WhatsApp Image 2024-02-17 at 6.19.21 PM

ವೀ.ವಿ ಸಂಘದ ಚುನಾವಣೆ : ಪತ್ರಕರ್ತ ಮಹೇಂದ್ರ ಕುಮಾರ್ ನಾಮಪತ್ರ ಸಲ್ಲಿಕೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,18- ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಪತ್ರಕರ್ತ, ಭಾಷಾಂತರಕಾರ ಎಚ್.ಎಂ. ಮಹೇಂದ್ರ ಕುಮಾರ್ ಅವರು ಯುವಕವೃಂದದ ನಗರೇತರ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ.

ವೀರಶೈವ ವಿದ್ಯಾವರ್ಧಕ ಸಂಘದ ಚುನಾವಣಾ ಅಧಿಕಾರಿ ಎನ್.ಪಿ. ಲಿಂಗನಗೌಡ ಅವರು ನಾಮಪತ್ರ ಸ್ವೀಕರಿಸಿದ್ದಾರೆ.

ನಾಮಪತ್ರ ಸಲ್ಲಿಸಿ, ಸುದ್ದಿಗಾರರ ಜೊತೆ ಮಾತನಾಡಿದ ಪತ್ರಕರ್ತ ಎಚ್.ಎಂ. ಮಹೇಂದ್ರ ಕುಮಾರ್, ವೀರಶೈವ ವಿದ್ಯಾವರ್ಧಕ ಸಂಘಧ ಆಜೀವ ಸದಸ್ಯರು ಹೊಸಬರನ್ನು ಚುನಾಯಿಸುವ ಉತ್ಸಾಹದಲ್ಲಿದ್ದಾರೆ. ಯುವಕವೃಂದದ ನಗರೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನಾನು, ಶೈಕ್ಷಣಿಕ ಸುಧಾರಣೆ, ಉತ್ತಮ ಆಡಳಿತ ಮತ್ತು ಸಿಬ್ಬಂದಿಯಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿರುವೆ. ನನ್ನದು ಪ್ರಯತ್ನ. ಎಲ್ಲಾ ಆಜೀವ ಸದಸ್ಯರ ಬೆಂಬಲ ಸಿಗುವ ವಿಶ್ವಾಸವಿದೆ ಎಂದರು.

ಪತ್ರಕರ್ತರಾಗಿ, ಅನುವಾದಕರಾಗಿ 25 ವರ್ಷಗಳಿಂದ ಸಾರ್ವಜನಿಕ ಜೀವನ ನಡೆಸುತ್ತಿರುವ ಮಹೇಂದ್ರ ಕುಮಾರ್ ಅವರು, ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಲಿ ಸದಸ್ಯರಾಗಿ, ಶ್ರೀ ನಾಗೇಶ್ವರಸ್ವಾಮಿ ದೇವಸ್ಥಾನದ ಆಡಳಿತ ಮಂಡಲಿ ಮತ್ತು ಶೆಟ್ರ ಗುರು ಶಾಂತಪ್ಪ ಸಂಯುಕ್ತ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿ, ಜನತಾ ಬಜಾರ್‍ನ `ಪರಿಣಿತ ನಿರ್ದೇಶಕ’ರಾಗಿ, ವಿವಿಧ ಸಂಸ್ಥೆಗಳ ಸದಸ್ಯರಾಗಿ ಶಿಕ್ಷಣ ಮತ್ತು ವಿವಿಧ ಕ್ಷೇತ್ರಗಳಲ್ಲಿ ಕ್ರೀಯಾಶೀಲವಾಗಿ, ಸೃಜನಶೀಲತೆ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸಂರ್ಭದಲ್ಲಿ ಯುವಕವೃಂದದ ಕಲ್ಗುಡಿ ಮಂಜುನಾಥ್, ಕೇಣಿ ಬಸವರಾಜ್, ಜನತಾ ಬಜಾರ್ ಅಧ್ಯಕ್ಷ ಜಿ. ನೀಲಕಂಠ, ಜೆ. ಮಂಜುನಾಥ, ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶ್ ಮಠಂ, ಎಚ್.ಎಂ. ಲೋಕನಾಥ, ಸೂಗೂರು ಶೆಟ್ರು ಶ್ರಿಕಂಠ, ಎಂ. ವೀರಭದ್ರಯ್ಯ, ಎಚ್.ಎಂ. ಶಂಕರ್, ಶಿವ ರಮೇಶ್, ನಾಗರಾಜ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!