WhatsApp Image 2024-02-18 at 6.30.32 PM

ವಜ್ರಬಂಡಿಯಲ್ಲಿ ಶ್ರೀ ಮಧ್ವ ನವಮಿ ಆಚರಣೆ, ಪಲ್ಲಕ್ಕಿ ಉತ್ಸವ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,18- ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಭಾನುವಾರ ಶ್ರೀ ಮಧ್ವ ನವಮಿಯನ್ನು ಅತ್ಯಂತ ವಿಜಂಭಣೆಯಿಂದ ಆಚರಿಸಲಾಯಿತು.

ಗ್ರಾಮದ ಶ್ರೀ ಮಧ್ವರಾಯರ ಮಂದಿರದಲ್ಲಿ ಬೆಳಿಗ್ಗೆ ಶ್ರೀ ಹನುಮೇಶ್ ಆಚಾರ ಜೋಶಿ ಹಾಗೂ ಪಂ.ಶ್ರೀನಿವಾಸ್ ಆಚಾರ ಜೋಶಿ ಬೆಂಗಳೂರು ಅವರ ನೇತೃತ್ವದಲ್ಲಿ ಶ್ರೀ ಹರಿವಾಯುಸ್ತುತಿ ಪುನಶ್ಚರಣ, ಶ್ರೀ ವೆಂಕಟೇಶ ಸ್ತೋತ್ರ ಪಠಣ, ಶ್ರೀ ಮಧ್ವರಾಯರಿಗೆ ವಿಶೇಷ ಪೂಜೆ, ಅಲಂಕಾರ, ಮಹಾ ನೈವೇದ್ಯ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಸಂಜೆ ಪಲ್ಲಕ್ಕಿ ಉತ್ಸವ ವಿಜೃಂಭಣೆಯಂದ ನಡೆಯಿತು.

ಇದಕ್ಕೂ ಮುನ್ನ ಬೆಳಿಗ್ಗೆ ಗ್ರಾಮದ ಶ್ರೀ ಹನುಮಂತ ದೇವರ ದೇವಾಲಯದಲ್ಲಿ ಪವಮಾನ ಹೋಮ, ಶ್ರೀ ಹನುಮಂತ ದೇವರಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ, ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು.

ಗ್ರಾಮದ ಭಜನಾ ಮಂಡಳಿ ಸದಸ್ಯರಿಂದ ಸಾಮೂಹಿಕ ಭಜನೆ ಮಾಡಲಾಯಿತು. ನಾನಾ ಕಡೆಯಿಂದ ಆಗಮಿಸಿದ ನೂರಾರು ಭಕ್ತರು, ದೇವರ ದರ್ಶನ ಪಡೆದು, ಭಕ್ತಿ ಸಮರ್ಪಿಸಿದರು. ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ವಾದಿರಾಜ ಆಚಾರ ಜೋಶಿ, ಬಂಡೆರಾವ್ ದೇಸಾಯಿ, ನಾರಾಯಣ ಆಚಾರ ಜೋಶಿ, ರಾಘವೇಂದ್ರ ದೇಸಾಯಿ, ಕಿಟ್ಟಣ್ಣ ಹೊಸಪೇಟೆ, ವೆಂಕಟೇಶ ದಿಗ್ಗಾವಿ, ಅನಂತ ಜೋಶಿ, ಅಡವಾಚಾರ್ ಜೋಶಿ, ವಿಶ್ವನಾಥ್ ದೇಸಾಯಿ, ಹನುಮೇಶ್ ಮೂಜುಮದಾರ್, ಗುರುರಾಜ್ ದೇಸಾಯಿ ಸೇರಿದಂತೆ ಇತರರು ಉಪಸ್ಥತರಿದ್ದರು

Leave a Reply

Your email address will not be published. Required fields are marked *

error: Content is protected !!