WhatsApp Image 2024-02-14 at 5.43.02 PM

ಶ್ರದ್ದಾ-ಭಕ್ತಿ ವಿಶಾಲ ಮನೋಭಾವದಿಂದ ಎಲ್ಲರೂ ಕೂಡಿ ಆಚರಣೆ ಮಾಡುವ ಜಾತ್ರೆ ಶ್ಯ್ಲಾಘನೀಯ : ಶ್ರೀ ಬಸವಲಿಂಗೇಶ್ವರ ಶ್ರೀಗಳು

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,14- ಗ್ರಾಮದಲ್ಲಿ ಎಲ್ಲರೂ ಒಂದಾಗಿ ಯಾವುದೇ ಜಾತಿ-ಭೇದವಿಲ್ಲದೆ ಶ್ರದ್ದಾ-ಭಕ್ತಿಯ ವಿಶಾಲ ಮನೋಭಾವದಿಂದ ಎಲ್ಲರೂ ಕೂಡಿ ಆಚರಣೆ ಮಾಡುವ ಜಾತ್ರಾ ಮಹೋತ್ಸವು ಮನುಷ್ಯನ ಮನಸ್ಸು ಪರಿಶುದ್ಧಗೊಳಿಸುತ್ತದೆ ಮತ್ತು ಪ್ರತಿಯೂಬ್ಬರು ಹೆಚ್ಚು ಹೆಚ್ಚು ಸಮಾಜಮುಖಿ ಕೆಲಸಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳಬೇಕು ಮತ್ತು ಧಾನ, ಧರ್ಮ ಪರೋಪಕಾರ ಮಾಡುವದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಮನುಷ್ಯನಿಗೆ ಸಿರಿ ಬಂದಾಗ ಕರೆದು ಧಾನವ ಮಾಡು ಎಂದು ಯಲಬುರ್ಗಾದ ಧರಮುರುಡಿ ಹಿರೇಮಠದ ಶ್ರೀ ಷ.ಬ್ರ. ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ದಮ್ಮೂರ ಗ್ರಾಮದಲ್ಲಿ ಶ್ರೀ ಭಿಮಾಂಬಿಕೆದೇವಿ ಜಾತ್ರೆಯ ಮಹೋತ್ಸವ ಮತ್ತು ಸಾಮೂಹಿಕ ವಿವಾಹಗಳು ಮತ್ತು 35ನೇ ವರ್ಷದ ಪುರಾಣ ಮಹಾಮಂಗಲೋತ್ಸವ ಧರ್ಮಸಭೆ ಚಂದ್ರಾಂಬಿಕೆದೇವಿಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಶ್ರೀ ಭೀಮಾಂಬಿಕಾದೇವಿ ಮಹಾದ್ವಾರದ ಉದ್ಘಾಟನೆ.

358 ನೇ ಶಿವಾನುಭವ ಗೋಷ್ಠಿ ಮತ್ತು ಮಹಾ ರಥೋತ್ಸವ ಹಾಗು ಧಾರ್ಮಿಕ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂತಹ ಮಠ ಮಾನ್ಯಗಳಲ್ಲಿ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹ ಮಾಡಿಕೊಳ್ಳುವದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿದಂತೆ ಆಗುತ್ತದೆ ಹಿಂದಿನ ಕಾಲದಲ್ಲಿ ಮದುವೆ ಮಾಡಬೇಕಾದರೆ ಮನೆಯ ಹಿರಿಯರು ಸಾಲ ಸೂಲ ಮಾಡಿ ಮದುವೆ ಮಾಡುತ್ತಿದ್ದರು ಆ ಸಾಲ ತೀರಿಸಬೇಕಾದರೆ ಹಲವಾರು ವರ್ಷಗಳ ಕಾಲ ದುಡಿದು ಸಾಲ ತೀರಿಸಬೇಕಾಗುತ್ತಿದೆ ಈಗ ಎಲ್ಲಾ ಮಠಗಳಲ್ಲಿ & ಜಾತ್ರಾ ಮಹೋತ್ಸವಗಳಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತವೆ ಇಲ್ಲಿ ಬಡವ, ಶ್ರೀಮಂತ ಅಂತಾ ಬೇಧ ಭಾವವಿಲ್ಲದೆ ಎಲ್ಲರಿಗೂ ವಿವಿಧ ಜಿಲ್ಲೆಯಿಂದ ಬಂದು ಪರಮ ಪೊಜ್ಯರ ಆಶೀರ್ವಾದ ನವ ದಂಪತಿಗಳಿಗೆ ಸಿಗುತ್ತದೆ ಇವತ್ತಿನ ದಿವಸ ಮದುವೆಯಾದ ಹೂಸ ಜೀವನಕ್ಕೆ ಕಾಲ ಇಡುವ ನವ ದಂಪತಿಗಳು ಕುಟುಂಬದ ಅತ್ತೆ ಮಾವ ತಂದೆ ತಾಯಿ ಮತ್ತು ಹಿರಿಯರಿಗೆ ಗೌರವದಿಂದ ನಡೆದುಕೊಳ್ಳಬೇಕು ಜೊತೆಗೆ ಸತಿ-ಪತಿಗಳು ಒಬ್ಬನೂಬ್ಬರು ಪರಸ್ಪರ ಅಥ೯ಮಾಡಿಕೂಂಡು ಸಂಸಾರ ಸಾಗಿಸಬೇಕು ಎಂದರು.

ಜೀವನದಲ್ಲಿ ಕಷ್ಟ-ಸುಖ ಎನೆಬುಂದರ ಸವಾಲಾಗಿ ಸ್ವೀಕರಿಸಿ ತಾಳ್ಮೆಯಿಂದ ಆದ೯ಶ ದಂಪತಿಗಳಾಗಿ ಬಾಳಬೇಕು ಜಾತ್ಯಾತೀತ, ಸಮಾಜಿಕ, ಧಾರ್ಮಿಕ ಪೂಜೆ. ಭಕ್ತಿಯ ಕಾಯ೯ಕ್ರಮಗಳಲ್ಲಿ ಭಾಗವಹಿಸುವದರಿಂದ ಇಗೀನ ಒತ್ತಡದ ಜೀವನದಲ್ಲಿ ಮಾನಸಿಕ, ಜಿಗುಪ್ಸೆ, ದುರಾಶೆ, ದುಶ್ಚಟಗಳು ದೂರವಾಗವು ಧಾರ್ಮಿಕ ಸಾಂಸ್ಕೃತಿಕ ಸಮಾಜಮುಖಿ ಕೆಲಸಗಳಲ್ಲಿ ಮನುಷ್ಯನು ತಾನು ಭಾಗವಹಿಸುವರಿಂದ ಮನಸ್ಸು ಪರಿಶುದ್ಧವಾಗುತ್ತದೆ ಮತ್ತು ಬಡವರು ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಾಲ, ಸೂಲ ಮಾಡಿ ತಮ್ಮ ಮಕ್ಕಳಿಗೆ ಮದುವೆ ಮಾಡಬಾರದು ಎಂದು ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಪ್ರತಿ ಮಠ ಮಾನ್ಯಗಳಲ್ಲಿ ಮತ್ತು ಜಾತ್ರಾ ಮಹೋತ್ಸವಗಳಲ್ಲಿ ಸಾಮೂಹಿಕ ವಿವಾಹ ನಡೆಯು ತ್ತವೆ ಸಮಾಜಿಕ ಭದ್ರತೆ ಸಾಮರಸ್ಯ ಭಾವ ಬೆಳದು ಸಂಬಧಗಳು ಗಟ್ಟಿಯಾಗುತ್ತವೆ.ಇಂತಹ ಕಾಯ೯ಕ್ರಮಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನೆಡಯಲ್ಲಿ ಧಾರ್ಮಿಕ ಸಾಂಸ್ಕೃತಿಕ ಧರ್ಮ ವಿಚಾರ ಸಮಾಜಿಕ ಐಕ್ಯತೆಯನ್ನು ಬೆಳಸಿಬೇಕು. ಎಂದು ಶ್ರೀ ಷ. ಬ್ರ. ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳುಗಳು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾಯ೯ಕ್ರಮದಲ್ಲಿ ದಮ್ಮೂರ ಮಠದ ಒಡೆಯರಾದ ನಾಗಲಿಂಗಪ್ಪಜ್ಜ ಧಮ೯ರಮಠ, ಹನುಮಂತಪ್ಪಜ್ಜ ಧಮ೯ರಮಠ ಇವರು ಸಾನಿಧ್ಯವಹಿಸಿದರು. ವೀರನಗೌಡ ಪೋಲೀಸ್ ಪಾಟೀಲ್, ಅರವಿಂದ ಗೌಡ ಪೋಲಿಸ್ ಪಾಟೀಲ್, ರಾಜಪ್ಪ ಕೆ ಹಗ್ಗೇದಾಳ, ವೀರಪ್ಪ ರಾವಣಕಿ, ರಸೂಲಸಾಬ ಹಿರೇಮನಿ,ಇಮಾಮಸಾಬ ವಾಲಿಕಾರ, ಶರಣಪ್ಪ ಗೇದ್ದಗೇರಿ, ಡಿ ಮೌನೇಶ ಬಡಗೇರ, ಶರಣಪ್ಪ ಭೊನಕೋಪ, ಶರಣಗೌಡ ದ್ಯಾಮನಗೌಡ್ರ, ಸೋಮಣ್ಣ ರಾಥೋಡ್, ಕಮಲಪ್ಪ ನಾಯಕ, ಹರಿಕುಮಾರ, ಗ್ರಾಮ ಪಂಚಾಯತ್ ಪಿಡಿಒ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!