ಸಂಭ್ರಮದಿಂದ ಜರುಗಿದ ಈಶ್ವರ ಸ್ವಾಮಿ ರಥೋತ್ಸವ
ಕರುನಾಡ ಬೆಳಗು ಸುದ್ದಿ
ವಿಜಯನಗರ,10- ತಾಲೂಕಿನ ಕಮಲಾಪುರ ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಗರದಲ್ಲಿ ಈಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಸಂಜೆ ಅಲಂಕಾರಗೊಂಡ ರಥ ಸಕಲ ಮಂಗಳವಾದ್ಯದೊಂದಿಗೆ ಮಹಂಕಾಳಪ್ಪ ಮನೆಯಿಂದ ದೇವಸ್ಥಾನದವರಿಗೆ ನಿಶಾನೆ ತಂದು ಹರಾಜು ಕೂಗಿದರು. ಜಾಂಡದ ಹರಾಜು 10,600 ಕ್ಕೆ ಮಹಂಕಾಳಪ್ಪ ಕುಟುಂಬದವರಿಗೆ ನೀಡಲಾಯಿತು.
ರಥವು ದೇವಸ್ಥಾನದ ಬಳಿಯಿಂದ ಕೆಇಬಿ ಬಳಿ ಇರುವ ಬಸವಣ್ಣ ಕಟ್ಟೆಯವರಿಗೆ ಸಾಗಿ ಮರಳಿ ದೇವಸ್ಥಾನಕ್ಕೆ ತಲುಪಿತು. ಐತಿಹಾಸಿಕ ಹಿನ್ನೆಲೆ ಇರುವ ಈಶ್ವರ ದೇವರ ರತೋತ್ಸವಕ್ಕೆ ಅಂಬೇಡ್ಕರ್ ನಗರದ ಹಿರಿಯರು ಚಾಲನೆ ನೀಡಿದರು.
ರಥವನ್ನು ನೂರಾರು ಬಾಲ ಮಕ್ಕಳು ಓಂ ನಮಃ ಶಿವಾಯ ಎಂದು ಜಯಘೋಷ ಕೂಗುತ್ತಾ ಹರ್ಷೋದ್ದಾರದಿಂದ ಎಳೆಯುವುದು ಇಲ್ಲಿ ವಿಶೇಷವಾಗಿ ಕಂಡುಬಂತು.
ಈ ಜಾತ್ರೆಗೆ ಸುತ್ತಮುತ್ತಲಿನ ಊರುಗಳಿಂದ ಬಂದಿದ್ದ ಜನ ಶಿವನ ಹರಕೆ ತೀರಿಸುವ ಮೂಲಕ ರಥಕ್ಕೆ ಹೂವು-ಹಣ್ಣು, ಬಾಳೆಕಾಯಿ ಎಸೆಯುವುದರ ಮೂಲಕ ಭಕ್ತಿ ಭಾವತೋರಿದರು.
ವಿಶೇಷತೆ : ಇಲ್ಲಿನ ಈಶ್ವರ ದೇವರು ವೆಶೇಷ ಹಿತಿಹಾಸ ಹೊಂದಿದೆ ದೇವಸ್ಥಾನ ಹಂಪೆಯ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮಡಿಕೆ, ಕುಡಿಕೆ ಗಡಿಗೆಗಳನ್ನು ತಯಾರಿಸುತ್ತಿದ್ದ ಸ್ಥಳವಾಗಿತ್ತು, ವಿಜಯನಗರ ಸಾಮ್ರಾಜ್ಯ ಪತನವಾದಾಗ ಈ ಕುಂಬಾರ ಗುಡಿ ಹಾಳು ಬಿದ್ದು ಹೋಗಿರಬಹುದು ಎಂದು ಹೇಳಲಾಗುತ್ತಿದೆ. ಸುಮಾರು 50 ವರ್ಷಗಳ ಹಿಂದೆ ಇಲ್ಲಿನ ಕಾಕುಬಾಳದ ಊರಿನಿಂದ ಬಂದಂತ ಸಾಧು ಹನುಮಂತಪ್ಪ ಪಾಳು ಬಿದ್ದಿದ್ದ ಕುಂಬಾರ ಗುಡಿಯನ್ನು ನೋಡಿ ಜೀರ್ಣೋರ್ಧಾರ ಮಾಡಲು ಸ್ಥಳೀಯ ಶಿವಭಕ್ತರಾದ ಬಸಪ್ಪನವರನ್ನು ಕಂಡು ಗುಡಿಯ ತುಂಬಾ ರಾಶಿ ರಾಶಿ ಕಪ್ಪು ಮಣ್ಣು ತುಂಬಿ ಕಂಬಳಿ ಹುಳಗಳು, ಬಾವಲಿಗಳು ಈ ಗುಡಿಯಲ್ಲಿ ವಾಸಿಸುತ್ತಿದ್ದವು,
ಈ ಸ್ಥಳವನ್ನು ಸ್ವಚ್ಛ ಮಾಡಲು ಹಾಗೂ ಈಶ್ವರ ಲಿಂಗವನ್ನು ಪ್ರತಿಷ್ಠಾಪನೆ ಮಾಡಲು ಸಾಧು ಹನುಮವಧೂತ ಬಸಪ್ಪನವರಿಗೆ ನೀಡಿದ ಮಾರ್ಗದರ್ಶನದ ಹಿನ್ನೆಲೆಯಲ್ಲಿ ವಠಾರದ ಹಿರಿಯರ ಸಹಾಯದಿಂದ ಬಸಪ್ಪನವರು ಕುಂಬಾರ ಗುಡಿಯು ಈಗಿನ ಈಶ್ವರ ಗುಡಿಯಾಗಿ ಪರಿವರ್ತನೆಯಾಗಿ ಪ್ರಸಿದ್ಧಿಯಾಗಲು ಕಾರಣರಾದರು ಮತ್ತು ಬಸವಣ್ಣ ಎಂದೇ ಪ್ರಸಿದ್ಧರಾದರು ಎಂದು ಶಿವಭಕ್ತ ಬಸಪ್ಪ ಇವರ ಮಗಳಾದ ಸರ್ಕಾರಿ ವೈದ್ಯಾಧಿಕಾರಿ ಡಾ.ಕಮಲಮ್ಮ ಶ್ರೀ ಈಶ್ವರ ದೇವಸ್ಥಾನದ ಸಮಗ್ರ ಪರಿಚಯದ ಪುಸ್ತಕ ಬಿಡುಗಡೆ ಮಾಡಿ ಮಾಧ್ಯಮದವರ ಜೊತೆಗೆ ಮಾತನಾಡಿದರು.
ಈ ಕುರಿತು ಮುಖಂಡರಾದ ಸೋಮಶೇಖರ ಮಾತನಾಡಿ 2003ರಲ್ಲಿ ಅಂಬಣ್ಣನವರ ನೇತೃತ್ವದಲ್ಲಿ ಈ ರಥವನ್ನು ತಯಾರಿಸಲು ಅದೆಷ್ಟೇ ಸಂಕಷ್ಟ ಬಂದರು ಎದೆಗುಂದದೆ ಕಾಲೋನಿಯ ಯುವಕರ ಸಹಾಯದಿಂದ ರಥವನ್ನು ತಯಾರಿಸುವ ಸಿದ್ಧತೆಯಲ್ಲಿ ಅಂಬಣ್ಣನವರ ಪಾತ್ರ ಮತ್ತು ಜವಾಬ್ದಾರಿ ಅತ್ಯಂತ ಪ್ರಮುಖವಾದದ್ದು ಆದ್ದರಿಂದ ಪ್ರತಿವರ್ಷ ಶಿವರಾತ್ರಿಯಲ್ಲಿ ಅವರನ್ನು ಸ್ಮರಿಸುತ್ತೇವೆ ಮತ್ತು ಅಂಬೇಡ್ಕರ್ ನಗರದಲ್ಲಿ ಅವರು ಮಾಡಿರುವ ಕೆಲಸಗಳು ಇಂದಿಗೂ ಎಲ್ಲರನ್ನೂ ಮಾತನಾಡುವಂತೆ ಮಾಡಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ಮಲ್ಲೇಶಪ್ಪ, ಮಧುಗುಣಿಕೆ ವೆಂಕಟೇಶ, ಕಾಡಗಪ್ಪ, ಶೇಖರ್, ಬಾವಿಮಲ್ಲೇಶಪ್ಪ, ಹನುಮಂತಪ್ಪ, ಹಾಗೂ ಪುರಸಭೆ ಸದಸ್ಯ ಹೆಚ್ ಗೋಪಾಲಕೃಷ್ಣ, ವೀರೇಶ್ ಕೊಟ್ಟಲಾ, ಕನ್ನೇಶ್ವರ, ಪಿ ರವಿಕುಮಾರ, ಮುಖಂಡರು ಹುಲುಗಪ್ಪ, ಶಿವರಾಮ, ಹೆಚ್ ಆನಂದ, ಮಹಂಕಾಳಿ ವೆಂಕಟೇಶ್, ಎ ಚಿದಾನಂದ ಇತರರು ಇದ್ದರು.
