ಶಸ್ತç ಚಿಕಿತ್ಸೆ ಮೂಲಕ ಗರ್ಭಾಶಯದಿಂದ ಹುಟ್ಟಿದ ಗಡ್ಡೆ ಹೊರ ತಗೆದ ವೈದ್ಯರು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 16- ಹೊಟ್ಟೆನೋವಿನಿಂದಾಗಿ ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಅಧೀನದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕಿಮ್ಸ್ ವೈದ್ಯರ ತಂಡದಿ0ದ ಶಸ್ತçಚಿಕಿತ್ಸೆ ಮೂಲಕ ಗರ್ಭಾಶಯದಿಂದ ಹುಟ್ಟಿದ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.
ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಅಧೀನದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜೂನ್ 3ರಂದು ಕೊಪ್ಪಳ ತಾಲ್ಲೂಕಿನ ಬಿಸರಳ್ಳಿ ಗ್ರಾಮದ 45 ವರ್ಷದ ಮಮತಾಜ ಗಂಡ ಹುಸೇನಸಾಬ (ಹೆಸರು ಬದಲಾಯಿಸಿದೆ) ಎಂಬುವವರು ಹೊಟ್ಟೆನೋವಿನ ತೊಂದರೆಯಿ0ದ ದಾಖಲಾಗಿದ್ದರು. ಇವರನ್ನು ಪರೀಕ್ಷಿಸಿದ ತಜ್ಞ ವೈದ್ಯಾರಾದ ಪ್ರಸೂತಿ ಮತ್ತು ಸ್ತಿçà ರೋಗ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಹೆಚ್.ನಾರಾಯಣಿ ಅವರು ನಡೆಸಿದ ತಪಾಸಣೆ ಹಾಗೂ ಅಲ್ಟಾ ಸೌಂಡ, ಸಿ.ಟಿ.ಸ್ಕಾö್ಯನ್, ರಕ್ತ ಪರೀಕ್ಷೆಗಳಲ್ಲಿ ಗರ್ಭಾಶಯದಿಂದ ಹುಟ್ಟಿದ ದೊಡ್ಡದಾದ ಗಡ್ಡೆ ಇರುವುದು ತಿಳಿದುಬಂದಿರುತ್ತದೆ. ರೋಗ ನಿರ್ಣಯ ಮಾಡಿ ಯುಟಿರಸ್ ಇರುವುದೆಂದು ಶಸ್ತçಚಿಕಿತ್ಸೆ ಮಾಡಿ ಗಡ್ಡೆಯನ್ನು ತೆಗೆಯುವ ನಿರ್ಧಾರ ಕೈಗೊಂಡರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಡಾ ಬಿ.ಹೆಚ್.ನಾರಾಯಣಿ ಅವರ ನೇತೃತ್ವದ ತಂಡವು ಜೂ.11ರಂದು ಕ್ಲಿಷ್ಟವಾದ ಶಸ್ತçಚಿಕಿತ್ಸೆಯನ್ನು ಕೈಗೊಂಡು 4.5 ಕೆ.ಜಿ ತೂಕದ ಗರ್ಭಾಶಯದಿಂದ ಹುಟ್ಟಿದ ಗಡ್ಡೆಯನ್ನು 3 ಗಂಟೆಗಳ ಕಾಲ ಶಸ್ತçಚಿಕಿತ್ಸೆ ಮಾಡಿ ರೋಗಿಗೆ ಯಾವ ತೊಂದರೆ ಆಗದಂತೆ ಹೊರ ತೆಗೆದಿದ್ದಾರೆ. ಸಾಮಾನ್ಯವಾಗಿ ಅಂಡಾಶಯದಿAದ ಹುಟ್ಟುವ ಗಡ್ಡೆಗಳು ಸುಮಾರು 8 ರಿಂದ 10 ಕೆ.ಜಿಗಳ ವರೆಗೆ ತೂಕವನ್ನು ಹೊಂದಿರುತ್ತದೆ. ಗರ್ಭಾಶಯದಿಂದ ಹುಟ್ಟುವ ಗಡ್ಡೆಗಳು ಸಾಮಾನ್ಯವಾಗಿ 500 ರಿಂದ 1000 ಗ್ರಾಂ. ತೂಕವನ್ನು ಹೊಂದಿರುತ್ತದೆ. ಆದರೆ ಈ ಪ್ರಕರಣದಲ್ಲಿ ಬಿಸರಳ್ಳಿ ಗ್ರಾಮದ ರೋಗಿಯಲ್ಲಿ ತೆಗೆದ ಗರ್ಭಾಶಯದಿಂದ ಹುಟ್ಟಿದ ಗಡ್ಡೆ 4.5 ಕೆ.ಜಿ (4500 ಗ್ರಾಮ) ತೂಕವನ್ನು ಹೊಂದಿದ್ದು, ಅತೀ ವಿರಳವಾದ ಗಡ್ಡೆಯಾಗಿದೆ. ಸುತ್ತಮುತ್ತಲಿನ ದೊಡ್ಡ ದೊಡ್ಡ ಆಸ್ಪತ್ರೆಗಳ ತಜ್ಞವೈದ್ಯರುಗಳು ಶಸ್ತçಚಿಕಿತ್ಸೆಯನ್ನು ಮಾಡಲು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರೂ ಇಂತಹ ಕಠಿಣವಾದ ಶಸ್ತçಚಿಕಿತ್ಸೆಯನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸವಾಲಾಗಿ ಸ್ವೀಕರಿಸಿ ಕ್ಲಿಷ್ಟವಾದ ಶಸ್ತçಚಿಕಿತ್ಸೆ ಮಾಡಿ ಮಮತಾಜ್ಬೀ ಅವರಿಗೆ ಮರು ಜೀವದಾನವನ್ನು ಕೊಟ್ಟಿರುತ್ತಾರೆ.
ಶಸ್ತçಚಿಕಿತ್ಸೆಯ ನೇತೃತ್ವವನ್ನು ಪ್ರಸೂತಿ ಮತ್ತು ಸ್ತಿçà ರೋಗ ವಿಭಾಗದ ಮುಖ್ಯಸ್ಥರಾದ ಡಾ ಬಿ.ಹೆಚ್.ನಾರಾಯಣಿ ರವರು ವಹಿಸಿದ್ದರು. ಇವರಿಗೆ ಡಾ.ಧನಲಕ್ಷಿ ಕೆ.ಆರ್., ಡಾ.ಸೀಮಾ ಬಿ.ಎನ್. ಹಾಗೂ ಡಾ. ರಾಜೇಶ ಬಿ.ಎನ್ ಅವರು ಸಹಕರಿಸಿದರು. ಅರವಳಿಕೆ ವಿಭಾಗದ ಡಾ.ಗೋಪಾಲ್ ಗೋಟುರು ಅವರು ಅರವಳಿಕೆಯನ್ನು ಮಾಡಿ ಶಸ್ತçಚಿಕಿತ್ಸೆ ಉದ್ದಕ್ಕೂ ರೋಗಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು. ಇಂತಹ ಕ್ಲಿಷ್ಟಕರವಾದ ಶಸ್ತçಚಿಕಿತ್ಸೆಯನ್ನು ನೆರವೇರಿಸಿ ಮರು ಜೀವದಾನ ಕೊಟ್ಟ ವೈದ್ಯರನ್ನು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ವಿಜಯನಾಥ ಇಟಗಿ, ಜಿಲ್ಲಾ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ವೇಣುಗೋಪಾಲ, ಜಿಲ್ಲಾ ಬೋಧಕ ಆಸ್ಪತ್ರೆಯ ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ಸುಶೀಲಕುಮಾರ, ಜಿಲ್ಲಾ ಬೋಧಕ ಆಸ್ಪತ್ರೆಯ ಹಿರಿಯ ಸ್ಥಾನಿಕ ವೈದ್ಯರಾದ ಡಾ ಎಸ್.ಸಿ.ಹಿರೇಮಠ ಅವರು ಅಭಿನಂದಿಸಿದ್ದಾರೆ.
