ಶರಣ ಬಸವೇಶ್ವರ ಪುರಾಣ ಮಹಾ ಮಂಗಲೋತ್ಸವ ಮತ್ತು ಮಹಾರಥೋತ್ಸವ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,13- ತಾಲೂಕಿನ ಮಕ್ಕಳ್ಳಿ ಗ್ರಾಮದಲ್ಲಿ ಕಲಬುರಗಿ ಶ್ರೀ ಶರಣ ಬಸವೇಶ್ವರರ 18 ನೇ ವರ್ಷದ ಪುರಾಣ ಮಹಾ ಮಂಗಲೋತ್ಸವ ಹಾಗೂ7 ನೇ ವರ್ಷದ ಶ್ರೀ ಈಶ್ವರ ಶರಣ ಬಸವೇಶ್ವರ ಪಂಚಕಳಸದ ಮಹಾ ರಥೋತ್ಸವ ಜರುಗಿತು ಸಂದರ್ಭದಲ್ಲಿ ಭಾಜಾ ಭಜಂತ್ರಿ ಹಾಗೂ ನಂದಿಕೊಲು ಕುಣಿತ ದಿಂದ ಪ್ರಮುಖ ರಾಜ ಬೀದಿಯಲ್ಲಿ ಪಂಚಕಳಸದ ರಥೋತ್ಸವಕ್ಕೆ ಮಂಡಲಮರಿಗ್ರಾಮದಿಂದ ಹಗ್ಗ ಬರುವದು,ಹುಲೇಗುಡ್ಡ ಗ್ರಾಮದಿಂದ ನಂದಿಕೊಲು ಬರುವದು,ಸಾಲಭಾವಿ ಗ್ರಾಮದಿಂದ ತೇರಿನ ಕಳಸ ತರಲಾಗುವದು ನಂತರ ಸಾಯಂಕಾಲ
ಮಹಾ ರಥೋತ್ಸವ ವಿಜ್ರಂಭಣೆಯಿಂದ ಜರುಗಿತು.
ಇದಕ್ಕೂ ಮೊದಲು ಬೆಳಗ್ಗೆ ಶರಣ ಬಸವೇಶ್ವರ ಹಾಗೂ ಈಶ್ವರ ಮೂರ್ತಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಹಾ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಬೇಡಿಕೊಂಡ ಹರಕೆ, ದೀಡ್ ನಮಸ್ಕಾರ ಜವಳ ಹಾಕಿ ಸೇವೆ ಭಕ್ತರು ಅರಕೆ ಸಲ್ಲಿಸಿದರು. ನೈವೇದ್ಯ, ಕಾಯಿ ಕರ್ಪೂರ ಸೇವೆ ಮಾಡಿ. ಶರಣ ಬಸವೇಶ್ವರನ ದರ್ಶನ ಪಡೆದು ಭಕ್ತರು ಪುನೀತರಾದರು.
ಪುರಾಣ ಪ್ರವಚನಕಾರರಾಗಿ ಉದ್ಯಾಳದ ಶಶಿಧರಯ್ಯ ಸ್ವಾಮಿ ಹಿರೇಮಠ ಮಾಹದೇವಪ್ಪ ಚೆನ್ನಳ್ಳಿ ಹಾಗೂ ಗವಾಯಿಗಳಾದ ಹಿರೇಮನ್ನಾಪುರದ ವೀರಬಸಯ್ಯ ಹಿರೇಮಠ ಅಮರಯ್ಯ ಸ್ವಾಮಿ ಹಿರೇಮಠ ರವರಿಂದ ಸತತ 15 ದಿನಗಳಕಾಲ ಪುರಾಣ ಸಾಗಿಬಂದು ಮಹಾ ಮಂಗಲಗೊಂಡಿತು ಸಾಮೂಹಿಕ ವಿವಾಹ ಉದ್ದೇಶಿಸಿ ಶ್ರೀಧರ ಮುರಡಿ ಮಠದ ಬಸವಲಿಂಗೇಶ್ವರ ಮಹಾ ಸ್ವಾಮಿಗಳು .ಜಿಗೇರಿಯ ಗುರುಸಿದ್ದೇಶ್ವರ ಶಿವಚಾರ್ಯ ಮಹಾ ಸ್ವಾಮಿಗಳು, ಇಟಗಿಯ ಡಾ.ಶಿವಶಾಂತವೀರ ಶಿವಚಾರ್ಯ ಮಹಾಸ್ವಾಮಿ ಭೂ ಕೈಲಾಸ ಮಠ ಇಟಗಿ, ಮಕ್ಕಳ್ಳಿಯ ಶಿವಾನಂದ ಮಹಾ ಸ್ವಾಮಿ ಗಳು ಹಾಗೂ ಅಣ್ಣಿಗೇರಿತ ಬಸಪ್ಪ ಪಲ್ಲೇದ, ಜಾತ್ರೆಯಲ್ಲಿ ಭಾಗವಹಿಸಿದರು ಗ್ರಾಮದ.ಅರ್ಚಕರಾದ ಮಕ್ಕಳ್ಳಿಯ ಗವಿಸಿದ್ದಯ್ಯ ಹಿರೇಮಠ, ತರಲಕಟ್ಟಿಯ ಗವಿಸಿದ್ದಯ್ಯ ಹಿರೇಮಠ,ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸಂಜೆ ಸ್ಥಳಿಯ ಕಲಾವಿದರಿಂದ “ವಿಷದ ಹುತ್ತಕ್ಕೆ ಹಾಲೆರೆದ ಮುತ್ತೈದೆ” ಅರ್ಥಾತ್ ಸಿಡಿದೆದ್ದ ಸಹೋದರರು ಎಂಬ ಸುಂದರ ಸಾಮಾಜೀಕ ನಾಟಕ ಪ್ರದರ್ಶನ ಗೊಂಡಿತು.
