ಶರಣ ಕುಮಾರ ಬಂಡಿಗೆ ಕಲಾ ಕೌಸ್ತುಭ ಪ್ರಶಸ್ತಿ ಪ್ರಧಾನ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,14- ಶ್ರೀ ರಾಮಲಿಂಗೇಶ್ವರ ನಾಟ್ಯ ಸಂಘ ಹಾಗೂ ಸವಿಜೇನು ಸರ್ಕಲ್ ಯುವಟ್ಯೂಬ್ ತಂಡ ಚಳಗೇರಾ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 2024ನೇ ಸಾಲೀನ ರಂಗ ಕಲಾಕೌಸ್ತುಭ-2024 ಪ್ರಶಸ್ತಿ ಪ್ರಧಾನ ಜರುಗಿತು.
ರಂಗಭೂಮಿ ಕಲಾವಿದ ತಬಲಾಕ್ಷೇತ್ರದಲ್ಲಿ 3 ದಶಕಗಳಕ್ಕೂ ಹೆಚ್ಚು ಶ್ರಮಿಸುತ್ತಿದ್ದಾರೆ ವಿಶ್ವ ಸಾಹಿತ್ಯ ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಸ್ಮರಣೀಯ ಸೇವೆಗೈಯಿತ್ತಿರುವ ರಂಗಭೂಮಿ ದೊಡ್ಡನಾಟಕ ಕಂಪನಿಗಳಾದ ಪಿ.ಬಿ. ದುತ್ತುರಗಿ, ಚಿಂದೂಡಿ ಲೀಲಾ ಅವರ ನಾಟ್ಯ ಸಂಘ ಮತ್ತು ಗದಗಿನ ಶ್ರೇಷ್ಠ ನಾಟಕ ಕಂಪನಿಗಳಲ್ಲಿ ತಮ್ಮ ಸೇವೆಯನ್ನು ನೀಡಿ ರಂಗಭೂಮಿಯಲ್ಲಿ ತಮ್ಮದೇಯಾದ ಛಾಪೂ ಮೂಡಿಸಿದ ಬಂಡಿ ಗ್ರಾಮದ ಹಿರಿಯ ಕಲಾವಿದ ಶರಣ ಕುಮಾರ ಬಂಡಿಯವರ ಪ್ರತಿಭೆಯನ್ನು ಮೆಚ್ಚಿ ನಮ್ಮ ಸಂಘದಿಂದ “ರಂಗಕಲಾಕೌಸ್ತುಭ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತ್ತು ಎಂದು ಶ್ರೀ ರಾಮೇಲಿಂಗೇಶ್ವರ ನಾಟ್ಯ ಸಂಘದವರು ತಿಳಿಸಿದ್ದಾರೆ.
