WhatsApp Image 2024-02-13 at 6.57.41 PM

ಸಂವಿಧಾನ ಜಾಗೃತಿ ಜಾಥಾ ಜಿಲ್ಲೆಗೆ 11ನೇ ರ‍್ಯಾಂಕ್ : ಜಿಲ್ಲಾಧಿಕಾರಿ ಎಂ ಎಸ್ ದಿವಾಕರ

ಕರುನಾಡ ಬೆಳಗು ಸುದ್ದಿ

ವಿಜಯನಗರ,13- ಭಾರತ ದೇಶವು 75ನೇ ಗಣರಾಜ್ಯೋತ್ಸವನ್ನು ಜನವರಿ 26 2024 ರಂದು ಆಚರಿಸುತ್ತಿದ್ದರ ಭಾಗವಾಗಿ ಕರ್ನಾಟಕ ರಾಜ್ಯ ಸರ್ಕಾರವು ಸಂವಿಧಾನದ ಆಶಯಗಳನ್ನು ಈಡೇರಿಸುವ, ಹಾಗೂ ಸಮ ಸಮಾಜವನ್ನು ನಿರ್ಮಿಸುವ ದ್ಯೇಯೋದ್ದೇಶವನ್ನು ಇಟ್ಟುಕೊಂಡು “ಸಂವಿಧಾನ ಜಾಗೃತಿ ಜಾಥಾ” ಎಂಬ ರಾಷ್ಟ್ರೀಯ ಮಟ್ಟದ ಸಮಾವೇಶವನ್ನು ಆಯೋಜಿಸಿದೆ. ಈ ಜಾಥಾ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದರಿಂದ ವಿಜಯನಗರ ಜಿಲ್ಲೆಗೆ ರಾಜ್ಯದಲ್ಲಿ 11ನೇ ರ‍್ಯಾಂಕ್ ಲಭಿಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ದಿವಾಕರ ತಿಳಿಸಿದರು.

ಜಿಲ್ಲಾಡಳಿತ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಾಥಾ ಸಂಬಂಧ ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಗೆ ರೂ.25.00 ಲಕ್ಷಗಳನ್ನು ಬಿಡುಗಡೆಗೊಳಿಸಿರುತ್ತಾರೆ. ಇದರಲ್ಲಿ ಕ್ವೀಜ್, ಪ್ರಭಂದ, ಭಾಷಣ ಇತರೆ ಪ್ರಚಾರಕ್ಕಾಗಿ ಪ್ರತೀ ಗ್ರಾ.ಪಂ.ಗೆ 10,000ಸಾವಿರ,ನೀಡಲಾಗಿದೆ. LED Mounted Display ಮೂಲಕ ಸಂವಿದಾನದ ಮಹತ್ವ, ರಾಜ್ಯನಿರ್ದೇಶಕ ತತ್ವಗಳು. ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯಕ್ಕೆ ಸಂಬಂಧಿಸಿದಂತೆ ಡಾ.ಬಿ.ಆರ್ ಅಂಬೇಡ್ಕರ್ ರವರ ಪರಿಕಲ್ಪನೆ, ಬಸವಣ್ಣನವರ ವಚನಗಳು ಮತ್ತು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸಾರ್ವಜನಿಕರಿಗೆ ಮುಖ್ಯವಾಗಿ ಯುವಜನರಿಗೆ ದಿ:26-01-2024 ರಿಂದ 23-02-2024 ರ ವರೆಗೆ ಅರಿವು ಮೂಡಿಸಲು ಆದೇಶಿಸಲಾಗಿತ್ತು.

ಅದರಂತೆ ಸ್ಥಬ್ದಚಿತ್ರ ಹಾಗೂ LED ವಾಹನವನ್ನು ತಯಾರಿಸಿ ದಿನಾಂಕ:26-01-2024 ರಂದು ಗಣರಾಜ್ಯೋತಸ್ವ ನಿಮಿತ್ಯ ಸನ್ಮಾನ್ಯ ಶ್ರೀ ಬಿ.ಜೆಡ್.ಜಮೀರ್ ಅಹಮ್ಮದ್ ಖಾನ್ ಸಚಿವರು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಪ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಜಯನಗರ ವಿದಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹೆಚ್.ಆರ್.ಗವಿಯಪ್ಪ ರವರಿಂದ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮ ಉದ್ಘಾಟನೆ ಹಾಗೂ ಸ್ಥಬ್ಧಚಿತ್ರ(Tableau)ವು ಈಗಾಗಲೇ ಜಿಲ್ಲೆಯ 137 ಗ್ರಾಮ ಪಂಚಾಯತ್ ಹಾಗೂ 08 ನಗರಾಡಳಿತ ಪ್ರದೇಶಗಳಲ್ಲಿ ಸಂಚರಿಸುವಂತೆ ರೂಟ್ ಮ್ಯಾಪ್ ನೊಂದಿಗೆ ಚಾಲನೆ ನೀಡಲಾಗಿರುತ್ತದೆ.

ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕಾಧಿಕಾರಿಗಳು ತಾಲ್ಲೂಕು ಪಂಚಾಯತ್ ರವರನ್ನು “ಸಂವಿಧಾನ ಜಾಗೃತಿ ಜಾಥಾ’ದ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿರುತ್ತದೆ.

ಈಗಾಗಲೇ ಹೊಸಪೇಟೆ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡು ನಗರದಾದ್ಯಂತ ಜಾಥವು ಸಂಚರಿಸಿ ದಿ:26-01-2024 ರಂದು ಕೂಡ್ಲಿಗಿ ತಾಲ್ಲೂಕಿಗೆ ಪ್ರವೇಶಗೊಂಡು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶ್ರೀನಿವಾಸ್ ಎನ್.ಟಿ ರವರು ಜಾಥಾವನ್ನು ಬರಮಾಡಿಕೊಂಡಿರುತ್ತಾರೆ.

ಕೂಡ್ಲಿಗಿ ತಾಲ್ಲೂಕಿನ 25 ಗ್ರಾಮ ಪಂಚಾಯತಿಗಳಿಗೆ ಜಾಥಾವು ಸರಿಸುಮಾರು 12 ಸೈಕಲ್ ಜಾಥಾ, 08 ಮೊಟಾರ್ ಬೈಕ್, 05 ಹೀಲಿಯಂ ಬಲೂನ್ಸ್, ಹಾಗೂ ಡೊಳ್ಳು, ಕಹಳೆ, ನಂದಿಕೋಲು ಕುಣಿತ, ತಮಟೆ ಮುಂತಾದ ಕಲಾತಂಡಗಳೊಂದಿಗೆ ಸಂವಿಧಾನ ಪೀಠಿಕೆಯ 50,000 ಹಸ್ತಪ್ರತಿಗಳನ್ನು ತಾಲ್ಲೂಕಿನ ಸಾರ್ವಜನಿಕರಿಗೆ ವಿತರಣೆ ಮಾಡಲಾಗಿರುತ್ತದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ವೇದಿಕೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸಂಘ- ಸಂಸ್ಥೆಗಳ ಮುಖಂಡರು, ಶಾಲಾ ಮಕ್ಕಳಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ದಿ:30-01-2024 ರಂದು ಪೂರ್ಣಗೊಳಿಸಿ ಹೊಸಪೇಟೆ ತಾಲ್ಲೂಕಿಗೆ ಪ್ರವೇಶಗೊಂಡಿರುತ್ತದೆ.

ದಿ:31-01-2024 ರಂದು ಹೊಸಪೇಟೆ ತಾಲ್ಲೂಕಿಗೆ ಪ್ರವೇಶಗೊಂಡು ತಾಲ್ಲೂಕಿನ 14 ಗ್ರಾಮ ಪಂಚಾಯತಿಗಳಿಗೆ ಹಾಗೂ 02 ಪಟ್ಟಣ ಪಂಚಾಯತಿಗಳಲ್ಲಿ ಜಾಥಾವು ಸರಿಸುಮಾರು 08 ಸೈಕಲ್ ರ್ಯಾಲಿ. 06 ಮೊಟಾರ್ ಬೈಕ್ ರ್ಯಾಲಿ. 05 ಹೀಲಿಯಂ ಬಲೂನ್ಸ್, 02 ಬಂಡ್ಯಾಲಿ, ಟ್ರ್ಯಾಕ್ಟರ್ ಯಾಲಿ, Candle March ಹಾಗೂ ಡೊಳ್ಳು, ಕಹಳೆ, ನಂದಿಕೋಲು ಕುಣಿತ, ತಮಟೆ, ತಾಷಾರಾಂ ಡೋಲು ಹಾಗೂ ಮುಂತಾದ ಕಲಾತಂಡಗಳೊಂದಿಗೆ ಸಂವಿಧಾನ ಪೀಠಿಕೆಯ 28,000 ಹಸ್ತಪ್ರತಿಗಳನ್ನು ತಾಲ್ಲೂಕಿನ ಸಾರ್ವಜನಿಕರಿಗೆ ವಿತರಣೆ ಮಾಡಲಾಗಿರುತ್ತದೆ.

ಪ್ರತಿ ಗ್ರಾಮ ಪಂಚಾಯತಿಯಲ್ಲಿ ವೇದಿಕೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸಂಘ-ಸಂಸ್ಥೆಗಳ ಮುಖಂಡರು, ಶಾಲಾ ಮಕ್ಕಳಿಂದ ನಾಟಕ, ಹಾಗೂ ಪ್ರಭಂದ ಮತ್ತು ಚರ್ಚಾಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ದಿ:03-02-2024 ರಂದು ಪೂರ್ಣಗೊಳಿಸಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿಗೆ ಪ್ರವೆಶಗೊಂಡಿರುತ್ತದೆ.

ಸಂವಿಧಾನ ಜಾಗೃತಿ ಜಾಥಾದಲ್ಲಿ ಹಮ್ಮಿಕೊಳ್ಳಲಾದ ರ್ಯಾಲಿ,ಕಾರ್ಯಕ್ರಮಗಳಲ್ಲಿನ ಛಾಯಾಚಿತ್ರ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಾದ Twitter-@ddswdvijayanagara, Facebook-DDswd vijayanagara, Youtube-ddswd vijayanagara, Instagram- ddswdvijayanagara, Whatsapp ಗಳಲ್ಲಿ ಅಪ್ಲೋಡ್ ಮಾಡಲಾಗಿರುತ್ತದೆ. ಈ ಸಧ್ಯ ಜಾಥವು ದಿ:04-02-2024 ರಿಂದ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಸಂಚರಿಸುತ್ತಲಿರುತ್ತದೆ.

ಸಂವಿದಾನ ಜಾಗೃತಿ ಜಾಥವು ಇಲ್ಲಿಯವರೆಗೂ ಒಟ್ಟು 51 ಗ್ರಾಮ ಪಂಚಾಯತ್ ಹಾಗೂ 03 ನಗರಾಡಳಿತ ಪ್ರದೇಶದಲ್ಲಿ ಸಂಚರಿಸಿದ್ದು, ರೂಟ್ ಮ್ಯಾಪ್ ನ ಶೇ.38% ರಷ್ಟು ಜಾಥವು ಪೂರ್ಣಗೊಳಿಸಿರುತ್ತದೆ. ಹಗರಿಬೊಮ್ಮನಹಳ್ಳಿ ನಂತರ ಹಡಗಲಿ, ಹರಪನಹಳ್ಳಿ ನಂತರ ಕೊಟ್ಟೂರು ತಾಲ್ಲೂಕಿನಲ್ಲಿ ಸಂಚರಿಸುವುದು ಬಾಕಿ ಇರುತ್ತದೆ. ಕಾರಣ ತಾಲ್ಲೂಕಿನ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಜನರು ಹಾಗೂ ಎಲ್ಲಾ ಸಮುದಾಯದ ಸಂಘ-ಸಂಸ್ಥೆಗಳ ಮುಖಂಡರುಗಳು ಸಂವಿಧಾನದ ಮಹತ್ವವನ್ನು ಅರಿತುಕೊಳ್ಳುವಂತೆ ಈ ಮೂಲಕ ಕೋರುತ್ತಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ “ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ ವತಿಯಿಂದ ಕೋರುತ್ತೇನೆ ಎಂದು ಮನವಿ ಮಾಡಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 48 ಬೈಕ್ ರ್ಯಾಲಿ 37 ಮೋಟರ್ 17, 25 ಬಂಡಿ, 18 ಟ್ರ್ಯಾಕ್ಟರ್, ಕ್ಯಾಂಡಲ್ 29, 1 ಲಕ್ಷ ಕಲಾ ತಂಡಗಳು ಈ ಜಾಥಾದಲ್ಲಿ ಭಾಗಿಯಾಗಿರುತ್ತವೆ. ಇಲ್ಲಿವರೆಗೂ ಜಿಲ್ಲೆಯಲ್ಲಿ 2.28 ಲಕ್ಷ ಶಾಲಾ ಮಕ್ಕಳು ಶಾಲೆಗಳಲ್ಲಿ ಪ್ರತಿ ದಿನ ಸಂವಿಧಾನ ಪೀಠಿಕೆಯನ್ನು ಓದುತ್ತಿದ್ದಾರೆ. “ಸಂವಿಧಾನ ಜಾಗೃತಿ ಜಾಥಾ” ವು ಜಿಲ್ಲೆಯಲ್ಲಿ ಇದುವರೆಗೂ 1300 ಕಿಲೋಮೀಟರ್ ಕ್ರಾಮಿಸಿದೆ. ಕೊನೆಯದಿನ ದಿ:24,25 /02/ 2024ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಸಮಾವೇಶವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾಪಂಚಾಯತ್ ಸಿಇಒ ಸದಾಶಿವ ಪ್ರಭು, ಸಮಾಜಕಲ್ಯಾಣ ಇಲಾಖೆ ಉಪ ನಿರ್ದೇಶಕ ಹೆಚ್ ವಿ ಮಂಜುನಾಥ ಇದ್ದರು.

Leave a Reply

Your email address will not be published. Required fields are marked *

error: Content is protected !!