WhatsApp Image 2024-07-07 at 5.11.29 PM

ವಿದ್ಯಾರ್ಥಿಗಳ ಕಠಿಣ ಪರಿಶ್ರ ದಿಂದ ಯಶಸ್ಸು ಸಾಧ್ಯ : ರಮೇಶ ಸುರ್ವೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 7- ವಿದ್ಯಾರ್ಥಿಗಳು ಕಠಿಣ ಪರಿಶ್ರಮ ದಿಂದ ಯಶಸ್ಸು ಸಾಧ್ಯೆ. ನಿಮ್ಮ ಜೀವನದಲ್ಲಿ ಗುರಿ ಇರಬೇಕು ಹೆಚ್ಚು ವಿದ್ಯಾಬ್ಯಾಸದ ಗಮನಹರಿಸಬೇಕು ವಿದ್ಯಾರ್ಥಿಗಳು ಸೃಜನ ಶೀಲತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ವಿದ್ಯಾರ್ಥಿಗಳ ಜೀವನ ಸಾರ್ಥಕ ವೆಂದು ಚಲನ ಚಿತ್ರ ನಿರ್ದೇಶಕ ಮತ್ತು ಹಿರಿಯ ಪತ್ರಕರ್ತರಾದ ರಮೇಶ ಸುರ್ವೆ ಹೇಳಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಜೇಜ್ ಆವರಣದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಸರಕಾರಿ ಪದವಿ ಪೂರ್ವಕಾಲೇಜ್ ಹಾಗೂ 2024-25 ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎನ್ ಎಸ್ ಎಸ್ ಯೋಜನೆಯು ವಿದ್ಯಾರ್ಥಿಗಳಿಗೆ ಸಾಂಸ್ಥಿಕ ಕೌಶಲ್ಯಗಳು, ನಾಯಕತ್ವದ ಗುಣಗಳು ಮತ್ತು ಸಾಮಾಜಿಕ ಪ್ರಜ್ಞೆಯನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ನೀಡುತ್ತದೆ ವಿದ್ಯಾರ್ಥಿಗಳು ಸಮಯ ಪಾಲನೆ ಶಿಸ್ತು ಮತ್ತು ಓಳ್ಳೇಯ ಗುಣಗಳನ್ನು ಬೆಳಸಿಕೂಳ್ಳಬೇಕು ಮುಂದೆ ಗುರಿ ಇರಬೇಕು ಹಿಂದೆ ಗುರು ಇರುತ್ತಾನೆ.. ಎಂದು ಹೇಳಿದರು.

ನಿವೃತ ಉಪ ನಿರ್ದೇಶಕ ಶಂಕ್ರಪ್ಪ ಗಾಂಜಿ ಮಾತನಾಡಿ ಬಡತನ ಹಸಿವು ಅನುಭವಿಸಿದವರು ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆ, ಸಂಯಮ ರೂಢಿಸಿಕೊಳ್ಳಬೇಕು. ಮಾನಸಿಕ ಸ್ಥಿರತೆ ಮತ್ತು ವ್ಯಕ್ತಿತ್ವದ ಸರ್ವೋತೋಮುಖ ಪ್ರಗತಿಗೆ ಹಿರಿಯ ಮಾರ್ಗದರ್ಶನ ಪಡೆಯಬೇಕು. ಅದರಲ್ಲೂ ನಿಮ್ಮ ಪಾಲಕರ ಆಜ್ಞೆಯನ್ನು ತಂದೆ ತಾಯಿಗಳು ಮಕ್ಕಳ ಏಳಿಗೆಯನ್ನು ಬಯಸುತ್ತಾರೆ ಹೀಗಾಗಿ ಅವರ ಕಂಡ ಕನಸು ವಿದ್ಯಾರ್ಥಿಗಳು ಉತ್ತಮ ವಿದ್ಯಾಬ್ಯಾಸದ ಮಾಡಿ ಹೆತ್ತವರ ಕನಸು ನನಸು ಮಾಡವದರ ಜೊತೆಗೆ ಇಡೀ ರಾಜ್ಯಕ್ಕೆ ಕಿತಿ೯ ತರುವಂತರಾಗಬೇಕು. ಎಂದು ಹೇಳಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ನಡುವೆ ಸರಕಾರಿ ಶಾಲೆಗಳು ತಮ್ಮದೆಯಾದ ಗುಣ ಮಟ್ಟದ ಶಿಕ್ಷಣ ನೀಡುತಿದ್ದು ಪಾಲಕರು ಸರಕಾರಿ ಶಾಲಾ ಕಾಲೇಜ್ ಗಳಿಗೆ ದಾಖಲಿಸಿ ಸರಕಾರಿ ಶಾಲೆ ಕಾಲೇಜ್ ಉಳಿಸಲು ಮುಂದಾಗ ಬೇಕೆಂದು ಸಿದ್ದನಗೌಡ ಬನಪ್ಪಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾಜೀಕ ಹೋರಾಟಗಾರ ಸ. ಶರಣಪ್ಪ ಪಾಟೀಲ್,ಕರಮುಡಿ ಪ್ರಾಚಾರ್ಯರಾದ ಶರಣಪ್ಪ.ಬಿ ಬೇಲೇರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ. ಪಂ ಮಾಜಿ ಅಧ್ಯಕ್ಷರಾದ.ಭಾಗೀರಥಿ ಜೋಗಿನ ಜಯಶ್ರೀ ಅರಕೇರಿ.ಅಂದಪ್ಪ ಹೊಂಬಳ. ಶಂಕ್ರಪ್ಪ ಛಲವಾದಿ ,ಶಂಕರ ಕಲಬುರ್ಗಿ.ವೀರಯ್ಯ ಗಾಡ್ಗಿ. ಸೇರಿದಂತೆ. ಕಾಲೇಜಿನ ಪ್ರಾಂಶುಪಾಲರು. ಶಿಕ್ಷಕರು. ಶಿಕ್ಷಕಿಯರು. ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!