣಿ ಜಿಂಕಲ್, ಮತ್ತು ಗುಜ್ಜಲ್ ನಾಗರಾಜ್ ರವರು 2024ರ ಲೋಕಸಭಾ ಚುನಾವಣೆಯ ಪ್ರಭಲ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು. ಇಂತಹ ಬೃಹತ್ ಸಭೆಗೆ ಹಾಜರಾಗಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಜಿಲ್ಲಾಧ್ಯಕ್ಷರಾದ ಶಿರಾಜ್ ಶೇಖ್ ರವರು ಸಹ ಗೈರಾಗಿದ್ದಿದ್ದು ಕಾಂಗ್ರೆಸ್ ವಲಯದಲ್ಲಿ ಕುತೂಹಲ ಕೆರಳಿಸಿದೆ. ಅವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪೂರ್ವಭಾವಿ ಸಭೆ ನಡೆಯಿತು. ಕಾರ್ಯಕರ್ತರಲ್ಲಿ ಗೊಂದಲದ ಗೂಡಾಗಿ ಪರಿಣಾಮಿಸಿದೆ, ಈ ಸಭೆಯಲ್ಲಿ ಹಲವಾರು ಮುಖಂಡರು ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪಕ್ಷದ ನಾಯಕರು ಒಮ್ಮತದಿಂದ ಒಟ್ಟಿಗೆ ಸೇರಿ ಕೆಲಸ ಮಾಡಲು ಅಭಿಪ್ರಾಯವನ್ನು ತಿಳಿಸಿದರು.

ಶಾಸಕ   ಹೆಚ್ ಆರ್ ಗವಿಯಪ್ಪ, ಜವಳಿ ಮತ್ತು ಕಬ್ಬು, ಸಕ್ಕರೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಬಳ್ಳಾರಿ ಜಿಲ್ಲೆಯ ಲೋಕಸಭಾ ಚುನಾವಣೆಯ ವೀಕ್ಷಕರಾಗಿ ಆಗಮಿಸಿದ್ದರು, ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ನಾಗೇಂದ್ರ, ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್, ಹರಪನಹಳ್ಳಿ ಕ್ಷೇತ್ರದ ಶಾಸಕಿ ಎಂಪಿ ಲತಾ, ಕಂಪ್ಲಿ ಕ್ಷೇತ್ರದ ಶಾಸಕ ಜೆ ಎನ್ ಗಣೇಶ್, ಸಂಡೂರು ಕ್ಷೇತ್ರದ ಶಾಸಕ ಇ ತುಕಾರಾಂ, ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾಭರತ್ ರೆಡ್ಡಿ, , ಕೆ ಮ್ ಎಫ್ ಅಧ್ಯಕ್ಷ ಭೀಮ ನಾಯಕ್, ಮಾಜಿ ಸಂಸದ ಉಗ್ರಪ್ಪ, ಗುಜ್ಜಲ್ ನಾಗರಾಜ್, ಪಟ್ಟಣ ಪಂಚಾಯಿತಿಯ ಹಾಗೂ ತಾಲೂಕು/ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸಧ್ಯಸರು, ಮಾಜಿ ಸಧ್ಯಸರು, ಪರಾಜಿತ ಅಭ್ಯರ್ಥಿಗಳು. ಹೊಸಪೇಟೆ ವಿಧಾನಸಭಾದ ಮುಂಚೂಣಿ ಘಟಕಗಳ ಅಧ್ಯಕ್ಷರು, ಹಾಗೂ ಸದಸ್ಯರು, ಪಧಾದಿಕಾರಿಗಳು, ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ ನಾಯಕರು, ಮುಖಂಡರು, ಉಪಸ್ತಿತರಿದ್ದರು.

 

ಜಮೀರ್ ಅಹ್ಮದ್ ಎಂದು ವಿಜಯನಗರ ಜಿಲ್ಲೆಗೆ ಕಾಲಿಟ್ಟರು ಅಂದಿನಿಂದ ಕಾಂಗ್ರೆಸ್ ನಲ್ಲಿ ಬಣಗಳಾಗಿವೆ. ಪ್ರೋಟೋಕಾಲ್ ಪ್ರಕಾರ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆಯಬೇಕಿದ್ದ ಪೂರ್ವಭಾವಿ ಸಭೆ, ಬೇರೆ ಎಲ್ಲೋ ನಡೆದಿದೆ, ನಮಗೆ ಯಾವುದೇ ರೀತಿಯ ಅಧಿಕೃತ ಆಹ್ವಾನ ನೀಡದೆ ನಡೆಸಿದ್ದಾರೆ.

– ಸಿರಾಜ್ ಶೇಖ್

  ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ

Leave a Reply

Your email address will not be published. Required fields are marked *

error: Content is protected !!