ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಭಾವನೆಬೆಳೆಸಿಕೊಳ್ಳಬೇಕು : ನವೀದ್
ಕರುನಾಡ ಬೆಳಗು ಸುದ್ದಿ
ಗಂಗಾವತಿ,24- ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಯಾವುದೇ ಮಾನಸಿಕ ಒತ್ತಡಗಳಿಗೆ ಮಣಿಯದೆ ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ ಪರೀಕ್ಷೆ ಬರೆಯಬೇಕು ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕ ಎಂ ಬದಿಯುದ್ದಿನ್ ನವೀಧ ಹೇಳಿದರು.
ನಗರದಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಕೊಪ್ಪಳದ ಫಿರ್ದೋಸ್ ಸಾಂಸ್ಕೃತಿಕ ಕ್ರೀಡಾ ತರಬೇತಿ ಸಂಸ್ಥೆ ವತಿಯಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಪರೀಕ್ಷಾ ಪೂರ್ವ ಕಾರ್ಯಗಾರ ದ ಉದ್ಘಾಟನೆ ಸಮಾರಂಭದಲ್ಲಿ ವಿಶೇಷ ಆಮಂತ್ರಿಕರಾಗಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದ ಪ್ರಥಮ ಬೋರ್ಡ್ ಪರೀಕ್ಷೆಯಲ್ಲಿ ಧೈರ್ಯದಿಂದ ಬರೆದು ಉತ್ತಮ ಸಾಧನೆ ಮಾಡಿ ಕಲಿಸಿದ ಗುರುಗಳಿಗೆ ಶಾಲೆಗೆ ಮತ್ತು ತಮ್ಮ ಪಾಲಕರ ಹೆಸರು ಗಳಿಸುವಂತಹ ಕೆಲಸ ಮಾಡಬೇಕು ಪರೀಕ್ಷೆ ಬರೆಯುವಂತಹ ಸಂದರ್ಭದಲ್ಲಿ ಯಾವುದೇ ಮಾನಸಿಕ ಒತ್ತಡಗಳಿಗೆ ಮಣಿಯದೆ ಉತ್ತಮ ರೀತಿಯಲ್ಲಿ ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ ಬರಿಯ ಬೇಕು ಪಠ್ಯಪುಸ್ತಕದ ಅಂಶಗಳನ್ನು ಓದಿ ವಿಸ್ತಾರವಾಗಿ ಬರೆಯಬೇಕು ಎಂದು ಬದಿಯು ದೀನ ನವೀಧ ಹೇಳಿದರು.
ಶಾಲೆಯ ಮುಖ್ಯ ಗುರುಗಳಾದ ಎಂಬಿ ಕೊಪ್ಪಳ ರವರು ಮಾತನಾಡಿ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಳ್ಳಬಾರದು ತರಬೇತಿಗಳ ಸದುಪಯೋಗವನ್ನು ಪಡೆದುಕೊಂಡು ಸತತ ಪರಿಶ್ರಮದಿಂದ ಜೀವನದಲ್ಲಿ ಸಾಧನೆ ಮಾಡಬಹುದು ಎಂದು ಹೇಳಿದರು,
ಸಮಾರಂಭದಲ್ಲಿ ಸಂಸ್ಥೆಯ ಖಜಾಂಚಿ ಮೊಹಮ್ಮದ್ ಏಜಾಜ, ಅಹಮದ್ ಸರ್ಕಾರಿ ಮುಸ್ಲಿಂ ನೌಕರರ ಸಂಘದ ಗಂಗಾವತಿ ತಾಲೂಕ ಅಧ್ಯಕ್ಷ ಖಾದ್ರಿ, ಸಾಹೇಬ್ ಸಂಸ್ಥೆಯ ಗಂಗಾವತಿಯ ಕಾರ್ಯದರ್ಶಿ ಶಫಿಕ ಅಹಮದ್, ಮೊಹಮ್ಮದ್ ಅಲಿ, ಅನೇಕರು ಪಾಲ್ಗೊಂಡಿದ್ದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಕಾರ್ಯಗಾರದಲ್ಲಿ ತರಬೇತಿ ನೀಡಿದ ಎಂ ಬದಿಯುದಿನ ಮತ್ತು ಸಂಸ್ಥೆಯ ಪದಾಧಿಕಾರಿಗಳಿಗೆ ಗಂಗಾವತಿಯ ಕಾರ್ಯದರ್ಶಿಯವರಿಗೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು.
