ವಿದ್ಯಾನಿಕೇತನ ಕಾಲೇಜ-ಪಿಯೂಸಿಯಲ್ಲಿ-ರಾಜ್ಯಮಟ್ಟಕ್ಕೆ-6ನೇ ಸ್ಥಾನ
ಕರುನಾಡ ಬೆಳಗು ಸುದ್ದಿ
ಗಂಗಾವತಿ,12 – ತಾಲ್ಲೂಕಿನ ಶ್ರೀರಾಮನಗರ ಹಾಗೂ ಗಂಗಾವತಿಯಲ್ಲಿರುವ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾಥಿಗಳು ಸಾಧನೆ ಮಾಡಿದ್ದಾರೆ. ಒಬ್ಬ ವಿದ್ಯಾರ್ಥಿಗೆ ರಾಜ್ಯಮಟ್ಟದಲ್ಲಿ ೬ನೇ ಸ್ಥಾನ ಲಭಿಸಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ಸೂರಿಬಾಬು ಹೇಳಿದರು.
ತಾಲೂಕಿನ ವಡ್ಡರಹಟ್ಟಿಯಲ್ಲಿರುವ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಶ್ರೀರಾಮನಗರ ಕಾಲೇಜಿನ ಕಾವ್ಯ ಎಂಬ ವಿದ್ಯಾರ್ಥಿ 600ಕ್ಕೆ ೫೯೩ ಅಂಕ ಪಡೆದ ರಾಜ್ಯಮಟ್ಟದಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದಾಳೆ.
ವಿಜ್ಞಾನ ವಿಭಾಗದಲ್ಲಿ ಕೊಪ್ಪಳ ಜಿಲ್ಲೆಯ ಟಾಪ್ ಐದು ಸ್ಥಾನಗಳ ಪೈಕಿ ಎರಡರಿಂದ ಐದನೇ ಸ್ಥಾನದಲ್ಲಿ ವಿದ್ಯಾನಿಕೇತನ ಕಾಲೇಜಿನ ೧೫ ಮಕ್ಕಳು ಸ್ಥಾನ ಸಂಪಾದಿಸಿಕೊಂಡಿದ್ದಾರೆ. ವಾಣಿಜ್ಯ ವಿಭಾಗದ ಮೊದಲ ಐದರಲ್ಲಿ ಎರಡು, ಮೂರು, ನಾಲ್ಕು ಮತ್ತು ನಾಲ್ಕನೇ ಸ್ಥಾನವನ್ನು ಕಾಲೇಜಿನ ಐದು ಮಕ್ಕಳು ಸಂಪಾದಿಸಿದ್ದಾರೆ.
ಗಂಗಾವತಿ ಮತ್ತು ಶ್ರೀರಾಮನಗರದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 1457 ಮಕ್ಕಳು ಉತ್ತೀರ್ಣರಾಗಿ ಶೇ.೧೦೦ರಷ್ಟು ಫಲಿತಾಂಶ ನೀಡಿದ್ದಾರೆ. ಈ ಪೈಕಿ 1120 ಮಕ್ಕಳು ಅಗ್ರ ಶ್ರೇಯಾಂಕದಲ್ಲಿ, ಆರು ಮಕ್ಕಳು 600ಕ್ಕೆ 590ಅಂಕ, 156 ಮಕ್ಕಳು 580ಕ್ಕೂ ಹೆಚ್ಚು ಅಂಕ ಪಡೆದುಕೊಂಡು ಇಡೀ ಜಿಲ್ಲೆಯಲ್ಲಿ ಸಾಧನೆ ಮಾಡಿದ್ದಾರೆ.
ಸಂಗೀತಾ 592, ಅಶ್ವಿನಿ 591, ಪೂಜಾ, ಗಂಗಾಧರ ಸಾಲಿಮಠ, ಅಕ್ಷತಾ ಬಿ ಎಂಬ ಐದು ಮಕ್ಕಳು ತಲಾ 590 ಅಂಕ ಪಡೆದುಕೊಂಡಿದ್ದಾರೆ. ಕಾಲೇಜಿನ 158 ಮಕ್ಕಳು 580ಕ್ಕೂ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ ಮಕ್ಕಳು ಉತ್ತೀರ್ಣರಾಗಿದ್ದು ಶೇ.100ರಷ್ಟು ಫಲಿತಾಂಶ ಲಭಿಸಿದೆ.
ಅಲ್ಲದೇ ಇದೇ ಶಿಕ್ಷಣ ಸಂಸ್ಥೆಯ ವಾಣಿಜ್ಯ (ಕಾಮರ್ಸ್) ವಿಭಾಗದಲ್ಲಿ ಮಲ್ಲಿಕಾರ್ಜುನ ಶೆಡ್ಡಿ ಶೇ.97.8% (587), ಪೂವರ್ ತ್ವನಿ ಶೇ.97.5% (585) ಪೂರ್ಣಚಂದ್ರ ಶೇ.97.2% (583) ಅಂಕ ಗಳಿಸಿ ಕಾಲೇಜಿನ ಟಾಪರ್ ಆಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು ೩೭ ವಿದ್ಯಾರ್ಥಿಗಳಲ್ಲಿ ಶೇ.100ರಷ್ಟು ಫಲಿತಾಂಶ ಲಭಿಸಿದೆ.
ಒಂಭತ್ತು ಮಕ್ಕಳು ೯೫ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. 16 ಮಕ್ಕಳು 95ರಷ್ಟು, 12 ಮಕ್ಕಳು ಶೇ.85ರಷ್ಟು ಹಾಗೂ ಇಬ್ಬರು ಪ್ರಥಮ ಉತ್ತೀರ್ಣರಾಗಿದ್ದಾರೆ ಎಂದರು.
ನಿದೇರ್ಶಕಿ ನಳಿನಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಆಡಳಿತ ಮಂಡಳಿ ನಿರ್ದೇಕರುಗಳು ಹಾಗೂ ಪ್ರಾರ್ಚಾಯ ಉಮಾಶಂಕರ್, ಉಪನ್ಯಾಸಕ ಮಲ್ಲಿಕಾರ್ಜುನ, ಜಗನ್ನಾಥರಾವ್, ಶ್ರೀರಾಮನಗರ ಕಾಲೇಜ ಪ್ರಾಚಾರ್ಯ ಅಭಿಷೇಕ, ಉಪನ್ಯಾಸಕ ವೆಂಕಟಕೃಷ್ಣ, , ಚಂದ್ರಶೇಖರ್, ಕೃಷ್ಣಪ್ರಸಾದ್, ನಳಿನಿ, ಆದರ್ಶ, ವೆಂಕಟಪತಿರಾಜು, ಬನ್ನು, ಸುಬ್ಬಾರಾವ್ ಉಪಸ್ಥೀತರಿದ್ದರು.
