ಶಾಸಕರಿಂದ ಸಿಸಿ ರಸ್ತೆ ಚರಂಡಿ ಕಾಮಗಾರಿಗೆ ಭೂಮಿ ಪೂಜೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ- ತಾಲೂಕು ಶನವಾಸಪುರ ಗ್ರಾಮದಲ್ಲಿ ಎಸ್ ಟಿ ಪಿ ಅನುದಾನದ ಅಡಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಬಿ ಎಂ ನಾಗರಾಜ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಚೊಕ್ಕ ಬಸವನಗೌಡ, ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗ ರುದ್ರಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷೆ ಈರಮ್ಮ, ಉಪಾಧ್ಯಕ್ಷೆ ಗೌರಮ್ಮ, ಈರಪ್ಪ, ಗ್ರಾಮ ಪಂಚಾಯತಿ ಎಲ್ಲಾ ಸದಸ್ಯರು, ಕಾಂಗ್ರೆಸ್ ಮುಖಂಡರಾದ ದೊಡ್ಡ ಏರಿಯಪ್ಪ, ಮೋಹನ್ ಗೌಡ, ಶರಣಪ್ಪ, ಅಯ್ಯಪ್ಪ, ಶಾನವಾಸಪುರ ಗ್ರಾಮದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು, ಜಿಲ್ಲಾ ಪಂಚಾಯತ್ ಏ ಇ ಇ ತಿಪ್ಪೇಸ್ವಾಮಿ ಜೆ ಇ ಕಾಂತರಾಜ್ ಗ್ರಾಮ ಪಂಚಾಯತ್ ಪಿಡಿಓ ವಿರೇಶ ಅವರು ಇದ್ದರು.
