ರಜಾ ದಿನಗಳಲ್ಲಿ ಕೆಲಸ ಜಿಲ್ಲಾಧಿಕಾರಿಗಳಿಗೆ ಮನವಿ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ ) ಜ.01: ಕಂದಾಯ ಇಲಾಖೆಯಲ್ಲಿ ವೃತ್ತಿಯಲ್ಲಿ ಕೆಲಸದ ಜೊತೆ ಬೇರೆ ಇಲಾಖೆಯ ಕೆಲಸಗಳನ್ನು ಮಾಡಿಸುತ್ತಿದ್ದುದ್ದರಿಂದ ಕೆಲಸದ ಒತ್ತಡ ಜಾಸ್ತಿಯಾಗಿ ನೌಕರರು ಒತ್ತಡ ಕ್ಕೊಳಗಾಗಿ ಆತ್ಮಹತ್ಯೆ, ಹೃದಯಗಾಥದಂತಹ ಪ್ರಕರಣಗಳು ಕಂಡು ಬರುತ್ತಿವೆ ಅಧಿಕಾರಿಗಲು ಸಹಕರಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಲವಾರು ಬೇಡಿಕೆಗಳನ್ನಿಟ್ಟುಕೊಂಡು ಮನವಿಯನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘದದಿಂದ ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಿಲ್ಲಿಸಿದ್ದು , ಹಲವಾರು ನ್ಯೂನ್ಯತೆಗಳಿದ್ದು ಅವುಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳ ಮುಖಾಂತರ ಕಂದಾಯ ಸಚಿವರಿಗೆ ಹಲವು ಬೇಡಿಕೆಗಳೊಂದಿಗೆ ಮನವಿಯನ್ನು ಸಲ್ಲಿಸಸಿದ್ದಾರೆ.
ಬೇಡಿಕೆಗಳು : ಕಂದಾಯ ಇಲಾಖೆಯಲ್ಲಿ ಬೇರೆ ಇಲಾಖೆಯ ಕೆಲಸಗಳನ್ನು ಕಂದಾಯ ಸಿಬ್ಬಂದಿಯಿಂದ ಮಾಡಿಸುತ್ತಿದ್ದು, ಪ್ರತಿ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸಲು ಹಾಗೂ ಸಂಜೆಯಿಂದ ರಾತ್ರಿ ಸಮಯದಲ್ಲಿ ಗೂಗಲ್ ಮೀಟಿಂಗ್ ಮಾಡುತ್ತಿದ್ದು, ಪ್ರತಿ ಸಾರ್ವಜನಿಕ ರಜಾ ದಿನಗಳಲ್ಲಿಯೂ ಸಹಾ ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ರವರು ಒತ್ತಡ ಹಾಕುತ್ತಿರುವುದು ಸಂಘದ ಗಮನಕ್ಕೆ ಬಂದಿದ್ದು, ಇದರಿಂದ ಕೆಲವು ನೌಕರರುಗಳು ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಪ್ರಕರಣ ಹಾಗೂ ಹೃದಯಾಘಾತ ಆಗುತ್ತಿರುವುದರಿಂದ ರಜಾ ದಿನಗಳಲ್ಲಿ (ಅನಿವಾರ್ಯ ಸಂದರ್ಭ ಹೊರತುಪಡಿಸಿ) ಕೆಲಸ ಕಾರ್ಯಗಳನ್ನು ಕೈಬಿಡುವುದು ಹಾಗೂ ಬೇರೆ ಇಲಾಖೆಯ ಕೆಲಸ ನಿರ್ವಹಿಸಿದ್ದಕ್ಕೆ ಸಂಭಾವನೆ (Remuneration) ನೀಡಲು ಕೋರಿದೆ.
ರಾಜ್ಯ ಕಂದಾಯ ಇಲಾಖೆಯಲ್ಲಿ ಸರಿ ಸುಮಾರು 4,000 ಗ್ರಾಮ ಆಡಳಿತಾಧಿಕಾರಿಗಳು/ಪ್ರ.ದ.ಸ ಹಾಗೂ ದ್ವಿ.ದ.ಸ, ಹಾಗೂ ಇನ್ನಿತರೆ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಿ ಹಾಲಿ ನೌಕರರ ಕಾರ್ಯ ಒತ್ತಡ ಕಡಿಮೆ ಮಾಡುವುದು. ಕಂದಾಯ ಇಲಾಖೆಯಲ್ಲಿ ಕುಟುಂಬದ ಸಮಸ್ಯೆ, ಆರೋಗ್ಯ ಸಮಸ್ಯೆ ಇರುವ ನೌಕರರುಗಳಿಗೆ ಅಂತರ ಜಿಲ್ಲಾ ವರ್ಗಾವಣೆಯನ್ನು ಮರು ಜಾರಿಗೊಳಿಸುವುದು ಅಥವಾ ನಿಯೋಜನೆಗಳನ್ನು ಅನಿವಾರ್ಯ ಸಂದರ್ಭಗಳಲ್ಲಿ ಮುಂದುವರೆಸುವುದು.
ಸಿವಿಲ್ ವ್ಯಾಜ್ಯ (ಅಪೀಲಬಲ್) ಪ್ರಕರಣಗಳಲ್ಲಿ ಪೊಲೀಸರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸುತ್ತೋಲೆ ಇದ್ದರು ಸಹ ಕಂದಾಯ ಅಧಿಕಾರಿಗಳ ಮೇಲೆ ಎಫ್ ಐ ಆರ್ ದಾಖಲಿಸುತ್ತಿದ್ದು, ಸದರಿ ಸುತ್ತೋಲೆಯನ್ನು ಸರ್ಕಾರದ ಆದೇವನ್ನಾಗಿ ಮಾಡಿಕೊಡಲು ಕೋರಿದೆ. ಇನ್ನು ಹತ್ತು ಹಲವು ಬೇಡಿಕೆಗಳು ಮನವಿ ಪಾತ್ರದಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಅಂದಾನ ಗೌಡ ಡಿ, ಇಒ ಉಮೇಶ್, ಇತರರಿದ್ದರು
