19gvt1

ಶಿಕ್ಷಣಕ್ಕೆ ಆದ್ಯತೆ : ಸ್ನಾತಕೋತ್ತರ ಪದವಿಯ ತಾತ್ಕಾಲಿಕ ಕೇಂದ್ರ ಉದ್ಘಾಟನೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 20- ಪ್ರತಿಯೋಂದು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸದುಪಯೋಗ ಪಡೆದುಕೊಳ್ಳುವ ದೃಷ್ಠಿಯಿಂದ ಕೊಪ್ಪಳ ವಿಶ್ವವಿದ್ಯಾಲಯದ ವತಿಯಿಂದ ಸ್ನಾತಕೋತ್ತರ ಕೇಂದ್ರವನ್ನು ಆರಂಭ ಮಾಡಲಾಗಿದೆ ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.

ಅವರು ನಗರದ ನ್ಯಾಯಾಲಯದ ಪಕ್ಕದಲ್ಲಿ ಇರುವ ಹಳೆಯ ತಹಸೀಲ್ದಾರ ಕಟ್ಟಡದಲ್ಲಿ ಸ್ನಾತಕೋತ್ತರ ಪದವಿಯ ತಾತ್ಕಾಲಿಕ ಕೇಂದ್ರವನ್ನು ಉದ್ಘಾಟಸಿ ಮಾತನಾಡಿ ವಿಶ್ವವಿದ್ಯಾಲಯ ನೂತನಕ್ಕೆ ಅನುದಾನ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ವಿವಿ ಕಟ್ಟಡ ನಿಮಾ೯ಣ ಮಾಡಲು ಅನುದಾನ ನೀಡಲು ಮನವಿ ಮಾಡಲಾಗುವುದು.

ಕೊಪ್ಪಳ ವಿಶ್ವವಿದ್ಯಾಲಯದ ನೂತನ ಸ್ವಂತ ಕಟ್ಟಡ ಕಿನ್ನಾಳ ಗ್ರಾಮದಲ್ಲಿ ಇರುವ ೧೮೬ ಎಕರೆ ಸರಕಾರಿ ಜಾಗದಲ್ಲಿ ನಿಮಾ೯ಣ ಮಾಡಲಾಗುವುದು.

ಪ್ರಥಮ ವಷ೯ವಾಗಿರುವ ಕಾರಣ ಎಂಎ ಕನ್ನಡ, ಎಂಎ ಇಂಗ್ಲೀಷ ಹಾಗೂ ಎಂಕಾಂ ಕೋಸ೯ಗಳನ್ನು ಆರಂಭ ಮಾಡಲಾಗಿದೆ. ಪ್ರತಿ ಕೋಸ೯ಗೆ ೬೦ ವಿದ್ಯಾಥಿ೯ಗಳನ್ನು ಪ್ರವೇಶ ಪಡೆದುಕೊಳ್ಳಲಾಗಿದೆ.
ಇರುವ ಕೋಸ೯ಗಳ ಜೊತೆಗೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕೋಸ೯ಗಳ ಜೊತೆಗೆ ಪ್ರವಾಸೋದ್ಯಮ, ಪ್ರದಶ೯ನ ಕಲೆ ಕೋಸ೯ಗಳನ್ನು ಆರಂಭ ಮಾಡಲಾಗುವುದು.

Leave a Reply

Your email address will not be published. Required fields are marked *

error: Content is protected !!