ಸಂತೋಷಕ್ಕಾಗಿ ಪ್ರತಿನಿತ್ಯ ಯೋಗ ಮಾಡಿ : ಇಒ ಸಂತೋಷ ಬಿರಾದರ್ ಪಾಟೀಲ್
ಕರುನಾಡ ಬೆಳಗು ಸುದ್ದಿ
ಕುಕನೂರ, 21- ತಾಲೂಕಿನ ಭಾನಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ತಳಬಾಳ ಗ್ರಾಮದ ಅಮೃತ ಸರೋವರಗಳ ದಡದ ಮೇಲೆ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.
ಕಾರ್ಯಕ್ರಮವನ್ನು ಕುಕನೂರ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದರ್ ಪಟೀಲ್ ಸರ್ ಸಸಿಗೆ ನಿರೆರೆಯುವುದರ ಮೂಲಕ ಉಧ್ಘಾಟಿಸಿದರು.
ನಂತರ ಮಾತನಾಡಿದ ಅವರು ಯೋಗವು ಅಂತ್ಯಂತ ಪುರಾತನವಾಗಿದ್ದು, ಹಲವಾರು ಜ್ಞಾನಿಗಳು ಅದರ ಮಹತ್ವವನ್ನು ತಿಳಿಸಿದ್ದಾರೆ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಯೋಗ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರಿಂದ ವಿಶ್ವಾದ್ಯಂತ ಇದರ ಪ್ರಯೋಜನವನ್ನು ಎಲ್ಲರೂ ಪಡೆಯುತ್ತಿದ್ದೇವೆ. ಭಾರತೀಯರಾದ ನಾವು ಹೆಮ್ಮೆ ಪಡಬೇಕಾದ ವಿಷಯ, ಅಲ್ಲದೇ ಮಹಿಳಾ ಸಬಲೀಕರಣವನ್ನು ಮಾಡುವ ನಿಟ್ಟಿನಲ್ಲಿ ಸರ್ಕಾರದ ಹಲವಾರು ಗ್ಯಾರಂಟಿ ಯೋಜನೆಗಳನ್ನು ಮತ್ತು ಗ್ರಾಮ ಪಂಚಾಯತಿಯಿಂದ ಸಂಜೀವಿನಿ ಜಿ.ಪಿ.ಎಲ್.ಎಫ್ ಸಂಘದ ಮೂಲಕ ಲಕ್ಷಾಂತರ ಹಣವನ್ನು ನೀಡಿ ಮಹಿಳೆಯರನ್ನು ಸಬಲೀಕರಣ ಮಾಡಲಾಗುತ್ತಿದೆ. ಮಹಿಳೆಯರು, ಗ್ರಾಮಸ್ಥರು ಎಲ್ಲರೂ ಸಹ ಪ್ರತಿನಿತ್ಯ ಯೋಗ ಮಾಡಿ ಆರೋಗ್ಯ ವಾಗಿ ಇರಿ ಎಂದು ಹೇಳಿದರು.
ನಂತರ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಮೇಶ್ ತಿಮ್ಮಾರಡ್ಡಿ ರವರು ಯೋಗದ ವಿವಿಧ ಭಂಗಿಗಳು, ಸೂರ್ಯ ನಮಸ್ಕಾರ, ಕಪಾಲಭಾತಿ, ಪ್ರಾಣಾಯಾಮ ಸೇರಿದದಂತೆ ವಿವಿದಿ ಆಸನಗಳನ್ನು ಮಕ್ಕಳಿಗೆ ಹೇಳಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಾದ ದೇವಿಂದ್ರಪ್ಪ ಕಮ್ಮಾರ, ಮಲ್ಲಣ್ಣ ಸಾದರ್, ಗ್ರಾಮಸ್ಥರಾದ ಮರ್ದಾನ್ ಸಾಬ್, ಶರಣಯ್ಯ ಕಲ್ಗುಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಸವಿತಾ ಪಾಟೀಲ್, ಪ್ರತಿಭಾ, ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಶಾಲಾ ಶಿಕ್ಷಕರು, ಶಾಲಾ ಮಕ್ಕಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದರು.
